ಇನ್ಮುಂದೆ ಧೂಮಪಾನ ಮಾಡುವುದಿಲ್ಲ; ಬರ್ತ್​ಡೇ ಸೆಲೆಬ್ರೇಷನ್​ನಲ್ಲಿ Shah Rukh Khan ಫ್ಯಾನ್ಸ್​​ಗೆ ಹೇಳಿದಿಷ್ಟು..

Untitled design - 2024-11-04T184354.266
Published on

ಮುಂಬೈ: ಬಾಲಿವುಡ್‌ ಬಾದ್‌ಷಾ ಶಾರೂಖ್​ ಖಾನ್(Shah Rukh Khan)​​ ಶನಿವಾರ(ನವೆಂಬರ್​​ 2) ತಮ್ಮ 59ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಬಾಂದ್ರಾದಲ್ಲಿ ತಮ್ಮ ಅಭಿಮಾನಿಗಳು ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇನ್ನು ಮುಂದೆ ಧೂಮಪಾನ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ತಾವು 30 ವರ್ಷಗಳಿಂದ ಹೆಚ್ಚು ಧೂಮಪಾನ ಮಾಡುತ್ತಿದ್ದು ಈ ವಿಷಯದಲ್ಲಿ ತನ್ನನ್ನು ತಾನು ಮಾದರಿ ಎಂದು ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದಾರೆ.

30 ವರ್ಷಗಳ ಕಾಲ ಧೂಮಪಾನ ಮಾಡಿದ ನಂತರ ಧೂಮಪಾನವನ್ನು ತ್ಯಜಿಸುವುದನ್ನು ಸಮರ್ಥಿಸುವುದು ಸರಿಯಲ್ಲ. 30 ವರ್ಷಗಳ ಕಾಲ ಧೂಮಪಾನ ಮಾಡಿದ ನಂತರ ನಾನು ಧೂಮಪಾನ ಮಾಡಬೇಡಿ ಎಂದು ಸಲಹೆ ನೀಡುತ್ತಿರುವುದು ಕೆಟ್ಟ ವಿಷಯ. ಧೂಮಪಾನ ಮಾಡುವುದು ಒಳ್ಳೆಯದಲ್ಲ ಎಂದು ನಮಗೆ ತಿಳಿದಿದೆ. ನಾವು ಅದನ್ನು ತ್ಯಜಿಸಿದರೆ ಬಹಳ ಒಳ್ಳೆಯದು ಎಂದು ಹೇಳಿದರು.

ಧೂಮಪಾನವನ್ನು ತ್ಯಜಿಸಿದ ನಂತರ ನನಗೆ ಈ ಉಸಿರಾಟದ ಸಮಸ್ಯೆ ಬರುವುದಿಲ್ಲ ಎಂದು ನಾನು ಭಾವಿಸಿದೆ ಆದರೆ ನಾನು ಅದನ್ನು ಅನುಭವಿಸುತ್ತಿದ್ದೇನೆ. ಇನ್ಶಾ ಅಲ್ಲಾ, ಅವನೂ ಚೆನ್ನಾಗಿದ್ದೇನೆ ಎಂದು ತಿಳಿಸಿದರು.

ದಿನಕ್ಕೆ 100 ಸಿಗರೇಟ್ ಸೇದುತ್ತೇನೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಶಾರೂಖ್​ ಹೇಳಿದ್ದರು. ಆ ಹೇಳಿಕೆಗೆ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಇದೇ ಸಮಯದಲ್ಲಿ ತನ್ನನ್ನು ಅನುಸರಿಸುವ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ. ಜಬ್ ಜಬ್ ಜಿಂದಗಿ ಮೇ ಜೈಸಾ ಅಚ್ಚಾ ಲಗೇ ವೋ ಕರೋ... ಮೈನ್ ಕೋಯಿ ಐಸಾ ರೋಲ್ ಮಾಡೆಲ್ ನಹೀ ಹೂಂ... (ನಿಮಗೆ ಸರಿ ಎನಿಸುವದನ್ನು ಮಾಡಿ. ನಾನು ರೋಲ್ ಮಾಡೆಲ್ ಅಲ್ಲ) ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net