ಪಠಾಣ್​ ಚಿತ್ರದ ದೃಶ್ಯ ಮುಂದಿಟ್ಟು ಶಾರುಖ್​, ಸಲ್ಮಾನ್​ಗೆ ಟಕ್ಕರ್​ ಕೊಟ್ರಾ ಅಮೀರ್​ ಖಾನ್? | Pathan

Pathan
Published on

ಮುಂಬೈ: ನಟ ಶಾರುಖ್​​ ಖಾನ್​ ಅಭಿನಯದ ಪಠಾಣ್​ (Pathan)ಸಿನಿಮಾದಲ್ಲಿ ಮೂಡಿಬಂದಿರುವ ಟ್ರೈನ್​ನಲ್ಲಿ ನಡೆಯುವ ಸಾಹಸದ ದೃಶ್ಯದ ತುಣುಕೊಂದನ್ನು ಮುಂದಿಟ್ಟು ನಟ ಅಮೀರ್​ ಖಾನ್​ ಬಾಲಿವುಡ್​ನ ಕಿಂಗ್ ಖಾನ್​ರನ್ನು ಗೇಲಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರು ನೀಡಿದ ಹೇಳಿಕೆ ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಖಾಸಗಿ ಚಾನಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮೀರ್​ ಖಾನ್​, 'ನನಗೆ ಈ ದೃಶ್ಯವು ನಿಜವಾಗಿಯೂ ತಮಾಷೆ ಅನಿಸಿತು. ನಾನು ಆ ಚಿತ್ರವನ್ನು ನೋಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಸೀನ್​ ಗಮನಿಸಿದೆ. ಇದನ್ನು ನೀವು ಗಮನಿಸಬಹುದು. ನಾನು ಬಹಳ ಸಲ ನೋಡಿದ್ದೇನೆ ತುಂಬಾ ಹಾಸ್ಯಸ್ಪದವಾಗಿದೆ ಎಂದಿದ್ದಾರೆ.

ಮಾತು ಮುಂದುವರಿಸಿದ ಅಮೀರ್ ಖಾನ್, 'ಶಾರುಖ್​ ಮತ್ತು ಸಲ್ಮಾನ್​ ಖಾನ್​ರ ಈ ದೃಶ್ಯ ನೋಡಿದ ಮೇಲೆ ಎಲ್ಲಾ ಯುವ ನಟರು ಅಸಮಾಧಾನಗೊಂಡಿರುತ್ತಾರೆ. ಪಠಾಣ್​ ಸಿನಿಮಾದಲ್ಲಿ ಶಾರುಖ್​ ಜತೆ ಸಲ್ಮಾನ್​ ಖಾನ್​ ಅತಿಥಿ ಪಾತ್ರವಹಿಸಿದ್ದಾರೆ. ಇನ್ನು ಈ ಸಾಹಸಮಯ ದೃಶ್ಯದಲ್ಲಿ ವಿಲನ್​ಗಳ ಜತೆಗೆ ಶಾರುಖ್​ ಮತ್ತು ಸಲ್ಮಾನ್​ ಇಬ್ಬರು ಹೊಡೆದಾಡಿಕೊಳ್ಳುತ್ತಿದ್ದಾರೆ. ಬಳಿಕ ಭಾರತೀಯ ಬೇಹುಗಾರಿಗೆಯ ಹಿಡಿತವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂದು ಚಿತ್ರದಲ್ಲಿ ಮಾತನಾಡಿಕೊಳ್ಳುತ್ತಾರೆ. ಅಸಲಿಗೆ ಇದರ ಅರ್ಥ ಹಿಂದಿ ಚಿತ್ರರಂಗದ ಹಿಡಿತವನ್ನು ತಗೆದುಕೊಳ್ಳುವ ಮುಸುಕಿನ ಗುದ್ದಾಟ ಎಂದು ಅಮೀರ್ ಪರೋಕ್ಷವಾಗಿ ಇಲ್ಲಿ ಉಲ್ಲೇಖಿಸಿದ್ದಾರೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net