IPL-2025: ಆರ್​ಸಿಬಿಗೆ ಇಂದು ಅಜೇಯ ಡೆಲ್ಲಿ ಸವಾಲು; ತವರಿನಲ್ಲೂ ಗೆಲುವು ಸಾಧಿಸುವ ಹಂಬಲದಲ್ಲಿ ಪಾಟೀದಾರ್​ ಪಡೆ

web rcb vs dc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಈಡನ್​ ಗಾರ್ಡನ್ಸ್​, ಚೆಪಾಕ್​ ಮತ್ತು ವಾಂಖೆಡೆಯಲ್ಲಿ ಅಮೋ ಗೆಲುವು ದಾಖಲಿಸಿ ಬೀಗಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಇದೀಗ ತವರಿನಲ್ಲೂ ತನ್ನ ಜೈತ್ರಯಾತ್ರೆಯನ್ನು ಮುಂದುವರಿಸುವ ಹಂಬಲದಲ್ಲಿದೆ. ಸತತ 3 ಗೆಲುವಿನೊಂದಿಗೆ ಐಪಿಎಲ್​ 18ನೇ ಆವೃತ್ತಿಯಲ್ಲಿ ಅಜೇಯವಾಗಿರುವ ಏಕೈಕ ತಂಡವೆನಿಸಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಆರ್​ಸಿಬಿ ಗುರುವಾರ ಎದುರಿಸಲಿದ್ದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತವರಿನ ಲಾಭವನ್ನು ಬಳಸಿಕೊಂಡು ಗೆಲುವು ದಾಖಲಿಸುವ ತವಕದಲ್ಲಿದೆ.

ಆರ್​ಸಿಬಿ ತಂಡ ಗುಜರಾತ್​ ವಿರುದ್ಧ ಆಡಿದ ತನ್ನ ತವರಿನ ಮೊದಲ ಪಂದ್ಯದಲ್ಲಿ ಎಡವಿತ್ತು. ಹೀಗಾಗಿ ಈ ಬಾರಿ ತವರಿನಲ್ಲಿ ಗೆಲುವಿನಲ್ಲೂ ಜಯದ ಲಯ ಕಾಯ್ದುಕೊಳ್ಳುವುದು ರಜತ್​ ಪಾಟೀದಾರ್​ ಬಳಗದ ಗುರಿಯಾಗಿದೆ. ಮತ್ತೊಂದೆಡೆ ಡೆಲ್ಲಿ ತಂಡ ಆಡಿದ ಮೊದಲ 3 ಪಂದ್ಯಗಳಲ್ಲಿ ಲಖನೌ, ಸನ್​ರೈಸರ್ಸ್​ ಮತ್ತು ಸಿಎಸ್​ಕೆ ಎದುರು ಗೆದ್ದು ಭರ್ಜರಿ ಲಯದಲ್ಲಿದೆ. ಇದೀಗ ಆರ್​ಸಿಬಿ ತಂಡವನ್ನು ಅದರ ತವರಿನಲ್ಲೇ ಎದುರಿಸಲಿರುವುದು ಅಕ್ಷರ್​ ಪಟೇಲ್​ ಬಳಗಕ್ಕೆ ನಿಜಯವಾದ ಸತ್ವಪರೀೆ ಎನಿಸಿದೆ.

ಕೊಹ್ಲಿಗೆ ಎಡಗೈ ದಾಳಿ ಸವಾಲು

ಆಡಿದ ಮೊದಲ 4 ಪಂದ್ಯಗಳಲ್ಲಿ 2 ಅರ್ಧಶತಕಗಳ ಸಹಿತ 164 ರನ್​ ಬಾರಿಸಿರುವ ಆರ್​ಸಿಬಿ ತಂಡದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿಗೆ ಡೆಲ್ಲಿ ತಂಡದ ಎಡಗೈ ದಾಳಿ ಪ್ರಮುಖ ಸವಾಲೆನಿಸಿದೆ. ಎಡಗೈ ವೇಗಿ ಮಿಚೆಲ್​ ಸ್ಟಾರ್ಕ್​ ಜತೆಗೆ ಎಡಗೈ ಸ್ಪಿನ್ನರ್​ಗಳಾದ ಕುಲದೀಪ್​ ಯಾದವ್​, ಅಕ್ಷರ್​ ಪಟೇಲ್​ ಎದುರು ಕೊಹ್ಲಿ ನಿರ್ವಹಣೆ ಪಂದ್ಯದ ಲಿತಾಂಶದಲ್ಲೂ ನಿರ್ಣಾಯಕ ಪಾತ್ರ ವಹಿಸಲಿದೆ. 3 ಪಂದ್ಯಗಳಲ್ಲಿ 11 ವಿಕೆಟ್​ ಕಬಳಿಸಿರುವ ಸ್ಟಾರ್ಕ್​ ಪ್ರಸಕ್ತ ಭರ್ಜರಿ ಾಮ್​ರ್ನಲ್ಲಿದ್ದಾರೆ. ಹೀಗಾಗಿ ಕೊಹ್ಲಿ&ಸ್ಟಾರ್ಕ್​ ಮುಖಾಮುಖಿ ಪಂದ್ಯದ ಹೈಲೈಟ್​ ಆಗಿದೆ. ಮತ್ತೋರ್ವ ಎಡಗೈ ವೇಗಿ ಟಿ. ನಟರಾಜನ್​ ಫಿಟ್​ ಆದರೆ ಮೋಹಿತ್​ ಶರ್ಮ ಬದಲಿಗೆ ಕಣಕ್ಕಿಳಿಯುವ ನಿರೀೆ ಇದೆ.

ಆರ್​ಸಿಬಿಗೆ ಮಾಜಿ ಆಟಗಾರರೇ ತಲೆನೋವು!

ಆರ್​ಸಿಬಿ ತಂಡದ ಮೂವರು ಮಾಜಿ ಆಟಗಾರರನ್ನು ಹೊಂದಿರುವುದು ಡೆಲ್ಲಿ ತಂಡದ ಪಾಲಿಗೆ ಪಂದ್ಯದಲ್ಲಿ ನೆರವಾಗುವ ನಿರೀೆ ಇದೆ. ಅವರೆಂದರೆ ಕೆಎಲ್​ ರಾಹುಲ್​, ಮಿಚೆಲ್​ ಸ್ಟಾರ್ಕ್​ ಮತ್ತು ್​ಾ ಡು ಪ್ಲೆಸಿಸ್​. ಈ ಮೂವರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೆಚ್ಚಿನ ಪಂದ್ಯ ಆಡಿದ ಅನುಭವ ಹೊಂದಿರುವುದು ಡೆಲ್ಲಿ ತಂಡದ ಪಾಲಿಗೆ ಪ್ಲಸ್​ ಪಾಯಿಂಟ್​ ಎನಿಸಿದೆ. ಕಳೆದ 3 ಆವೃತ್ತಿಗಳಲ್ಲಿ ಆರ್​ಸಿಬಿ ತಂಡದ ನಾಯಕರೂ ಆಗಿದ್ದ ಪ್ಲೆಸಿಸ್​, ಗಾಯದಿಂದಾಗಿ ಸಿಎಸ್​ಕೆ ವಿರುದ್ಧದ ಕಳೆದ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಈ ಬಾರಿ ಪ್ಲೆಸಿಸ್​ ಫಿಟ್​ ಆಗಿ ಮರಳಿ ಕಣಕ್ಕಿಳಿಯುವ ನಿರೀೆ ಇದೆ.

ಆರ್​ಸಿಬಿಗೆ ಬೌಲಿಂಗ್​ ಬಲ

ಕೊಹ್ಲಿ ಜತೆಗೆ ಫಿಲ್​ ಸಾಲ್ಟ್​, ರಜತ್​ ಪಾಟೀದಾರ್​, ದೇವದತ್​ ಪಡಿಕ್ಕಲ್​, ಜಿತೇಶ್​ ಶರ್ಮ, ಟಿಮ್​ ಡೇವಿಡ್​ ಒಳಗೊಂಡ ಆರ್​ಸಿಬಿ ಬ್ಯಾಟಿಂಗ್​ ವಿಭಾಗ ನಿರೀತ ನಿರ್ವಹಣೆಯನ್ನೇ ತೋರುತ್ತಿರುವ ನಡುವೆ ಆರ್​ಸಿಬಿ ತಂಡಕ್ಕೆ ಬೌಲಿಂಗ್​ ವಿಭಾಗದ ಸಂಟಿತ ನಿರ್ವಹಣೆ ಹೆಚ್ಚಿನ ಬಲ ತುಂಬಿದೆ. ಅನುಭವಿ ವೇಗಿಗಳಾದ ಜೋಶ್​ ಹ್ಯಾಸಲ್​ವುಡ್​, ಭುವನೇಶ್ವರ್​ ಜತೆಗೆ ಯಶ್​ ದಯಾಳ್​ ಬಿಗಿ ದಾಳಿ ಸಂಟಿಸುತ್ತಿದ್ದರೆ, ಸ್ಪಿನ್​ ಬೌಲಿಂಗ್​ ವಿಭಾಗದಲ್ಲಿ ಕೃನಾಲ್​ ಪಾಂಡ್ಯ, ಸುಯಶ್​ ಶರ್ಮ ಯಶ ಸಾಧಿಸಿದ್ದಾರೆ.

*ಮುಖಾಮುಖಿ: 31

ಆರ್​ಸಿಬಿ: 19

ಡೆಲ್ಲಿ: 11

ರದ್ದು: 1

*ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

ಎದುರಾಳಿ ತಂಡದಲ್ಲಿ ಮೂವರು ಕನ್ನಡಿಗರು

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಕನ್ನಡಿಗರ ಸವಾಲನ್ನೇ ಎದುರಿಸಬೇಕಾಗಿದೆ. ಹಾಲಿ ಐಪಿಎಲ್​ನಲ್ಲಿ ಡೆಲ್ಲಿ ತಂಡ ಗರಿಷ್ಠ ಅಂದರೆ ಮೂವರು ಕನ್ನಡಿಗರನ್ನು ಹೊಂದಿದೆ. ಈ ಪೈಕಿ ಕೆಎಲ್​ ರಾಹುಲ್​ ವಿಕೆಟ್​ ಕೀಪರ್​&ಬ್ಯಾಟರ್​ ಆಗಿ ಡೆಲ್ಲಿ ತಂಡದ ಪ್ರಮುಖ ಭಾಗವಾಗಿದ್ದಾರೆ. ಕಳೆದ ದೇಶೀಯ ಕ್ರಿಕೆಟ್​ ಋತುವಿನಲ್ಲಿ ರನ್​ಮಳೆ ಹರಿಸಿದ್ದ ಅನುಭವಿ ಬ್ಯಾಟರ್​ ಕರುಣ್​ ನಾಯರ್​ ಟೂರ್ನಿಯಲ್ಲಿ ಇನ್ನೂ ಪಂದ್ಯ ಆಡುವ ಅವಕಾಶ ಪಡೆದಿಲ್ಲ. ತವರಿನ ಪಂದ್ಯದಲ್ಲಾದರೂ 11ರ ಬಳಗದಲ್ಲಿ ಸ್ಥಾನ ಗಳಿಸುವ ನಿರೀೆ ಅವರದಾಗಿದೆ. ಮೈಸೂರಿನ ಆಲ್ರೌಂಡರ್​ ಎಲ್​. ಮನ್ವಂತ್​ ಕುಮಾರ್​ ತಂಡದಲ್ಲಿರುವ ಮತ್ತೋರ್ವ ಕನ್ನಡಿಗರಾಗಿದ್ದಾರೆ.

ಪಿಚ್​ ರಿಪೋರ್ಟ್​

ಗುಜರಾತ್​ ವಿರುದ್ಧದ ಮೊದಲ ಪಂದ್ಯದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಪಿಚ್​ ವೇಗಿಗಳಿಗೆ ಹೆಚ್ಚಿನ ನೆರವು ನೀಡಿತ್ತು. ಈ ಬಾರಿಯೂ ಪಿಚ್​ ವರ್ತನೆ ಹೆಚ್ಚು ಬದಲಾವಣೆ ಕಾಣುವ ಸಾಧ್ಯತೆಗಳಿಲ್ಲ. ಅಲ್ಲದೆ ಇಬ್ಬನಿ ಸಮಸ್ಯೆ ಭೀತಿಯಿಂದ ಟಾಸ್​ ಗೆದ್ದ ತಂಡ ಚೇಸಿಂಗ್​ ಆಯ್ದುಕೊಳ್ಳುವುದೇ ಸುರತ. ಉಭಯ ತಂಡಗಳು ಅನುಭವಿ ವೇಗಿಗಳಿಂದ ಕೂಡಿರುವುದರಿಂದ ನಿಕಟ ಪೈಪೋಟಿಯ ನಿರೀೆ ಇದೆ.

*92: ಆರ್​ಸಿಬಿ ತಂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇದುವರೆಗೆ ಆಡಿರುವ 92 ಪಂದ್ಯಗಳಲ್ಲಿ 44ರಲ್ಲಿ ಗೆದ್ದಿದ್ದು, 44ರಲ್ಲಿ ಸೋತಿದೆ. 4 ಪಂದ್ಯ ರದ್ದುಗೊಂಡಿವೆ.

*ಬ್ಯಾಟಿಂಗ್​ನಲ್ಲಿ ಯಾವತ್ತೂ ಅಹಂ ತೋರಿಸಬಾರದು. ಯಾರನ್ನೂ ಮೀರಿಸಲು ಪ್ರಯತ್ನಿಸಬಾರದು. ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಆಡಬೇಕು. ಇದು ನಾನು ಬ್ಯಾಟಿಂಗ್​ನಲ್ಲಿ ಅನುಸರಿಸಿಕೊಂಡು ಬಂದಿರುವ ತತ್ವವಾಗಿದೆ. ನಾನು ಉತ್ತಮ ಲಯದಲ್ಲಿದ್ದರೆ ಹೆಚ್ಚಿನ ರನ್​ ಗಳಿಸಲು ಯತ್ನಿಸುತ್ತೇನೆ. ಬೇರೆ ಯಾರಾದರೂ ಲಯದಲ್ಲಿದ್ದರೆ ಅವರಿಗೆ ಅವಕಾಶ ಬಿಟ್ಟುಕೊಡುತ್ತೇನೆ.

| ವಿರಾಟ್​ ಕೊಹ್ಲಿ

*40: ರಜತ್​ ಪಾಟೀದಾರ್​ ಇನ್ನು 40 ರನ್​ ಗಳಿಸಿದರೆ ಆರ್​ಸಿಬಿ ಪರ ಸಾವಿರ ರನ್​ ಪೂರೈಸಿದ 2ನೇ ಭಾರತೀಯ ಬ್ಯಾಟರ್​ ಎನಿಸಲಿದ್ದಾರೆ. ಕೊಹ್ಲಿ ಇದುವರೆಗಿನ ಏಕೈಕ ಭಾರತೀಯ ಸಾಧಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net