

ಗುಜರಾತ್: ಮದುವೆಯಾದ ನಾಲ್ಕೇ ದಿನಗಳಲ್ಲಿ ನವವಿವಾಹಿತೆ, ಪತಿಯನ್ನು ಕೊಂದ(Killed) ಘಟನೆ ಇಲ್ಲಿನ ಗಾಂಧಿನಗರದಲ್ಲಿ ಶನಿವಾರ ನಡೆದಿದೆ.
ಅಹಮದಾಬಾದ್ ನಿವಾಸಿ ಬಾವಿಕ್ ಕೊಲೆಯಾದ ವ್ಯಕ್ತಿ. ಬಾವಿಕ್ ಗಾಂಧಿನಗರದ ಪಾಯಲ್ ಎಂಬಾಕೆಯನ್ನು ನಾಲ್ಕು ದಿನಗಳಿಂದೆ ಮದುವೆಯಾಗಿದ್ದನು. ಶನಿವಾರ ಮೂವರು ವ್ಯಕ್ತಿಗಳು ಅವರನ್ನು ಅಪಹರಿಸಿ ಕೊಂದಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಪಾಯಲ್ ಮದುವೆಗೂ ಮುನ್ನ ತನ್ನ ಸಹೋದರ ಸಂಬಂಧಿಯೊಬ್ಬ ಕಲ್ಪೇಶ್ನನ್ನು ಪ್ರೀತಿಸುತ್ತಿದ್ದಳು. ಇವನ ಜತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
'' ಶನಿವಾರ ಬಾವಿಕ್ ಪತ್ನಿ ಪಾಯಲ್ ಅನ್ನು ಕರೆ ತರಲು (ವಧುವಿನ ತಂದೆ) ಪಾಲಕರ ಮನೆಗೆ ಹೋಗಿದ್ದರು. ಮನೆಗೆ ತಲುಪದ ಮಗನ ಬಗ್ಗೆ ಬಾವಿಕ್ ತಂದೆ ಪಾಯಲ್ ಪಾಲಕರಿಗೆ ಕರೆ ಮಾಡಿದ್ದರು. ಬಾವಿಕ್ ಮನೆಗೆ ಬಾರದ ಹಿನ್ನೆಲೆ ಪಾಲಕರೇ ನೆರವಾಗಿ ಪಾಯಲ್ ಮನೆಗೆ ಬಂದು ವಿಚಾರಿಸಿದ್ದಾರೆ. ಬಳಿಕ ಮಗನ ಹುಟುಕಾಟ ಆರಂಭಿಸಿದ್ದಾರೆ. ಬಾವಿಕ್ ಅಪಹರಣವಾಗಿರುವುದು ಸ್ಥಳೀಯರ ತಿಳಿದುಕೊಂಡಿದ್ದಾರೆ. ನಂತರ ಮಗನ ಅಪಹರದ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸಿದ್ದಾರೆ''.
'ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು, ''ಪಾಯಲ್ ಮನೆಗೆ ಕರೆ ಮಾಡಿದ್ದಾರೆ. ಬಳಿಕ ಪಾಯಲ್ ಅನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಮೇಲೆ ಕೃತ್ಯದ ಬಹಿರಂಗಗೊಂಡಿದೆ. ಕೊಲೆಗೆ ಸಂಚು ಬಗ್ಗೆ ಎಲ್ಲಾ ಮಾಹಿತಿ ಪೊಲೀಸರ ಮುಂದೆ ಬಾಯ್ ಬಿಟ್ಟಿದ್ದಾಳೆ'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಯಲ್ ವಶಕ್ಕೆ ಪಡೆದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ಗಳಡಿ ಕೊಲೆ, ಕೊಲೆಗೆ ಸಂಚು ಮತ್ತು ಅಪಹರಣ ಪ್ರಕರಣವನ್ನು ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ,(ಏಜೆನ್ಸೀಸ್).