ಹರಿಯಾಣ: ದೇಶಾದ್ಯಂತ ಹೃದಯಾಘಾತ ಪ್ರಕರಣಗಳು ಒಂದರ ಹಿಂದೊಂದರಂತೆ ಸಂಭವಿಸುತ್ತಿರುವುದು ಆತಂಕ ಮೂಡಿಸಿದ್ದು, ಯಾವಾಗ ಯಾರು ಎಲ್ಲಿ ಹೇಗೋ ಎನ್ನುವಂಥ ಪರಿಸ್ಥಿತಿ ಉಂಟಾಗಿದೆ. ಇಂಥ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಮೆಡಿಕಲ್ಸ್ ಮುಂಭಾಗ ಎದೆ ಹಿಡಿದುಕೊಂಡೇ ಪ್ರಾಣ ಬಿಟ್ಟಿದ್ದಾನೆ. ಈ ಕುರಿತ ವಿಡಿಯೋ ಕೂಡ ವೈರಲ್ ಆಗಿದೆ.
ಹರಿಯಾಣದ ಫರಿದಾಬಾದ್ನಲ್ಲಿ ಈ ಪ್ರಕರಣ ನಡೆದಿದ್ದು, ಈ ಕುರಿತ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ವಿಷಯ ಎಲ್ಲೆಡೆ ಹಬ್ಬಿದೆ. ಇಲ್ಲಿನ ಫಾರ್ಮಸಿಗೆ ಬಂದಿದ್ದ ವ್ಯಕ್ತಿಯೊಬ್ಬ ಔಷಧ ಕೇಳುತ್ತಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಇನ್ನೇನು ಔಷಧ ಪಡೆದು ಹಣ ಪಾವತಿಸಬೇಕು ಎನ್ನುವಷ್ಟರಲ್ಲಿ ಈತ ಮೆಡಿಕಲ್ಸ್ ಮುಂಭಾಗ ಎದೆಹಿಡಿದುಕೊಂಡೇ ಕುಸಿದು ಪ್ರಾಣ ಬಿಟ್ಟಿದ್ದಾನೆ.
ಇದನ್ನೂ ಓದಿ: ಕಳೆದ ಒಂದು ವರ್ಷದಲ್ಲಿ ಹಠಾತ್ ಹೃದಯಾಘಾತ, ಅನಾರೋಗ್ಯ ಶೇ. 20 ಹೆಚ್ಚಳ: ಬಾಧಿತರಲ್ಲಿ ಲಸಿಕೆ ಪಡೆದವರ ಪ್ರಮಾಣವೆಷ್ಟು?
ಕೇವಲ ನಾಲ್ಕು ನಿಮಿಷಗಳಲ್ಲಿ ನಡೆದುಹೋದ ಈ ದುರಂತ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ತುಣುಕು ವೈರಲ್ ಆಗಿದೆ. ಜ. 4ರಂದು ಈ ಪ್ರಕರಣ ಸಂಭವಿಸಿದೆ. ಉತ್ತರಪ್ರದೇಶ ಮೂಲದ 23 ವರ್ಷದ ಸಂಜಯ್ ಸಾವಿಗೀಡಾದ ವ್ಯಕ್ತಿ. ಈತ ಎದೆಹಿಡಿದುಕೊಂಡು ಬೀಳುವ ಸಂದರ್ಭದಲ್ಲಿ ಮೆಡಿಕಲ್ಸ್ನ ವ್ಯಕ್ತಿ ಹಿಡಿಯಲು ಹೋಗುವಷ್ಟರಲ್ಲಿ ಕುಸಿದು ಬಿದ್ದಿದ್ದಾನೆ. ಆತನನ್ನು ಎಬ್ಬಿಸಿ ಎದ್ದೇಳಿಸಲು ಪ್ರಯತ್ನಿಸಿದರೂ ಅಂಗಡಿಯಾತ ಅದರಲ್ಲಿ ವಿಫಲನಾಗಿದ್ದಾನೆ. –ಏಜೆನ್ಸೀಸ್
मेडिकल स्टोर पर दवा लेते हुए आया #हार्ट-अटैक, चंद मिनट के अंदर हो गई मौत। ये #CCTV फुटेज फरीदाबाद के एक मेडिकल स्टोर की है#Faridabad #heatattck pic.twitter.com/D0MQGIwmNr
— mithilesh yadav (@mithilesh501) January 6, 2023
ಸ್ಮಶಾನದ ಹಾದಿಯಲ್ಲಿ ಕಣ್ಣು ತೆರೆದ ‘ಶವ’!; ಮಹಿಳೆ ಮೃತಪಟ್ಟಳು ಎಂದು ವೈದ್ಯರು ದೃಢೀಕರಿಸಿದ್ದರೂ ಸಂಭವಿಸಿದ ಅಚ್ಚರಿ!
ಮದುವೆ ಆಗಿಲ್ಲ ಅಂದ್ರೆ ಮನೆ ಖಾಲಿ ಮಾಡಿ: ಬಾಡಿಗೆದಾರರಿಗೆ ವಿಚಿತ್ರ ಎಚ್ಚರಿಕೆ
ಮನೆ ಬಾಗಿಲಲ್ಲಿ ಕಸ, ಬೆಡ್ರೂಮ್ನಲ್ಲಿದ್ದ ಚಿನ್ನಾಭರಣ ನಾಪತ್ತೆ; ಎಚ್ಚರಿಕೆ ಸಾರ್ವಜನಿಕರೇ.. ಈ ಬಗ್ಗೆ ಇರಲಿ ಗಮನ