ಕುರಿ, ಮೇಕೆ ಸಾಕಣೆ ಲಾಭದಾಯಕ

sheep (1)
ಆನಂದಪುರ ಸಮೀಪದ ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲಿ ಆಯೋಜಿಸಿದ್ದ ಕುರಿ ಮತ್ತು ಮೇಕೆ ಸಾಕಣೆ ತರಬೇತಿಯಲ್ಲಿ ಭಾಗವಹಿಸಿದ್ದ ರೈತರು, ಶಿಬಿರಾರ್ಥಿಗಳು.
Published on

ಆನಂದಪುರ: ವೈಜ್ಞಾನಿಕವಾಗಿ ಕುರಿ ಮತ್ತು ಮೇಕೆ ಸಾಕಣೆ ಮಾಡುವುದರಿಂದ ಉತ್ತಮ ಲಾಭ ಪಡೆಯಬಹುದು ಎಂದು ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಪ್ರಕಾಶ್ ನಡೂರ್ ಹೇಳಿದರು.

ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲಿ ಇರುವಕ್ಕಿ, ನಾವಿಕ್ ಕೃಷಿ ನವೋದ್ಯಮ ಪೋಷಣ ಕೇಂದ್ರ, ಬೆಂಗಳೂರು ರಾಷ್ಟ್ರೀಯ ಪಶು ರೋಗ ಶಂಕುಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆ , ರೈತ ತರಬೇತಿ ಸಂಸ್ಥೆ, ಇರುವಕ್ಕಿ ವಿಸ್ತರಣಾ ನಿರ್ದೇಶನಾಲಯ ಆಶ್ರಯದಲ್ಲಿ ಆಯೋಜಿಸಿದ್ದ ಕುರಿ ಮತ್ತು ಮೇಕೆ ಸಾಕಣೆಯಲ್ಲಿ ಉದ್ಯಮಶೀಲತೆ ಶಿಬಿರ ಉದ್ಘಾಟಿಸಿ ಮಾತನಾಡಿ,

ಕುರಿ ಮತ್ತು ಮೇಕೆ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದೆ. ಉತ್ತಮ ತಳಿಗಳನ್ನು ಆಯ್ಕೆ ಮಾಡಿಕೊಂಡು, ಸರಿಯಾದ ಸಮಯಕ್ಕೆ ಲಸಿಕೆ ನೀಡಿ ಹಾಗೂ ಮಾರುಕಟ್ಟೆ ರೂಪಿಸಿಕೊಳ್ಳಬೇಕು. ಈ ಮೂಲಕ ಹೆಚ್ಚಿನ ಲಾಭ ಪಡೆಯಬಹುದು ಎಂದರು.

ವಿವಿಯ ವಿಸ್ತರಣಾ ನಿರ್ದೇಶಕರಾದ ಡಾ. ಕೆ.ಟಿ.ಗುರುಮೂರ್ತಿ ಮಾತನಾಡಿ, ಕುರಿ ಮತ್ತು ಮೇಕೆ ಸಾಕಣೆ ಕುರಿಗಳ ಆಯ್ಕೆ, ಮೇವಿನ ನಿರ್ವಹಣೆ, ಶೆಡ್ ನಿರ್ಮಾಣ, ಸರಿಯಾದ ಸಮಯಕ್ಕೆ ಲಸಿಕೆ ಹಾಕಿಸುವುದರಿಂದ ಉದ್ದಿಮೆದಾರರು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ದಿವ್ಯಾ, ವಿವಿಯ ಸಹವಿಸ್ತರಣಾ ನಿರ್ದೇಶಕರಾದ ಡಾ. ಬಿ.ಸಿ.ಹನುಮಂತ ಸ್ವಾಮಿ, ರೈತರ ತರಬೇತಿ ಸಂಸ್ಥೆ ಮುಖ್ಯಸ್ಥ ಡಾ. ಎಂ.ಅಶೋಕ್ ಉಪಸ್ಥಿತರಿದ್ದರು. ರೈತ ತರಬೇತಿ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರು, ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net