ಅಟ್ಲೀ-ಅಲ್ಲು ಅರ್ಜುನ್ ಕಾಂಬಿನೇಷನ್ ಚಿತ್ರಕ್ಕೆ ಈ ಸ್ಟಾರ್​ ನಟಿಯೇ ಹೀರೋಯಿನ್​!? | Allu Arjun

ವಿಜಯವಾಣಿ - 2025-04-10T102405.032
Published on

Allu Arjun: ಟಾಲಿವುಡ್​ನ ಸ್ಟೈಲಿಶ್ ಸ್ಟಾರ್​, ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಅಭಿನಯಿಸಲಿರುವ ಬಹುನಿರೀಕ್ಷಿತ ಮುಂಬರುವ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹೆಚ್ಚಿದೆ. ಸ್ಟಾರ್​ ನಿರ್ದೇಶಕ ಅಟ್ಲಿ ಕುಮಾರ್​ ಅವರ ಮುಂಬರುವ ಬಿಗ್ ಪ್ರಾಜೆಕ್ಟ್​ಗೆ ಅಲ್ಲು ಅರ್ಜುನ್​ ಕೈಜೋಡಿಸಿದ್ದಾರೆ ಎಂಬ ಸಂಗತಿ ಸದ್ಯ ತೆಲುಗು ಅಂಗಳದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಈ ಹಿಂದೆಯೇ ಅಲ್ಲು ಅರ್ಜುನ್ ಮತ್ತು ಅಟ್ಲಿ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಇವರಿಬ್ಬರ ಕಾಂಬಿನೇಷನ್​​ನಲ್ಲಿ ದೊಡ್ಡ ಸಿನಿಮಾ ಮೂಡಿಬರಲಿದೆ ಎಂಬ ಸುದ್ದಿಗಳು ವ್ಯಾಪಕವಾಗಿ ಸದ್ದು ಮಾಡಿತ್ತು. ಆದರೆ, ನಿರೀಕ್ಷಿಸಿದ ಸಮಯದಲ್ಲಿ ಇದು ಈಡೇರಿರಲಿಲ್ಲ. ಈಗ ಇದಕ್ಕೆ ಸಮಯ ಕೂಡಿಬಂದಿದ್ದು, ಇಬ್ಬರು ಜತೆಯಾಗಿ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗೆ ಕೆಲಸ ಮಾಡಲು ಸಜ್ಜಾಗಿದ್ದಾರೆ.

ಅಲ್ಲು-ಅಟ್ಲಿ ಚಿತ್ರಕ್ಕೆ ಇವರೇ ನಾಯಕಿ

ಸ್ಟಾರ್​ ನಟ ಮತ್ತು ನಿರ್ದೇಶಕರ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಚಿತ್ರಕ್ಕೆ ಯಾರು ನಾಯಕಿಯಾಗಿ ಆಯ್ಕೆ ಆಗಲಿದ್ದಾರೆ ಎಂಬ ಪ್ರಶ್ನೆಗಳು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಸಿನಿಮಾದಲ್ಲಿ ನಟಿಸಲು ಯಾವ ಸ್ಟಾರ್​ ನಟಿಗೆ ಅವಕಾಶ ಸಿಕ್ಕಿದೆ ಎಂಬ ಗೊಂದಲಗಳು ಸಿನಿಪ್ರೇಕ್ಷಕರಲ್ಲಿ ಮೂಡಿವೆ. ಇದೆಲ್ಲದರ ನಡುವೆ ಕಳೆದ ಕೆಲವು ದಿನಗಳಿಂದ ಟಾಲಿವುಡ್​ ನಟಿ ಸಮಂತಾ ರುತು ಪ್ರಭು ಅವರ ಹೆಸರು ಮುಂಚೂಣಿಯಲ್ಲಿದೆ.

ಸಮಂತಾ ಹೆಸರು ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದು, ಅಲ್ಲು ಅರ್ಜುನ್ ಅಭಿನಯಿಸಿದ್ದ ಸನ್​ ಆಫ್​ ಸತ್ಯಮೂರ್ತಿ ಚಿತ್ರದಲ್ಲಿ ಸಮಂತಾ ನಟಿಸಿದ್ದಾರೆ. ಮತ್ತು ನಿರ್ದೇಶಕ ಅಟ್ಲಿ ಜತೆಗೆ ಒಳ್ಳೆಯ ಬಾಂಧವ್ಯವಿದೆ. ಹೀಗಿರುವಾಗ ಅವರೇ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಅಭಿಪ್ರಾಯಿಸಿದ್ದಾರೆ. ಅಸಲಿಗೆ ಇದು ಎಷ್ಟು ನಿಜ? ಎಂಬುದನ್ನು ಚಿತ್ರತಂಡ ನೀಡಲಿರುವ ಅಧಿಕೃತ ಘೋಷಣೆ ಬಳಿಕವೇ ತಿಳಿಯಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net