ಶಂಕರ್ ಬಿದರಿ ಫೇಸ್‌ಬುಕ್ ಮತ್ತೆ ಹ್ಯಾಕ್

FB
Published on

ಬೆಂಗಳೂರು: ಫೇಸ್‌ಬುಕ್ ಹ್ಯಾಕ್ ಮಾಡಿ ಮೋಸ ಮಾಡುವ ಸೈಬರ್ ಕಳ್ಳರ ಕಾಟ ನಿವೃತ್ತ ಡಿಜಿ-ಐಜಿಪಿ ಶಂಕರ್ ಬಿದರಿ ಅವರಿಗೂ ತಪ್ಪಿಲ್ಲ.

ಕೆಲ ದಿನಗಳ ಹಿಂದೆ ಶಂಕರ್‌ಬಿದರಿ ಫೇಸ್‌ಬುಕ್ ಹ್ಯಾಕ್ ಮಾಡಿದ್ದ ಸೈಬರ್ ಕಳ್ಳರು ಟ್ರೇಟಿಂಗ್ ವ್ಯವಹಾರದಲ್ಲಿ ಹಣ ತೊಡಗಿಸಿದರೇ ಹೆಚ್ಚಿನ ಲಾಭಾಂಶ ಸಿಗಲಿದೆ ಎಂಬ ಪೋಸ್ಟ ಮಾಡಿದ್ದರು.

ಜತೆಗೆ ಲಿಂಕ್ ಸಹ ಕಳುಹಿಸಿ ಅದರ ಮೇಲೆ ಕ್ಲಿಕ್ ಮಾಡಿ ಹೂಡಿಕೆ ಮಾಡುವಂತೆ ಶಂಕರ್ ಬಿದರಿ ಅವರೇ ಸಲಹೆ ಕೊಟ್ಟಂತೆ ಮಾಡಿದ್ದರು. ಕಳೆದ ವಾರವಷ್ಟೇ ಹ್ಯಾಕ್ ಮಾಡಿದ್ದ ಸೈಬರ್ ಕಳ್ಳರು, ಹ್ಯಾಕ್ ಮಾಡಿದ ಪೋಸ್ಟ್‌ನ್ನು ಅಪ್‌ಲೋಡ್ ಮಾಡಿದ್ದಾರೆ.

ಶಂಕರ್ ಬಿದರಿ ಅವರ ಫೇಸ್‌ಬುಕ್ ನಲ್ಲಿ 35 ಸಾವಿರ ಫಾಲೋವರ್ಸ್ ಇದ್ದು, ಐದು ಸಾವಿರ ಸ್ನೇಹಿತರು ಇದ್ದಾರೆ. ಈ ಬಗ್ಗೆ ಶಂಕರ್ ಬಿದರಿ ಅವರು, ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಸಾರ್ವಜನಿಕರೂ ಎಚ್ಚರದಿಂದಿರಲು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net