

ಬೆಂಗಳೂರು: ಮೊಬೈಲ್ ಕಳ್ಳತನ ಉದ್ದೇಶಕ್ಕೆ ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಬಳಿಕ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಬಿಟಿಎಂ 2ನೇ ಹಂತದ ಎನ್‌ಎಸ್‌ಪಾಳ್ಯದ ಅಜಯ್ ಕುವರ್ ಅಪರಾಧಿ. 30 ಸಾವಿರ ರೂ. ದಂಡದ ಮೊತ್ತ ಮತ್ತು ಡಿಎಲ್‌ಎಸ್‌ಎಯಿಂದ 70 ಸಾವಿರ ರೂ.ಗಳನ್ನು ನೊಂದ ಬಾಲಕಿಗೆ ಪರಿಹಾರ ನೀಡಬೇಕೆಂದು ಎಸ್‌ಟಿಎಸ್‌ಸಿ 1ನೇ ನ್ಯಾಯಾಲಯದ ನ್ಯಾಯಾಧೀಶ ಎನ್. ಎಂ. ರಮೇಶ್ ಆದೇಶದಲ್ಲಿ ತಿಳಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಕೃಷ್ಣವೇಣಿ ವಾದ ಮಂಡಿಸಿದ್ದರು.
ಅಪರಾಧಿ ಅಜಯ್‌ಕುವರ್ ಪತ್ನಿ ಕೌಟುಂಬಿಕ ಕಲಹದಿಂದ ಊರಿಗೆ ಹೋಗಿದ್ದಳು. ಆಕೆಗೆ ಕರೆ ಮಾಡಲು ಮೊಬೈಲ್ ಇರಲಿಲ್ಲ. ಮೊಬೈಲ್ ಕಳ್ಳತನ ಉದ್ದೇಶಕ್ಕೆ 2022ರ ಏ.27ರ ಬೆಳಗಿನ ಜಾವ 2.25ರಲ್ಲಿ ಮೈಕೋ ಲೇಔಟ್ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿರುವ ್ಲ್ಯಾಟ್‌ಗೆ ಅಪರಾಧಿ ನುಗ್ಗಿದ್ದ. ಅಲ್ಲಿಗೆ ಹೋದ ಮೇಲೆ ಕೊಠಡಿಯಲ್ಲಿ 10 ವರ್ಷದ ಬಾಲಕಿ ಒಂಟಿಯಾಗಿ ಮಲಗಿದ್ದನ್ನು ನೋಡಿ ಚಾಕು ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ.
ಅಜಯ್ ಮುಖಕ್ಕೆ ಗುದ್ದಿ ತಪ್ಪಿಸಿಕೊಂಡು ಕೂಗಿಕೊಂಡಾಗ ತಂದೆ-ತಾಯಿ ಎಚ್ಚರಗೊಂಡಿದ್ದರು. ಆಗ ಅಜಯ್ ್ಲ್ಯಾಟ್‌ನ ಬಾಲ್ಕನಿಯಿಂದ ಜಿಗಿದಾಗ ಬೆನ್ನಿಗೆ ಗಾಯವಾಗಿ ಕುಸಿದುಬಿದಿದ್ದ. ಬಾಲಕಿಯ ಪಾಲಕರೇ ಆಸ್ಪತ್ರೆಗೆ ದಾಖಲಿಸಿ ಮೈಕೋ ಲೇಔಟ್ ಠಾಣೆಗೆ ದೂರು ಸಲ್ಲಿಸಿದ್ದರು. ತನಿಖೆ ನಡೆಸಿದ ಅಂದಿನ ಇನ್‌ಸ್ಪೆಕ್ಟರ್ ಆರ್.ಎಸ್. ಚೌಧರಿ ನೇತೃತ್ವದ ತಂಡ ಅಜಯ್‌ಕುವರ್ ವಿರುದ್ಧ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪು ನೀಡಿದೆ.