

ಭುವನೇಶ್ವರ : ಒಡಿಶಾದ ಸರ್ಕಾರಿ ಅಧಿಕಾರಿಯೊಬ್ಬರು ಮಹಿಳಾ ಸಹೋದ್ಯೋಗಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಆದರೆ ರಾಷ್ಟ್ರೀಯ ಆಯುಷ್ ಅಭಿಯಾನದ ನಿರ್ದೇಶಕರಾಗಿರುವ ಬಿಭು ಪ್ರಸಾದ್ ಸಾರಂಗಿ, ತನ್ನ ವಿರುದ್ಧದ ಎಲ್ಲ ಆರೋಪಗಳು ಸುಳ್ಳು ಮತ್ತು ತನ್ನ ವಿರುದ್ಧ ಹೆಣೆದ ತಂತ್ರ ಎಂದು ಅಧಿಕಾರಿ ಪ್ರತಿ-ದೂರು ದಾಖಲಿಸಿದ್ದಾರೆ.
25 ವರ್ಷದ ಮಹಿಳೆ ಗುತ್ತಿಗೆ ಉದ್ಯೋಗಿ. ಆಯುಷ್ ಮಿಷನ್ ಅಡಿ ರಾಜ್ಯ ಕಾರ್ಯಕ್ರಮ ನಿರ್ವಹಣಾ ಘಟಕದಲ್ಲಿ (ಪಿಎಂಯು) ಕೆಲಸ ಮಾಡಲು ಮಹಿಳೆಯನ್ನು ಹೊರಗುತ್ತಿಗೆ ಕಂಪನಿ ನೇಮಕ ಮಾಡಿತ್ತು.
ವಾಟ್ಸ್‌ಆ್ಯಪ್‌ನಲ್ಲಿ ಸಾರಂಗಿ ತನಗೆ ಅಶ್ಲೀಲ ವಿಡಿಯೋ ಮತ್ತು ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ. ಆದರೆ ಆಕೆಯ ಈ ಆರೋಪ ಸುಳ್ಳು ಎಂದು ಪ್ರತಿ ಆರೋಪಿಸಿದ ಸಾರಂಗಿ, ಮಹಿಳೆ ಪಿಎಂಯು ಮುಖ್ಯಸ್ಥರಿಗೆ ನಿಕಟವರ್ತಿಯಾಗಿದ್ದು, ಆಕೆಯನ್ನು ನೇಮಿಸಿಕೊಳ್ಳಲು ಪಿಎಂಯು ಮುಖ್ಯಸ್ಥರು ನಕಲಿ ದಾಖಲೆಗಳನ್ನು ಬಳಸಿದ್ದಾರೆ ಎಂದು ಅವರು ಹೇಳಿದ್ದಾರೆ. "ನಾನು ಇತ್ತೀಚೆಗೆ ಇಲ್ಲಿ ಅಧಿಕಾರ ವಹಿಸಿಕೊಳ್ಳುವ ಮೊದಲೇ ಆಕೆ ಇಲ್ಲಿ ನೇಮಕಗೊಂಡಿದ್ದು, ಆಕೆಯ ಕೆಲಸದಲ್ಲಿನ ಏರುಪೇರುಗಳನ್ನು ತಾವು ಕಂಡುಕೊಂಡಿದ್ದು, ಇಬ್ಬರನ್ನೂ ಸೇವೆಯಿಂದ ಹೊರಹಾಕಲು ಮುಂದಾಗಿರುವುದಾಗಿ ಸಾರಂಗಿ ಹೇಳಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಪ್ರಕರಣದ ವಿವರಗಳನ್ನು ಬಹಿರಂಗಪಡಿಸಲು ಆಕೆ ಅನುಮಾನ ವ್ಯಕ್ತಪಡಿಸಿದ್ದು, ಆತನ ಮೇಲೆ ಕಿರುಕುಳ ಆರೋಪವಿದೆ ಎಂದು ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ. ಸಾರಂಗಿಯ ಹೇಳಿಕೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಮತ್ತು ತನಿಖೆ ಮಾಡುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಅನುಪ್ ಕುಮಾರ್ ಸಾಹೂ ತಿಳಿಸಿದ್ದಾರೆ. ಆದಾಗ್ಯೂ ಜೂನ್ 28 ರಿಂದ ಸಾರಂಗಿಯಿಂದ ಮಾನಸಿಕ ಮತ್ತು ಲೈಂಗಿಕ ದೌರ್ಜನ್ಯ ಆನುಭವಿಸುತ್ತಿರುವುದಾಗಿ ಆಕೆ ಆರೋಪಿಸಿದ್ದಾಳೆ.