

Makeup kit: ಮಹಿಳೆಯೊಬ್ಬರು ತನ್ನ ಸ್ನೇಹಿತೆಯ ಮೇಕಪ್ ಕಿಟ್ನ ಬ್ರಷ್ ಅನ್ನು ಎರವಲು ಪಡೆ ಪರಿಣಾಮವಾಗಿ ಜೀವನಪರ್ಯಂತ ವೀಲ್ಚೇರ್ನಲ್ಲಿಯೇ ಕುಳಿತುಕೊಳ್ಳವಂತಾಗಿದೆ. ಇದಕ್ಕೆ ಕಾರಣವಾಗಿದ್ದ ಆಕೆ ಬಳಸಿದ ಸೌಂದರ್ಯ ವರ್ಧಕ ವಸ್ತುಗಳನ್ನು ಹಂಚಿಕೊಳ್ಳುವುದರಿಂದ ಉಂಟಾಗುವ ಗಂಭೀರ ಅಪಾಯಗಳ ಬಗ್ಗೆ ವೈದ್ಯರೊಬ್ಬರು ಎಚ್ಚರಿಸಿದ್ದಾರೆ.
ಹೌದು,ಸಿಂಗಪೂರ ಮೂಲದ ವೈದ್ಯ ಡಾ.ಸ್ಯಾಮ್ಯುವೆಲ್ ಚೌದರಿ,ಇದೀಗ ಮತ್ತೊಬ್ಬರ ಮೆಕಪ್ಕಿಟ್ ಬಳಕೆ ಮಾಡಿದ್ದ ಪರಿಣಾಮವಾಗಿ ಜೋ ಗಿಲ್ಕ್ರಿಸ್ಟ್ ಎಂಬ ಮಹಿಳೆ ಪಾಶ್ವವಾಯುಗೆ ತುತ್ತಾಗಿ ಹೇಗೆ ವೀಲ್ಚೇರ್ಗೆ ಸೀಮಿತವಾದಳು ಎಂಬುವುದರ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಕಳೆದ ಕೆಲ ತಿಂಗಳಿಗಳಿಂದೆ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.
2015ರಲ್ಲಿ ತಗೆದುಕೊಂಡ ಆ ಒಂದು ನಿರ್ಧಾರದಿಂದ ಜೀವನವು ಹೇಗೆ ಬದಲಾಯಿತು ಎಂಬುವುದರ ಬಗ್ಗೆ ಮಾತನಾಡಿರುವ ಡಾ.ಚೌದರಿ,ಆಕೆಯ ಸ್ನೇಹಿತೆ ಸ್ಟ್ಯಾಫಿಲೋಕೊಸಸ್ ಎಂಬ ಬ್ಯಾಕ್ಟೀಯಾದ ಸೋಕಿನಿಂದ ಬಳಲುತ್ತಿದ್ದರು. ಅವಳ ಮೆಕಪ್ ಕಿಟ್ ಬ್ರಷ್ ಬಳಕೆಯಿಂದ ಜೋ ಗಿಲ್ಕ್ರಿಸ್ಟ್ ಮುಖದ ಮೇಲೆ ಪರಿಣಾಮ ಬಿರುತ್ತಿತ್ತು ಎಂದರೆ, ಬ್ಯಾಕ್ಟೀರಿಯವು ಅವಳ ಮಖದ ಗಾಯಗಳ ಮೂಲಕ ದೇಹ ಪ್ರವೇಶಿಸಿದೆ. ಅಲ್ಲಿಂದ ರಕ್ತನಾಳಗಳ ಮೂಲಕ ದೇಹದ ಬೆನ್ನಿನಮೂಳೆ ತಲುಪಿ ಸೋಂಕು ಆಗಿ ಮಾರ್ಪಟ್ಟಿದೆ. ಈ ಸೋಂಕು ಬೆಳೆದು ದೊಡ್ಡದಾಗಿ ಪಾರ್ಶ್ವವಾಯುಗೆ ತುತ್ತಾಗಿದ್ದಾರೆ. ಅದರ (ಬೆನ್ನು) ನೋವು ಎಷ್ಟಿತ್ತಂದರೆ ಹೆರಿಗೆ ಸಮಯದಲ್ಲಾಗುವ ನೋವವಿಗಿಂತ ಅಧಿಕವಾಗಿತ್ತು ಎಂದು ಮಹಿಳೆ ಹೇಳಿಕೊಂಡಿದ್ದಾಳೆ ವೈದ್ಯರು ಹಂಚಿಕೊಂಡಿದ್ದಾರೆ.
ಇನ್ನೂ ಕೆಟ್ಟದಾಗಿ ಹೇಳಬೇಕೆಂದರೆ, ಬ್ಯಾಕ್ಟೀರಿಯಾವು ಮೆಥಿಸಿಲಿನ್-ನಿರೋಧಕ ಸ್ಟ್ಯಾಫಿಲೋಕೊಕಸ್ ಆರಿಯಸ್ (MRSA) ಎಂಬ ನಿರ್ದಿಷ್ಟ ತಳಿಯಾಗಿದ್ದು, ಇದು ಸಾಮಾನ್ಯವಾಗಿ ಸ್ಟ್ಯಾಫಿಲೋಕೊಕಸ್ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸುವ ಪೆನ್ಸಿಲಿನ್ನಂತಹ ಪ್ರತಿಜೀವಕಗಳಿಗೆ ಅಪಾಯಕಾರಿ ಪ್ರತಿರೋಧವನ್ನು ಅಭಿವೃದ್ಧಿಪಡಿಸಿದ ಒಂದು ವಿಧವಾಗಿದೆ.
ಗಿಲ್ಕ್ರಿಸ್ಟ್ಗೆ ಅಂತಿಮವಾಗಿ ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿತ್ತು ಮತ್ತು ಘಟನೆಯ ನಂತರ ವರ್ಷಗಳ ಕಾಲ ವೀಲ್ಚೇರ್ಗೆ ಸೀಮಿತರಾಗಿದ್ದರು ಎಂದು ವಿವರಿಸಿದ್ದಾರೆ.(ಏಜೆನ್ಸೀಸ್)