

ಹಠಯೋಗ ಪ್ರದೀಪಿಕಾ (2.21)ದಲ್ಲಿ ಸ್ವಾತ್ಮಾರಾಮಸೂರಿ ಎಂಬ ಹಠಯೋಗಿ ಷಟ್ಕರ್ಮದ ಅವಶ್ಯಕತೆಯನ್ನು ಈ ರೀತಿ ತಿಳಿಸಿದ್ದಾರೆ.
ಮೇದಶ್ಲೇಷ್ಮಾಧಿಕಃ ಪೂರ್ವಂ ಷಟ್ಕರ್ವಣಿ ಸಮಾಚರೇತ್| ಅನ್ಯಸ್ತು ನಾಚರೇತ್ತಾನಿ ದೋಷಾಣಾಂ ಸಮಭಾವತಃ ||
ಕೊಬ್ಬು ಅಥವಾ ಶ್ಲೇಷ್ಮವು ಅಧಿಕವಾಗಿದ್ದಾಗ (ಪ್ರಾಣಾ ಯಾಮದ) ಮೊದಲು ಷಟ್ಕರ್ಮ ಗಳನ್ನು ಅಥವಾ ಶುದ್ಧೀಕರಣದ ಆರು ವಿಧಾನಗಳನ್ನು ಅಭ್ಯಾಸ ಮಾಡಬೇಕು. ಈ ದೋಷಗಳು (ವಾತ, ಪಿತ್ತ, ಕಫ) ನಿಯಂತ್ರಣದಲ್ಲಿ ರುವವರು ಇದನ್ನು ಮಾಡಬೇಕಾಗಿಲ್ಲ. ಆಯುರ್ವೆದ ಮತ್ತು ಹಠಯೋಗಗಳೆರಡರ ಪ್ರಕಾರ ಈ ಮೂರು ದೋಷಗಳ ಅಸಮತೋಲನ ವ್ಯಾಧಿಗಳಿಗೆ ಕಾರಣವಾಗುತ್ತದೆ.
ವಿಷಯುಕ್ತ ವಸ್ತುಗಳನ್ನು ನಿವಾರಿಸಿ ಶರೀರವನ್ನು ಶುದ್ಧೀಕರಿಸಲು ಮತ್ತು ಆಧ್ಯಾತ್ಮಿಕ ಪಥದಲ್ಲಿ ಕ್ಷೇಮಕರವಾದ ಯಶಸ್ವೀ ಮುನ್ನಡೆಯನ್ನು ಸಾಧಿಸಲು ಈ ಷಟ್ಕರ್ಮವನ್ನು ಪ್ರಾಣಾಯಾಮ ಮತ್ತಿತರ ಯೋಗಾಭ್ಯಾಸದ ಮುನ್ನ ಮಾಡುತ್ತಾರೆ.
ಎಚ್ಚರಿಕೆ: ಪರಿಣಾಮಕಾರಿ ಹಾಗೂ ಪ್ರಬಲವಾದ ಈ ಅಭ್ಯಾಸವನ್ನು ಪುಸ್ತಕ ಓದಿಯಾಗಲೀ ಅಥವಾ ಅನುಭವ ಇಲ್ಲದಿರುವವರಿಂದಾಗಲಿ ಕಲಿತುಕೊಳ್ಳುವುದು ಎಂದಿಗೂ ಸಲ್ಲದು. ಶಾಸ್ತ್ರದ ಪ್ರಕಾರ ಗುರುಮುಖೇನ ಕಲಿತವರು ಮಾತ್ರ ಇತರರಿಗೆ ಕಲಿಸಬಹುದು. ಅವರವರ ಅಗತ್ಯಗಳಿಗೆ ಅನುಗುಣವಾಗಿ ಇದನ್ನು ಹೇಗೆ ಮತ್ತು ಯಾವಾಗ ಮಾಡಬೇಕು ಎಂಬುದನ್ನು ವೈಯಕ್ತಿಕವಾಗಿ ತಿಳುವಳಿಕೆ ನೀಡುವುದು ಅಗತ್ಯ.
ಷಟ್ಕರ್ಮಗಳು