

ಚೌಳಹಿರಿಯೂರು: ಚುನಾಯಿತ ಪ್ರತಿನಿಧಿಗಳು ಹಾಗೂ ಭಾಷಣಕಾರರು ಉತ್ತಮ ವಿಚಾರಗಳನ್ನು ಮೊದಲು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಂತರ ಇತರರಿಗೆ ಬೋಧನೆ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಕುರುಬರಹಳ್ಳಿ ಯೋಗಾಶ್ರಮದ ರಾಮ ಗುರೂಜಿ ತಿಳಿಸಿದರು.
ಕುರುಬರಹಳ್ಳಿ ಯೋಗ ಮತ್ತು ಅಧ್ಯಾತ್ಮ ಚಿಕಿತ್ಸಾ ಆಶ್ರಮದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಆಚಾರ ವಿಚಾರದ ಬಗ್ಗೆ ಮಾತನಾಡುವಾಗ ನಾವು ಹೇಗಿದ್ದೇವೆ ಎಂಬುದನ್ನು ಅರಿತು ಬೇರೆಯವರಿಗೆ ಮಾರ್ಗದರ್ಶನ ನೀಡುವಂತೆ ಸಲಹೆ ನೀಡಿದರು.
ಶಿಕ್ಷಕಿ ಕೆ.ಎಂ.ಜ್ಯೋತಿ ಶಿವಕುಮಾರ್ ಮಾತನಾಡಿ, ಬಸವಣ್ಣ ಅವರ ಅನುಭವ ಮಂಟಪದಲ್ಲಿ ಸೀ ಸಾಮಾನ್ಯರಿಗೆ ಸಮಾನತೆ ನೀಡಿ ಗೌರವಿಸಲಾಗುತ್ತಿತ್ತು. ಅಂದು ಶರಣರಲ್ಲಿ ಆಸೆ, ಆಮಿಷಗಳಿರಲಿಲ್ಲ ಎಂದರು.
ಹೋಬಳಿ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಲತಾ ಧರಣೇಶ್ ವಚನ ಗೀತೆ ಹಾಡಿದರು. ಎಚ್.ಎನ್.ಶಿವಕುಮಾರ್, ತಾಲೂಕು ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ಬಸವರಾಜಪ್ಪ, ಕೆ.ವಿರೂಪಾಕ್ಷಪ್ಪ, ಆಶ್ರಮದ ಭೂದಾನಿಗಳಾದ ಕುರುಬರಹಳ್ಳಿ ಪ್ರಕಾಶ್, ಹೋಬಳಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಅನಿಲ್‌ಕುಮಾರ್, ಗರ್ಜೆ ರಾಜಶೇಖರ್, ಕಲ್ಕೆರೆ ಸಿದ್ದಲಿಂಗಸ್ವಾಮಿ ಇತರರಿದ್ದರು.