ಗ್ರಾಹಕರ ನಂಬಿಕೆಗೆ ಪಾತ್ರವಾದ 'ಶರಣ್ಯ ಹಿಲ್‌ವ್ಯೂ' ಫಾರ್ಮ್ಸ್| Sharanya Hillview

Untitled design
Published on

ಬೆಂಗಳೂರು : ಮೈಸೂರು-ಬೆಂಗಳೂರು ರಸ್ತೆಯಿಂದ 5 ನಿಮಿಷ ದೂರದಲ್ಲಿರುವ ಸುಸಜ್ಜಿತ ಸೌಲಭ್ಯ ಹೊಂದಿರುವ 'ಶರಣ್ಯ ಹಿಲ್ ವ್ಯೂ ಫಾರ್ಮ್ಸ್ ಹಂತ 2' ಗ್ರಾಹಕರನ್ನು ಸೆಳೆಯುತ್ತಿದೆ. ಇದುವರೆಗೆ ಮೂರು ಫಾರ್ಮ್ ಲ್ಯಾಂಡ್ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿ ಮಾರಾಟ ಮಾಡುವುದರ ಜತೆಗೆ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನವಾಗಿರುವ ಶರಣ್ಯ ಫಾರ್ಮ್ಸ್, ಗ್ರಾಹಕರ ನಂಬಿಕೆ ಗಳಿಸಿಕೊಂಡಿದೆ.

ಇತರ ಸೌಲಭ್ಯಗಳು: ಫಾರ್ಮ್‌ ಹೌಸ್‌ನಲ್ಲಿ ಬ್ಯಾಡ್ಮಿಂಟನ್ ಕೋರ್ಟ್, ಈಜುಕೊಳ, ಕ್ಲಬ್ ಹೌಸ್, ಮಕ್ಕಳ ಆಟದ ಮೈದಾನ, ಕುಡಿಯುವ ನೀರು, ಹನಿ ನೀರಾವರಿ, ವಿದ್ಯುತ್ ಸಂಪರ್ಕ, ಉದ್ಯಾನ, -ವಿಶಾಲವಾದ ರಸ್ತೆ, ಔಟ್‌ಡೋರ್ ಜಿಮ್ ಸೇರಿ ಅತ್ಯಾಧುನಿಕ ಸೌಲಭ್ಯ ಒದಗಿಸಲಾಗುತ್ತದೆ. ತಮ್ಮ ಇಷ್ಟದಂತೆ ಗ್ರಾಹಕರು ಫಾರ್ಮ್ ಹೌಸ್ ಕಟ್ಟಿಕೊಳ್ಳಬಹುದು. ಇಲ್ಲವಾದರೆ ಸಂಸ್ಥೆಯವರೇ ಕಟ್ಟಿಕೊಡುತ್ತಾರೆ.

ಪ್ರಥಮ ಪ್ರಾಜೆಕ್ಟ್‌ನ ಯಶಸ್ಸಿನ ಬಳಿಕ, ಗ್ರಾಹಕರ ಕೋರಿಕೆಯಂತೆ ದಶಪಥದಿಂದ ಕೂಗಳತೆ ದೂರದಲ್ಲಿರುವ 'ಶರಣ್ಯ ಹಿಲ್ ವ್ಯೂ ಫಾರ್ಮ್ಸ್ 2ನೇ ಹಂತ' ಶ್ರೀಗಂಧದ ಬೀಡು ಎಂಬಂತೆ ಭಾಸವಾಗುತ್ತಿದೆ. ಸ್ಯಾಂಡಲ್ ವಿಥ್ ಫಾರ್ಮ್ ಹೌಸ್ ಪರಿಕಲ್ಪನೆಯಡಿ ಆರಂಭಿಸಿರುವ ಈ ಹೊಸ ಯೋಜನೆಯಲ್ಲಿ ಒಂದೇ ಹೂಡಿಕೆಗೆ ನಾಲ್ಕು ರೀತಿಯ ಲಾಭ ಪಡೆಯಬಹುದಾಗಿದೆ. ಫಾರ್ಮ್ ಲ್ಯಾಂಡ್ ಖರೀದಿಸಿದರೆ ಕುಟುಂಬದ ಸದಸ್ಯರಿಗೆ ರೆಸಾರ್ಟ್ ಸೌಲಭ್ಯ ಉಚಿತವಾಗಿ ದೊರೆಯಲಿದೆ. ಫಲವತ್ತಾದ ಭೂಮಿಯಲ್ಲಿ ಬೆಳೆದ ಶ್ರೀಗಂಧದ ಮರಗಳಿಂದ ಅಧಿಕ ಲಾಭ ಗಳಿಸಬಹುದು. ಫಾರ್ಮ್ ಹೌಸ್ ಬಾಡಿಗೆಗೆ ನೀಡುವುದರಿಂದಲೂ ಆದಾಯ ಪಡೆಯಬಹುದಾಗಿದೆ ಎನ್ನುತ್ತಾರೆ ಶರಣ್ಯ ಫಾರ್ಮ್ಸ್ನ ಮಾಲೀಕ ವಿ.ಎಂ.ರಾಜೇಶ್, ಫಾರ್ಮ್ ಲ್ಯಾಂಡ್ ಇಪ್ಪತ್ತು ಎಕರೆ ವಿಸ್ತೀರ್ಣ ಹೊಂದಿದೆ. 5.5 -6 ಗುಂಟೆ ಜಾಗದಲ್ಲಿ ರೆಸಾರ್ಟ್ ಶೈಲಿಯ ಫಾರ್ಮ್‌ ಹೌಸ್ ಅನುಭವ ಒದಗಿಸಲಿದೆ. 25-30 ಶ್ರೀಗಂಧದ ಮರ ಜತೆಗೆ ತೇಗ, ಮಹಗನಿ, ತೆಂಗು, ನೇರಳೆ, ಸೀಬೆ ಮತ್ತು ಸಪೋಟ ಸೇರಿ ಹಲವು ಬಗೆಯ ಹಣ್ಣಿನ ಗಿಡಗಳಿಂದಲೂ ಲಾಭ ಪಡೆಯಬಹುದಾಗಿದೆ.

ಹೂಡಿಕೆ ಲಾಭದಾಯಕ ರೆಸಾರ್ಟ್ ಸೌಲಭ್ಯ ಉಚಿತ

| ವಿ.ಎಂ. ರಾಜೇಶ್ ಶರಣ್ಯ ಫಾರ್ಮ್ ಮಾಲೀಕಶರಣ್ಯ ಹಿಲ್ ವ್ಯೂ ಫಾರ್ಮ್ಸ್ ಹಂತ 2 ಯೋಜನೆಯಡಿ ಒಂದು ಹೂಡಿಕೆಯಿಂದ ನಾಲ್ಕು ಲಾಭ ಪಡೆಯಬಹುದು. ಜತೆಗೆ ಫಾರ್ಮ್‌ ನ ನಿರ್ವಹಣೆಯನ್ನು ಸಂಸ್ಥೆ ವತಿಯಿಂದಲೇ ಮಾಡಲಾಗುವುದು.

ಫಾರ್ಮ್ ಲ್ಯಾಂಡ್ ವಿಶೇಷ

8) ದಾಖಲೆಗಳು ಶೇ.100 ಪಾರದರ್ಶಕತೆ

7) ಶ್ರೀಗಂಧ ಮರ, ಹಣ್ಣಿನ ಗಿಡ ನೆಟ್ಟು ಪೋಷಣೆ

6) ಪ್ರಕೃತಿ ಮಡಿಲಲ್ಲಿ ನೆಮ್ಮದಿಯ ಜೀವನಕ್ಕೆ ಬೆಸ್ಟ್ ಸ್ಪಾಟ್

5) 5.5ರಿಂದ 10 ಗುಂಟೆವರೆಗೆ ಭೂಮಿ ಖರೀದಿಗೆ ಅವಕಾಶ

4) ವಿಶಿಷ್ಟ ರೀತಿಯಲ್ಲಿ ವಿನ್ಯಾಸ

3) ಕಾಟೇಜ್ ನಿರ್ಮಾಣಕ್ಕೆ ಅತ್ಯುತ್ತಮ ಸ್ಥಳ

2) ಬೆಂಗಳೂರಿಗೆ 95 ಕಿ.ಮೀ. ಅಂತರ

1) ಮೈಸೂರಿಗೆ 32 ಕಿ.ಮೀ. ದೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net