ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ ಅಪಾರ

molkere
Published on

ಬೀದರ್: ಸದೃಢ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕ ತೆರೆ ಹಿಂದೆ ನಿಂತು ತನ್ನದೇ ಆದ ಕೊಡುಗೆ ನೀಡುತ್ತ ಬಂದಿದ್ದಾನೆ. ಇಂದು ಭಾರತ ವೈಜ್ಞಾನಿಕ, ಆರ್ಥಿಕವಾಗಿ ಜಗತ್ತಿನ ಮುಂದೆ ತಲೆ ಎತ್ತಿ ನಿಂತಿರುವುದರಲ್ಲಿ ಶಿಕ್ಷಕರ ಮಹತ್ತರ ಪಾತ್ರವಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಬಿ.ಜಿ. ಮೂಲಿಮನಿ ಹೇಳಿದರು.
ಗುರುನಾನಕ್ ಸಂಸ್ಥೆಯಿಂದ ನಗರದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನ ಹಾಗೂ ಕಲ್ಯಾಣ ಕರ್ನಾಟಕ ಐಕಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ವೃತ್ತಿ ಎಂದರೆ ಶಿಕ್ಷಕ ವೃತ್ತಿ ಎಂದರು.
ಸಂಸ್ಥೆ ಅಧ್ಯಕ್ಷ ಡಾ.ಎಸ್. ಬಲಬೀರಸಿಂಗ್, ಉಪಾಧ್ಯಕ್ಷೆ ರೇಷ್ಮಾ ಕೌರ್, ಪ್ರಾಂಶುಪಾಲ ಎನ್.ರಾಜು ಇತರರಿದ್ದರು. ವಿವಿಧ ಕ್ಷೇತ್ರಗಳ ಸಾಧಕರಿಗೆ ಶ್ರೀ ನಾನಕ್ ಝೀರಾ ಸಾಹೇಬ್ ಫೌಂಡೇಷನ್ನಿಂದ 2023ರ ಕಲ್ಯಾಣ ಕರ್ನಾಟಕ ಐಕಾನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗುರುನಾನಕ್ ಪಬ್ಲಿಕ್ ಶಾಲೆ ಮುಖ್ಯಗುರು ಆರೀಫ್ ಹಾದಿ, ರಾಯಚೂರಿನ ನವೋದಯ ಆಸ್ಪತ್ರೆಯ ಡಾ.ಗಿರೀಶ್ ಕತ್ತಿ, ವಿಟಿಯು ಪ್ರಾದೇಶಿಕ ಕಚೇರಿ ಕಲಬುರಗಿಯ ಡಾ.ಶುಭಾಂಗಿ, ಕನರ್ಾಟಕ ಕಾಲೇಜಿನ ಡಾ.ಮಲ್ಲಿಕಾರ್ಜುನ ಹಂಗರಗಿ, ಅಲ್ಬದರ್ ರೂರಲ್ ಡೆಂಟಲ್ ಕಾಲೇಜಿನ ಡಾ.ಸೈಯದಾ ಅಶರ್ಿಯಾ ಆರಾ, ಚಿಟಗುಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಸುರೇಂದ್ರ ಸಿಂಗ್, ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಬಸವರಾಜ ಮೋಳಕಿರೆ, ಸಂತಪುರ ಸರ್ಕಾರಿ ಪ್ರೌಢ ಶಾಲೆಯ ಶಿವಲಿಂಗ ಹೇಡೆ, ರಾಮಜೋಹನ, ದೇವೇಂದ್ರ ಪದಶೆಟ್ಟಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net