ಕಿರಣ್​​ ರಾವ್​ ಜತೆಗಿನ ವಿಚ್ಛೇದನದ ಕುರಿತು ಮಿಸ್ಟರ್ ಪರ್ಫೆಕ್ಷನಿಸ್ಟ್ ಮಾತು; ಸಂಬಂಧದ ಅಸಲಿ ಸತ್ಯ ಬಿಚ್ಚಿಟ್ಟ Aamir Khan

Untitled design - 2024-11-12T175544.705
Published on

ಮುಂಬೈ: ಬಾಲಿವುಡ್​ನಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿಯಾಗಿರುವ ಅಮೀರ್​ ಖಾನ್​​​​​​​(Aamir Khan ಅವರು ತಮ್ಮ ವೈಯಕ್ತಿಕ ವಿಚಾರವಾಗಿ ಯಾವಾಗಲೂ ಮುನ್ನೆಲೆಯಲ್ಲಿರುತ್ತಾರೆ. ಅಮೀರ್​ ಮತ್ತು ಕಿರಣ್​​ ರಾವ್​ ಅವರು 2021ರಲ್ಲಿ ವಿಚ್ಛೇದನ ಪಡೆದಿರುವುದು ಗೊತ್ತೆ ಇದೆ. ವಿಚ್ಚೇದನದ ನಂತರವೂ ಈ ಇಬ್ಬರೂ ಸ್ನೇಹಿತರಂತೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೀಗ ತಮ್ಮ ವಿಚ್ಛೇದನದ ಕುರಿತು ಅಮೀರ್​ ಖಾನ್​​​​ ಸ್ಪಷ್ಟನೆಯನ್ನು ನೀಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಿರಣ್​ ರಾವ್​ ಮತ್ತು ತಮ್ಮ ವಿಚ್ಛೇದನದ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅಮೀರ್​ ಖಾನ್​​, ವಿಚ್ಛೇದನವು ಪತಿ ಮತ್ತು ಪತ್ನಿ ಸಿದ್ಧಾಂತ ಮತ್ತು ಜವಾಬ್ದಾರಿಗಳಿಂದ ದೂರವಿಟ್ಟಿದೆ. ಆದರೆ ಅದು ವೃತ್ತಿಪರವಾಗಿರಲಿ ಅಥವಾ ವೈಯಕ್ತಿಕವಾಗಿರಲಿ ನಮ್ಮ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ನಾವು ಬೇರ್ಪಟ್ಟಿರುವುದು ಸ್ವಾಭಾವಿಕವಾಗಿ ಸಂಭವಿಸಿದೆ ಎಂದು ನಾವು ಭಾವಿಸಿದ್ದೇವೆ. ನಾವು ಗಂಡ-ಹೆಂಡತಿಯಾಗಿ ಬೇರೆಯಾಗುತ್ತಿದ್ದೇವೆ ಹೊರತು ಮನುಷ್ಯರಾಗಿ ದೂರವಾಗುತ್ತಿಲ್ಲ. ಹಾಗಾಗಿ ಇದರಿಂದ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ವಿಚ್ಛೇದನದ ನಂತರವೂ ಅಮೀರ್ ಖಾನ್​ ಜತೆಗೂಡಿ ಕಿರಣ್​ ರಾವ್​​​ ಕೆಲಸ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಅಮೀರ್​​​, ಅವರೊಂದಿಗೆ ಕೆಲಸ ಮಾಡುವುದು ಅದ್ಭುತವಾಗಿದೆ ಎಂದು ಹೇಳುತ್ತಾ ಕಿರಣ್​​​​ ಅವರನ್ನು ಪವರ್ ಹೌಸ್ ಎಂದು ಕರೆದರು. ವಿಚ್ಛೇದನವು ವಿಭಿನ್ನ ವಿಷಯವಾಗಿದೆ. ಸೃಜನಾತ್ಮಕ ವ್ಯಕ್ತಿಗಳಾಗಿ ನಾವು ಚೆನ್ನಾಗಿ ಬೆರೆಯುತ್ತೇವೆ ಮತ್ತು ನಾವು ಪರಸ್ಪರರ ಮನಸ್ಸನ್ನು ನಂಬುತ್ತೇವೆ. ಅದಕ್ಕಾಗಿಯೇ ನಾವು ಚೆನ್ನಾಗಿ ಕೆಲಸ ಮಾಡುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಅಮೀರ್ ಮತ್ತು ಕಿರಣ್ 2005ರಲ್ಲಿ ವಿವಾಹವಾದರು. ಅವರಿಗೆ ಆಜಾದ್ ಎಂಬ ಮಗನೂ ಇದ್ದಾನೆ. 16 ವರ್ಷಗಳ ನಂತರ ದಾಂಪತ್ಯ ಜೀವನದಿಂದ ಬೇರೆಯಾಗಲು ಅಮೀರ್ ಮತ್ತು ಕಿರಣ್ ನಿರ್ಧರಿಸಿದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​​​ ಮಾಡುವ ಮೂಲಕ ಈ ಬಗ್ಗೆ ಅಭಿಮಾನಿಗಳಿಗೆ ವಿಷಯ ತಿಳಿಸಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net