'ಜವಾನ್'​ ಚಿತ್ರ ರಿಲೀಸ್​; ಮುಖಕ್ಕೆ ಬ್ಯಾಂಡೇಜ್ ಸುತ್ತಿಕೊಂಡು ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟ ಶಾರೂಖ್​ ಫ್ಯಾನ್ಸ್​!

Untitled design - 2023-09-07T142459.130
Published on

ಮುಂಬೈ: ಬಾಲಿವುಡ್​ ಕಿಂಗ್​ ಖಾನ್​, ನಟ ಶಾರೂಖ್​ ಖಾನ್​ ಅಭಿನಯದ ಬಹುನಿರೀಕ್ಷಿತ 'ಜವಾನ್​' ಚಿತ್ರ ಇಂದು ದೇಶಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ಸಿನಿಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಅಟ್ಲಿ ನಿರ್ದೇಶನದಲ್ಲಿ ಮೂಡಿಬಂದಿರುವ 'ಜವಾನ್'​ ಚಿತ್ರಕ್ಕೆ ಭರ್ಜರಿ ಓಪನಿಂಗ್​ ಸಿಕ್ಕಿದ್ದು, ಶಾರೂಖ್​ ಖಾನ್​ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ತೆರಳಿದ್ದಾರೆ. ಎಸ್​ಆರ್​ಕೆ ಮೇಲಿನ ಅಭಿಮಾನವನ್ನು ವಿಶೇಷ ರೀತಿಯಲ್ಲಿ ಪ್ರದರ್ಶಿಸಲು ಮುಂದಾದ ಫ್ಯಾನ್ಸ್​, ಜವಾನ್​ ಪೋಸ್ಟರ್​ನಲ್ಲಿ ಶಾರೂಖ್​ ಮುಖಕ್ಕೆ ಬ್ಯಾಂಡೇಜ್​ ಧರಿಸಿದಂತೆ, ತಾವು ಸುತ್ತಿಕೊಂಡು ಥಿಯೇಟರ್​ಗಳಿಗೆ ಬಂದಿದ್ದಾರೆ. ಈ ಮುಖೇನ ವಿಭಿನ್ನ ರೀತಿಯಲ್ಲಿ ತಮ್ಮ ನೆಚ್ಚಿನ ನಟನ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ.

ಮುಖಕ್ಕೆ ಬ್ಯಾಂಡೇಜ್ ಸುತ್ತಿಕೊಂಡು ಚಿತ್ರಮಂದಿರಗಳಿಗೆ ಬಂದ ಶಾರೂಖ್​ ಖಾನ್​ ಅಭಿಮಾನಿಗಳು, ಇತರ ಚಿತ್ರರಸಿಕರ ಗಮನ ಸೆಳೆದಿದ್ದಾರೆ. ನಟನ ಡೈಲಾಗ್, ಶಿಳ್ಳೆ ಹೊಡೆದು ಸಿನಿಮಾವನ್ನು ಸಂಭ್ರಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net