Mufasa The Lion King | ಮುಫಾಸಾ ಪಾತ್ರಕ್ಕೂ ನನ್ನ ಜೀವನಕ್ಕೂ ಸಾಮ್ಯತೆ ಇದೆ; ಬಿಟೌನ್​ ಕಿಂಗ್ ಖಾನ್​​​ ಹೀಗೆಳಿದ್ದೇಕೆ?

Untitled design - 2024-11-27T161616.666
Published on

ಮುಂಬೈ: ಮುಫಾಸಾ.. ದಿ ಲಯನ್ ಕಿಂಗ್(Mufasa The Lion King) ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು ಎಂದರೆ ತಪ್ಪಗಲಾರದು. ಇದು ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಪ್ರೇಕ್ಷಕರಿಗೆ ಲಭ್ಯವಾಗಲಿದೆ. ತೆಲುಗಿನಲ್ಲಿ ಮುಫಾಸಾ ಪಾತ್ರಕ್ಕೆ ಟಾಲಿವುಡ್​ ಪ್ರಿನ್ಸ್​ ಮಹೇಶ್​​ಬಾಬು ಹಾಗೂ ಹಿಂದಿಯಲ್ಲಿ ಮುಫಾಸಾ ಪಾತ್ರಕ್ಕೆ ಶಾರೂಖ್​ ಖಾನ್​​ ಧ್ವನಿ ನೀಡುತ್ತಿರುವುದು ಗೊತ್ತೆ ಇದೆ.

ಹಿಂದಿಯಲ್ಲಿ ಮುಫಾಸಾ ಪಾತ್ರಕ್ಕೆ ಶಾರೂಖ್​ ಖಾನ್​​ ಈಗಾಗಲೇ ಧ್ವನಿ ನೀಡಿದ್ದಾರೆ. ಮುಫಾಸಾ ಅವರ ಹೋರಾಟ ಮತ್ತು ಕಠಿಣ ಪರಿಶ್ರಮದ ಕಥೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇದು ನನ್ನ ಜೀವನವನ್ನು ಹೋಲುತ್ತದೆ ಎಂದು ಸ್ವತಃ ಶಾರೂಖ್​ ಅವರೇ ಹೇಳಿದ್ದಾರೆ.

ಮುಫಾಸಾ ಪಾತ್ರದೊಂದಿಗೆ ಆಳವಾದ ಸಂಪರ್ಕ ಹೊಂದಿರುವುದಾಗಿ ಶಾರೂಖ್​​ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಮುಫಾಸಾ: ದಿ ಲಯನ್ ಕಿಂಗ್ ಸಿನಿಮಾದಲ್ಲಿ ಮುಫಾಸಾದ ಪ್ರಯಾಣವನ್ನು ಚಿತ್ರಿಸುತ್ತದೆ. ಇದರಲ್ಲಿ ಅವನು ಅನಾಥ ಸಿಂಹ ಎಂದು ತನ್ನ ಗುರುತನ್ನು ಕಂಡುಕೊಳ್ಳುತ್ತಾನೆ ಮತ್ತು ಕಾಡಿನ ರಾಜನಾಗುತ್ತಾನೆ. ಮುಫಾಸಾದ ಈ ಹೋರಾಟವನ್ನು ಶಾರೂಖ್​​ ಖಾನ್ ತಮ್ಮ ಧ್ವನಿಯಿಂದ ಜೀವಂತಗೊಳಿಸಿದ್ದಾರೆ.

ಇತ್ತೀಚಿನ ವಿಡಿಯೋದಲ್ಲಿ ಕಿಂಗ್ ಖಾನ್ ಮುಫಾಸಾ ಅವರ ಪ್ರಯಾಣವನ್ನು ತನ್ನ ಸ್ವಂತ ಪ್ರಯಾಣದೊಂದಿಗೆ ಲಿಂಕ್ ಮಾಡುತ್ತಾ, ಮುಫಾಸಾ ತನ್ನ ಕಠಿಣ ಪರಿಶ್ರಮ ಮತ್ತು ಹೋರಾಟದ ಮೂಲಕ ಕಾಡಿನ ರಾಜನಾಗುವ ಹಕ್ಕನ್ನು ಗಳಿಸಿದಂತೆಯೇ ಅದೇ ರೀತಿ ನಾನು ಕೂಡ ಅನೇಕ ಕಷ್ಟಗಳ ನಡುವೆಯೂ ಭಾರತೀಯ ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸಿದ್ದಾನೆ ಎಂದಿದ್ದಾರೆ.

ಇದು ಸಣ್ಣ ಸಿಂಹದಿಂದ ರಾಜನಾಗುವವರೆಗೆ ಅವನ ಪ್ರಯಾಣವನ್ನು ತೋರಿಸುತ್ತದೆ. ಇದು ನನ್ನ ವೃತ್ತಿಜೀವನವನ್ನು ಹೋಲುತ್ತದೆ ಎಂಬುದು ಶಾರೂಖ್​ ಅವರ ಮಾತಾಗಿದೆ. ಶಾರೂಖ್ ಅವರು ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದಾಗ ತಮ್ಮ ವೃತ್ತಿಜೀವನದ ಆರಂಭದಲ್ಲಿ ಅನೇಕ ಹೋರಾಟಗಳನ್ನು ಎದುರಿಸಿದ್ದಾರೆ. ಆದರೆ ನಿರಂತರ ಪ್ರಯತ್ನಗಳು ಅವರನ್ನು ಉದ್ಯಮದಲ್ಲಿ ಎತ್ತರದ ಸ್ಥಾನಕ್ಕೆ ಕೊಂಡೊಯ್ದಿದೆ. ಮುಫಾಸಾ ಪಾತ್ರದಲ್ಲಿ ಶಾರೂಖ್ ತನ್ನ ಜೀವನದ ಹೋರಾಟ ಮತ್ತು ಯಶಸ್ಸಿನ ಒಂದು ನೋಟ ಎಂದಿದ್ದಾರೆ.

ಮುಫಾಸಾ.. ದಿ ಲಯನ್ ಕಿಂಗ್ ಈ ಚಿತ್ರವು 20 ಡಿಸೆಂಬರ್ 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದನ್ನು ಹೊರತುಪಡಿಸಿ ಶಾರೂಖ್​ ಖಾನ್​​ ಅವರು ಶೀಘ್ರದಲ್ಲಿ ಕಿಂಗ್ ಹೆಸರಿನ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಸುಜೋಯ್ ಘೋಷ್ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಸುಹಾನಾ ಖಾನ್ ಮತ್ತು ಅಭಿಷೇಕ್ ಬಚ್ಚನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net