ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ; ಆ ದುಷ್ಕರ್ಮಿ ಇವನೇ..

Air India
Published on

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ್ದಲ್ಲದೆ, ಆಕೆಗೆ ತನ್ನ ಖಾಸಗಿ ಅಂಗ ತೋರಿ ವಿಕೃತಿ ಮೆರೆದಿದ್ದ. ಈ ವಿಷಯ ಬಹಿರಂಗವಾಗಿ ಸಂಚಲನ ಸೃಷ್ಟಿಯಾದ ಬೆನ್ನಿಗೇ ಆತನ ಹಿನ್ನೆಲೆಯೂ ಬಹಿರಂಗಗೊಂಡಿದೆ.

ನ. 26ರಂದು ನ್ಯೂಯಾರ್ಕ್​-ದೆಹಲಿ ವಿಮಾನದಲ್ಲಿ ಈ ಘಟನೆ ನಡೆದಿತ್ತು. ಏರ್ ಇಂಡಿಯಾದ ಬಿಜಿನೆಸ್ ಕ್ಲಾಸ್​​ನಲ್ಲಿ ತನಗಾದ ಈ ತೊಂದರೆಯ ಬಗ್ಗೆ ಸಂತ್ರಸ್ತೆಯು ಟಾಟಾ ಗ್ರೂಪ್ ಅಧ್ಯಕ್ಷ ಎನ್​. ಚಂದ್ರಶೇಖರನ್ ಅವರಿಗೆ ದೂರು ನೀಡಿ ಬರೆದ ಪತ್ರವನ್ನು ರಾಷ್ಟ್ರೀಯ ಮಾಧ್ಯಮಗಳು ವರದಿಯಾದ ಬಳಿಕ ಈ ವಿಷಯ ಸಂಚಲನ ಸೃಷ್ಟಿಸಿತ್ತು. ಆದರೆ ಆ ವ್ಯಕ್ತಿ ಯಾರು, ಏನು ಎಂಬುದು ಬಹಿರಂಗವಾಗಿರಲಿಲ್ಲ.

ಹಾಗೆ ಮೂತ್ರ ವಿಸರ್ಜಿಸಿದ್ದ ವ್ಯಕ್ತಿಯ ಹೆಸರು ಶಂಕರ್ ಮಿಶ್ರಾ ಎಂಬುದು ಈಗ ಬಟಾಬಯಲಾಗಿದೆ. ಈತ ಕ್ಯಾಲಿಫೋರ್ನಿಯಾ ಮೂಲದ ವೆಲ್ಸ್ ಫಾರ್ಗೊ (Wells Fargo) ಎಂಬ ಅಮೆರಿಕನ್ ಮಲ್ಟಿನ್ಯಾಷನಲ್ ಕಂಪನಿಯ ಭಾರತ ವಿಭಾಗದ ಉಪಾಧ್ಯಕ್ಷ ಎಂಬುದು ತಿಳಿದುಬಂದಿದೆ. ಮುಂಬೈ ಮೂಲದ ಈತನನ್ನು ಪತ್ತೆ ಮಾಡಿ ಬಂಧಿಸಲು ದೆಹಲಿ ಪೊಲೀಸರು ತಂಡ ರಚನೆಯಾಗಿದ್ದು, ಕಾರ್ಯಾಚರಣೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net