

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲಬುರಗಿಯ ಉತ್ತರ ವಲಯದಲ್ಲಿ ಜರುಗಿದ ವಲಯ ಮಟ್ಟದ ಕ್ರೀಡಕೂಟದಲ್ಲಿ ನಗರದ ಆಳಂದ ರಸ್ತೆಯಲ್ಲಿರುವ ಶೆಟ್ಟಿ ಸಂಗಪ್ಪಾ ಮೆಮೊರಿಯಲ್ ಶಾಲೆಯ ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳು ಪಾಲ್ಗೊಂಡು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ಧಾರೆ.
ಹೈಸ್ಕೂಲ್ ಮಟ್ಟದಲ್ಲಿ ಖೋ ಖೋದಲ್ಲಿ ಮಲ್ಲಿಕಾರ್ಜುನ ನಾಯಕನಾಗಿರುವ ಬಾಲಕರ ತಂಡ ಪ್ರಥಮ ಸ್ಥಾನ, ಆದಿತ್ಯನಾಥ ನಾಯಕತ್ವ ಬಾಲಕರ ಕಬ್ಬಡಿ ತಂಡ ಪ್ರಥಮ ಸ್ಥಾನ. ಪ್ರಾಥಮಿಕ ವಿಭಾಗದಲ್ಲಿ ೭ನೇ ತರಗತಿಯ ಬಾಲಕರ ಹಾಗೂ ಬಾಲಕಿಯರ ತಂಡಗು ಪ್ರಥಮ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯಗುರುಗಳಾದ ಸುನೀತಾ ಗೋಳಾ ತಿಳಿಸಿದ್ದಾರೆ.
೧೦೦ಮೀ ಓಟ ಮತ್ತು ಉದ್ದ ಜಿಗಿತದಲ್ಲಿ ಭರತ ಬಿರಾದಾರ, ೪೦೦ ಮೀಟರ್‌ರಿಯಲ್ಲಿ ಸುಬ್ರಮಣ್ಯ.ಎ.ಎಸ್, ಕಾರ್ತಿಕ, ಅಪ್ಪಾಸಾಬ ಸಮರ್ಥ ಅವರ ತಂಡ ಪ್ರಥಮ ಸ್ಥಾನ. ಗುಂಡು ಎಸೆತದಲ್ಲಿ ಶಮೀಮï ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿಯ ಗಿರಿಜಾಶಂಕರ ಶೆಟ್ಟಿ, ಸುಜಾತಾ ಗಿರಿಜಾಶಂಕರ ಶೆಟ್ಟಿ, ಮುಖ್ಯರು ಸುನೀತಾ ಗೋಳಾ, ದೈಹಿಕ ಶಿಕ್ಷಕರಾದ ಅನೀಲï ಎಂ, ಮಂಜುಳಾ.ಕೆ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.