ಶಾರುಖ್​ ಚಿಮ್ನಿಯಲ್ಲಿ ಹೊಗೆ ಬಂದಂತೆ ಧಮ್ ಹೊಡೆಯುತ್ತಾನೆ, ಆದ್ರೆ ಸಲ್ಮಾನ್​... ಹಿರಿಯ ನಟನ ಹೇಳಿಕೆ ವೈರಲ್​

Govind Namdev
Published on

ಮುಂಬೈ: ಬಾಲಿವುಡ್​ನ ಸೂಪರ್​ಸ್ಟಾರ್​ಗಳಾದ ಶಾರುಖ್​ ಖಾನ್​ ಹಾಗೂ ಸಲ್ಮಾನ್​ ಖಾನ್​ ನಟನೆಯ ಚಿತ್ರ ಬಿಡುಗಡೆಯಾದರೆ ಅವರ ಫ್ಯಾನ್ಸ್​ಗೆ ಹಬ್ಬವಿದ್ದಂತೆ. ಬಿಡುಗಡೆ ದಿನವೇ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸುವ ಇವರ ಚಿತ್ರಗಳ ಗೆಲುವಿನ ಹಿಂದೆ ಸಾಮಾನ್ಯತೆ ಇರಬೇಕು ಎಂದು ಬಹತೇಕರು ಭಾವಿಸಿದ್ದಾರೆ. ಆದರೆ, ಇವರ ಕೆಲಸ ಮಾಡುವ ರೀತಿ ಭಿನ್ನವಾಗಿದ್ದು, ಈ ಬಗ್ಗೆ ಖ್ಯಾತ ನಟರೊಬ್ಬರು ಮಾತನಾಡಿದ್ದು, ಶಾರುಖ್​ ಹಾಗೂ ಸಲ್ಮಾನ್​ ನಡುವೆ ಇರುವ ವ್ಯತ್ಯಾಸವನ್ನು ಹಂಚಿಕೊಂಡಿದ್ದಾರೆ.

ಶಾರುಖ್​, ಸಲ್ಮಾನ್​ ಸೇರಿದಂತೆ ಬಾಲಿವುಡ್​ನ ಅನೇಕ ಸ್ಟಾರ್ ನಟರೊಂದಿಗೆ ನಟಿಸಿ ಖ್ಯಾತಿ ಪಡೆದಿರುವ ಹಿರಿಯ ನಟ ಗೋವಿಂದ್​ ನಾಮ್​ದೇವ್​ ಈ ಇಬ್ಬರು ನಟರ ಕುರಿತು ಹಲವು ವಿಚಾರವನ್ನು ಹಂಚಿಕೊಂಡಿದ್ದು, ಇಬ್ಬರ ನಡುವಿನ ವ್ಯತ್ಯಾಸಗಳನ್ನು ವಿವರಿಸಿದ್ದಾರೆ.

ಖಾಸಗಿ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಗೋವಿಂದ್​, ನಾನು ನೋಡಿದಂತೆ ಸಲ್ಮಾನ್​ ಖಾನ್​ ಸಿನಿಮಾ ಸೆಟ್​ಗಳಲ್ಲಿ ಸಿಬ್ಬಂದಿ ಹಾಗೂ ಸಹ ನಟರೊಂದಿಗೆ ಹೆಚಚು ಮಾತನಾಡುವುದಿಲ್ಲ. ಸೀನ್​ ಮುಗಿಯುತ್ತಿದ್ದಂತೆ ತಮ್ಮ ಕ್ಯಾರಾವಾನ್​ಗೆ ಹೋಗಿ ಕುಳಿತು ಬಿಡುತ್ತಾರೆ. ಆದರೆ, ಕೆಲವೊಮ್ಮೆ ತಮ್ಮ ಸಲೀಂ ಖಾನ್​ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಳ್ಳುತ್ತಿದ್ದರು.

ಆದರೆ ನಾನು ನೋಡಿದಂತೆ ಶಾರುಖ್​ ಹಾಗಲ್ಲ. ಅವರು ಸಿನಿಮಾ ಸೆಟ್​ನಲ್ಲಿರುವ ಪ್ರತಿಯೊಬ್ಬರನ್ನು ಮಾತನಾಡಿಸುತ್ತಾರೆ ಮತ್ತು ಅವರೊಂದಿಗೆ ಬರೆಯುತ್ತಾರೆ. ನಾನು ಕೆಲಸ ನಾನು ಕೆಲಸ ಮಾಡುವವರ ಬಗ್ಗೆ ಸಾಕಷ್ಟು ಕೇಳಿದ್ದೇನೆ, ಆದರೆ ಶಾರುಖ್​ ಅವರಲ್ಲಿ ಆ ಗುಣವನ್ನು ನೋಡಿದೆ. ಅವರು ಎಲ್ಲರಂತೆ ನಮ್ಮ ಜೊತೆ ಕುಳಿತುಕೊಂಡು ಊಟ ಮಾಡುತ್ತಿದ್ದರು. ರಾತ್ರಿ 2 ಗಂಟೆವರೆಗೂ ಕೆಲಸ ಮಾಡುತ್ತಿದ್ದರು. ರಾತ್ರಿ ಬರಿ ಮೂರುವರೆ ತಾಸು ಮಲಗಿ ಚೆನ್ನೈನಲ್ಲಿ ಕಾರ್ಯಕ್ರಮ ಒಂದನ್ನು ಅಟೆಂಡ್​ ಮಾಡಿ ಶೂಟಿಂಗ್​ನಲ್ಲಿ ನಮ್ಮೊಂದಿಗೆ ಭಾಗಿಯಾಗಿದ್ದರು. ಆಗ ನನಗೆ ಶಾರುಖ್​ ಎಂತಹ ಕೆಲಸಗಾರ ಎಂಬುದು ತಿಳಿಯಿತು.

ಶಾರುಖ್​ ಧೂಮಪಾನ ಮಾಡಲು ಶುರು ಮಾಡಿದರೆ ಚಿಮ್ನಿಯಲ್ಲಿ ಹೊಗೆ ಹೋದಂತೆ ಧಮ್​ ಹೊಡೆಯುತ್ತಾನೆ. ಆತ ಮುಂದೆ ಏನು ಮಾಡಬೇಕೆಂದು ಸದಾ ಯೋಚಿಸುತ್ತಾನೆ. ನಾನು ನೋಡಿದಂತೆ ಸೂಪರ್‌ಸ್ಟಾರ್‌ಗಳು ಸಾಮಾನ್ಯವಾಗಿ ಈ ಮನೋಭಾವವನ್ನು ಹೊಂದಿರುತ್ತಾರೆ. ಆದರೆ, ಶಾರುಖ್​ ನಾನು ನೋಡಿದಕ್ಕಿಂತ ಭಿನ್ನ ವ್ಯಕ್ತಿ ಎಂದು ಬಾಲಿವುಡ್​ನ ಹಿರಿಯ ನಟ ಗೋವಿಂದ್​ ನಾಮ್​ದೇವ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net