ವಿಷ್ಣುವರ್ಧನ್​ ಸಮಾಧಿ ವಿವಾದ; ಅಭಿಮಾನಿಗಳ ಮನಸ್ಸಿಗೆ ಘಾಸಿಯಾಗುವ ನಿರ್ಧಾರ ಬೇಡ ಎಂದ ಬಿ ವೈ ವಿಜಯೇಂದ್ರ | Dr.Vishnuvardhan

Dr.Vishnuvardhan
Published on

Dr.Vishnuvardhan: ಕನ್ನಡದ ಪ್ರತಿಭಾನ್ವಿತ ನಟ, ಸಾಹಸಸಿಂಹ ಡಾ. ವಿಷ್ಣುವರ್ದನ್​ ಅವರ ಸಮಾಧಿ ದಶಕಗಳಿಂದ ವಿವಾದಕ್ಕೆ ಸಿಲುಕಿರುವುದು ಬೇಸರದ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವಾಗಿ ಪೋಸ್ಟ್​ ಹಂಚಿಕೊಂಡಿರುವ ವಿಜಯೇಂದ್ರ, ಅಭಿನವ ಭಾರ್ಗವ ವಿಷ್ಣುವರ್ಧನ್​ ಮತ್ತು ಹಿರಿಯ ನಟ ಬಾಲಕೃಷ್ಣ ಅವರ ಸಮಾಧಿಗಳು ಆದಷ್ಟು ಬೇಗ ಅಭಿಮಾನ್​ ಸ್ಟುಡಿಯೋದಲ್ಲಿಯೇ ಸ್ಮಾರಕ ರೂಪದಲ್ಲಿ ನಿರ್ಮಾಣವಾಗಲಿ ಎಂದು ಆಶಿಸಿದ್ದಾರೆ.

ಈ ಹಿಂದೆ ಬಾಲಕೃಷ್ಣ ಅವರಿಗೆ ನೀಡಿದ್ದ ಜಾಗವನ್ನು ರಾಜ್ಯ ಸರ್ಕಾರ ಮರಳಿ ವಶಪಡಿಸಿಕೊಳ್ಳಲು ನಿರ್ಧರಿಸಿರುವುದು ಮತ್ತೆ ಹೊಸ ಗೊಂದಲಕ್ಕೆ ಕಾರಣವಾಗದಿರಲಿ, ಈ ವಿಷಯದಲ್ಲಿ ಸರ್ಕಾರ ಹಿರಿಯ ನಟರ ಅಭಿಮಾನಿಗಳ ಮನಸ್ಸಿಗೆ ಘಾಸಿಯಾಗದಂತೆ ನಡೆದುಕೊಳ್ಳಲಿ ಎಂದು ಪೋಸ್ಟ್​​ ಮಾಡಿದ್ದಾರೆ.

ವಿವಾದವೇನು..?

ಹೈಕೋರ್ಟ್ ಸೂಚನೆ ಮೇರೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ತೆರವುಗೊಳಿಸಲಾಗಿತ್ತು, ಇದರಿಂದ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು.

ಅಭಿಮಾನ್ ಸ್ಟುಡಿಯೋವನ್ನು ಮುಟ್ಟುಗೋಲು ಹಾಕಿಕೊಂಡು ಅದನ್ನು ಅರಣ್ಯ ಭೂಮಿ ಎಂದು ಘೋಷಿಸಲು ಸರ್ಕಾರ ಚಿಂತನೆ ಮಾಡಿದೆ. ಈ ಬಗ್ಗೆ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಕಳವಳ ವ್ಯಕ್ತಪಡಿಸಿದ್ದು, ತಮ್ಮ ಫೇಸ್‌ಬುಕ್‌ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net