ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿ ದೊಡ್ಡ ಹುದ್ದೆಯನ್ನೇ ಕಳ್ಕೊಂಡ!

Air India
Published on

ಮುಂಬೈ: ಕೆಲವು ದಿನಗಳ ಹಿಂದೆ ಏರ್ ಇಂಡಿಯಾ ವಿಮಾನದ ಬಿಜಿನೆಸ್ ಕ್ಲಾಸ್​ನಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಲ್ಲದೆ, ತನ್ನ ಖಾಸಗಿ ಅಂಗವನ್ನೂ ಪ್ರದರ್ಶನ ಮಾಡಿದ್ದ ವ್ಯಕ್ತಿ ಇದೀಗ ಅದೇ ಕಾರಣಕ್ಕೆ ತನ್ನ ದೊಡ್ಡ ಹುದ್ದೆಯನ್ನೇ ಕಳೆದುಕೊಳ್ಳುವಂತಾಗಿದೆ.

ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ಮೂಡಿದ್ದ ವ್ಯಕ್ತಿ ಮುಂಬೈ ಮೂಲದ ಶಂಕರ್ ಮಿಶ್ರಾ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಕೇಸ್ ಕೂಡ ದಾಖಲಾಗಿದೆ. ಆತ ಕ್ಯಾಲಿಫೋರ್ನಿಯಾ ಮೂಲದ ವೆಲ್ಸ್ ಫಾರ್ಗೊ (Wells Fargo) ಎಂಬ ಅಮೆರಿಕನ್ ಮಲ್ಟಿನ್ಯಾಷನಲ್ ಕಂಪನಿಯ ಭಾರತ ವಿಭಾಗದ ಉಪಾಧ್ಯಕ್ಷನಾಗಿದ್ದ. ಆದರೆ ಮೂತ್ರ ವಿಸರ್ಜನೆಯ ಪ್ರಕರಣದಿಂದಾಗಿ ಕಂಪನಿ ಆತನನ್ನು ಈ ಹುದ್ದೆಯಿಂದ ಕಿತ್ತೊಗೆದಿದೆ.

ವೆಲ್ಸ್ ಫಾರ್ಗೊ ಉದ್ಯೋಗಿಗಳು ಅತ್ಯುನ್ನತ ಗುಣಮಟ್ಟದ ವೃತ್ತಿಪರರು ಹಾಗೂ ವೈಯಕ್ತಿಕವಾಗಿಯೂ ಉತ್ತಮ ವರ್ತನೆ ಹೊಂದಿರುವವರು. ಆದರೆ ಈ ಆರೋಪಗಳು ನಿಜವಾಗಿಯೂ ತುಂಬಾ ಕಿರಿಕಿರಿ ಉಂಟು ಮಾಡುವಂಥದ್ದಾಗಿವೆ. ಹೀಗಾಗಿ ಆರೋಪಿಯನ್ನು ಕಂಪನಿಯಿಂದ ತೆಗೆದುಹಾಕಲಾಗಿದೆ ಎಂದು ವೆಲ್ಸ್​ ಫಾರ್ಗೊ ಕಂಪನಿ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net