ಈ ಒಂದು ಕಾರಣಕ್ಕೆ ಸಿನಿಮಾ ಸೆಟ್​ನಲ್ಲಿ ಅಳುತ್ತಿದ್ದೆ; ದುಃಖದ ಸಮಯ ನೆನೆದ ಶಾಹಿದ್​ ಕಪೂರ್​​​ | Shahid Kapoor

Untitled design - 2024-12-02T173820.714
Published on

ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್(Shahid Kapoor) ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದು ಅಪರೂಪ. ಡ್ಯಾನ್ಸರ್​ನಿಂದ ಪ್ರಾರಂಭಿಸಿ ಚಿತ್ರರಂಗದಲ್ಲಿ ಸೂಪರ್​ಸ್ಟಾರ್​​ ಆಗುವವರೆಗೆ ಪ್ರಯಾಣ ಬೆಳಸಿರುವ ಶಾಹಿದ್​​ ಕಪೂರ್​​ ವೃತ್ತಿಜೀವನದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದಾರೆ. ಮದುವೆಗೂ ಮುನ್ನ ಶಾಹಿದ್​​​ ಹೆಸರು ಬಿಟೌನ್​​ನ ಅನೇಕ ಸ್ಟಾರ್​ ನಟಿಯರ ಹೆಸರೊಂದಿಗೆ ತಳುಕು ಹಾಕಿಕೊಂಡಿತ್ತು. ಕೊನೆಗೆ ಮೀರಾ ರಜಪೂತ್ ಅವರೊಂದಿಗೆ ವಿವಾಹವಾದರು. ಈ ದಂಪತಿಗೆ ಸದ್ಯ ಇಬ್ಬರು ಮಕ್ಕಳಿದ್ದಾರೆ.

ವೈಯಕ್ತಿಕ ಜೀವನದ ಕುರಿತು ಮಾತನಾಡದ ನಟ ಶಾಹಿದ್​ ಕಪೂರ್​ ಇತ್ತೀಚೆಗೆ ತಮ್ಮ ಜೀವನದ ಕುರಿತ ಹಲವು ವಿಚಾರವನ್ನು ಮುಕ್ತವಾಗಿ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಶಾಹಿದ್ ಕಪೂರ್​ ಅವರನ್ನು ನೀವು ವೃತ್ತಿಜೀವನದ ಕಾರಣ ಅವರು ಎಂದಾದರೂ ಏಕಾಂಗಿಯಾಗಿ ಅತ್ತಿದ್ದೀರಾ ಎಂದು ಕೇಳಲಾಯಿತು. ಅದಕ್ಕೆ ಉತ್ತರಿಸಿದ ನಟ ಶಾಹಿದ್​​​​, ಹಾರ್ಟ್​ಬ್ರೇಕ್​​​ಗೆ ಒಳಗಾದಾಗ ಮಾತ್ರ ಅತ್ತಿದ್ದೇನೆ, ಸಿನಿಮಾದ ವಿಚಾರವಾಗಿ ನಾನು ಎಂದಿಗೂ ಅತ್ತಿಲ್ಲ. ಆ ಸಮಯ ನಿಜವಾಗಿಯೂ ಕೆಟ್ಟದಾಗಿತ್ತು ಎಂದು ಹೇಳಿದ್ದಾರೆ. ಬಾಲಿವುಡ್​ ಅಂಗಳದಲ್ಲಿ ಶಾಹಿದ್​ ಕಪೂರ್​ ಮತ್ತು ಕರೀನಾ ಕಪೂರ್​ ಡೇಟಿಂಗ್​ ಸುದ್ದಿ ಸುದೀರ್ಘ ಕಾಲದವರೆಗೂ ಹಬ್ಬಿತ್ತು.

ಸಿನಿಮಾ ಚಿತ್ರೀಕರಣದ ವೇಳೆ ಅಳುತ್ತಿದ್ದ ಘಟನೆಯೊಂದ ನೆನಪಿಸಿಕೊಂಡ ಶಾಹಿದ್ ಕಪೂರ್​​, ನನ್ನ ಮೇಕಪ್ ಮ್ಯಾನ್ ಒಮ್ಮೆ ನನಗೆ ಹೇಳಿದರು, ನಾನು ನಿಮ್ಮ ಮೇಕಪ್ ಮುಗಿಸಿದ್ದೇನೆ! ಈಗಷ್ಟೆ ಮೇಕಪ್​ ಮಾಡಿದ್ದೇನೆ ದಯವಿಟ್ಟು ನೀವು ನಂತರ ಅಳಬಹುದೇ ಎಂದು ಹೇಳಿದ್ದರು. ಅದಕ್ಕೆ ನಾನು ಈ ಬಗ್ಗೆ ನಾನೇನೂ ಮಾಡಲು ಸಾಧ್ಯವಿಲ್ಲ, ನನಗೆ ಯಾವುದೇ ನಿಯಂತ್ರಣವಿಲ್ಲ. ನನ್ನನ್ನು ನಾನೇ ಹಾಳು ಮಾಡಿಕೊಳ್ಳುತ್ತಿದ್ದೇನೆ ಎನ್ನಿಸುತ್ತಿದೆ ಎಂದು ಹೇಳಿದೆ. ಅಸಲಿಗೆ ನಾನು ನನ್ನ ಭಾವನಾತ್ಮಕ ಸ್ಥಿತಿಯನ್ನು ಉಲ್ಲೇಖಿಸಿ ಜೋರಾಗಿ ಅಳುತ್ತಿದ್ದೆ ಎಂದು ಹೇಳಿದರು.

ಇದೇ ಸಮಯದಲ್ಲಿ ಶಾಹಿದ್ ಕಪೂರ್ ಜನರು ಬದಲಾಗಬೇಕಾದ ಒಂದು ವಿಷಯದ ಬಗ್ಗೆಯೂ ಮಾತನಾಡಿದರು. ಭಾರತೀಯ ಪುರುಷರಿಗೆ ಚಿಕ್ಕ ವಯಸ್ಸಿನಿಂದಲೇ ಈ ವಿಷಯವನ್ನು ಕಲಿಸಲಾಗುತ್ತದೆ. ನೀವು ಎಲ್ಲವನ್ನೂ ನೋಡಿಕೊಳ್ಳಬೇಕು ಮತ್ತು ಕುಟುಂಬವನ್ನು ರಕ್ಷಿಸಬೇಕು. ಆದ್ದರಿಂದ ನೀವು ಯಾರನ್ನು ಪ್ರೀತಿಸುತ್ತೀರೋ ಅವರನ್ನು ನೀವು ರಕ್ಷಿಸಬೇಕು. ಈ ವಿಷಯವು ಮನಸ್ಸಿನಲ್ಲಿ ಬೇರೂರಿದೆ ಕೆಲವೊಮ್ಮೆ ಈ ವಿಷಯವು ನಿಮಗೆ ದೊಡ್ಡ ಒತ್ತಡವಾಗಿ ಪರಿಣಮಿಸುತ್ತದೆ ಎಂದು ಹೇಳಿದರು.

ಕೆಲವೊಮ್ಮೆ ನೀವು ವಿಶ್ರಾಂತಿ ಪಡೆಯಬೇಕು ಮತ್ತು ಯಾವುದರ ಬಗ್ಗೆಯೂ ಚಿಂತಿಸಬಾರದು ಎಂದು ಬಯಸುತ್ತೀರಿ, ನೀವು ಪ್ರಪಂಚದ ಬಗ್ಗೆ ಕಾಳಜಿ ವಹಿಸಬೇಕಾಗಿಲ್ಲ ಮತ್ತು ಯಾರಾದರೂ ನಿಮ್ಮ ಬಗ್ಗೆ ಕಾಳಜಿ ವಹಿಸಬೇಕು ಎಂದು ನೀವು ಅನೇಕ ಬಾರಿ ಬಯಸುತ್ತೀರಿ. ಕೆಲವೊಮ್ಮೆ ನಾವು ನಮ್ಮ ಪಾತ್ರಗಳನ್ನು ಬದಲಾಯಿಸಬೇಕಾಗುತ್ತದೆ. ಸಹಾಯದ ಅಗತ್ಯವನ್ನು ಅನುಭವಿಸುವುದರಲ್ಲಿ ಯಾವುದೇ ತಪ್ಪಿಲ್ಲ ಏಕೆಂದರೆ ನಾವೆಲ್ಲರೂ ಮನುಷ್ಯರು. ನಾವೆಲ್ಲರೂ ನಮ್ಮದೇ ಆದ ಭಾವನೆಗಳನ್ನು ಹೊಂದಿದ್ದೇವೆ. ಅನೇಕ ಪುರುಷರು ತಮ್ಮ ದೌರ್ಬಲ್ಯ ಮತ್ತು ನೋವನ್ನು ವ್ಯಕ್ತಪಡಿಸಲು ಕಷ್ಟಪಡುತ್ತಾರೆ ಎಂದು ಹೇಳಿದರು.

ರೋಶನ್ ಆಂಡ್ರ್ಯೂಸ್ ನಿರ್ದೇಶನದ ದೇವ ಸಿನಿಮಾದಲ್ಲಿ ಶಾಹಿದ್​​ ಕಪೂರ್​​​​ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಅವರನ್ನು ಪ್ರಮುಖ ಪಾತ್ರದಲ್ಲಿ ಕಾಣಬಹುದು. ಸಿನಿಮಾ 2025 ಜನವರಿ 31 ಬಿಡುಗಡೆಯಾಗಲಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net