More

    2021ರ ಕರೊನಾದ ಭಯಾನಕ ಭವಿಷ್ಯ ನುಡಿದ ಅಮೆರಿಕದ ಸಂಶೋಧಕರು!

    ವಾಷಿಂಗ್ಟನ್‌: ಕರೊನಾ ವೈರಸ್‌ ಕುರಿತಂತೆ ಸಂಶೋಧನೆಗಳು ಹೆಚ್ಚುತ್ತಿದ್ದಂತೆಯೇ ಭಯಾನಕ ಎನ್ನುವಂಥ ವರದಿಗಳು ಬರುತ್ತಲೇ ಇವೆ.

    ಅಂಥದ್ದೇ ಒಂದು ಭಯಂಕರ ಎನ್ನುವ ವರದಿಯನ್ನು ಅಮೆರಿಕದ ಮ್ಯಾಸಚೂಸೆಟ್ಸ್ ಇನ್ಸ್‌ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎಂಐಟಿ) ಸಂಶೋಧಕರು ನೀಡಿದ್ದಾರೆ. ಅದೇನೆಂದರೆ, ಭಾರತದಲ್ಲಿ 2021ರ ಫೆಬ್ರುವರಿ ವೇಳೆಗೆ ದಿನವೊಂದಕ್ಕೆ 2.87 ಲಕ್ಷ ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗುವ ಸಂಭವವಿದೆ ಎಂದ್ದಿದಾರೆ. 2021ರ ಮೇ ವೇಳೆಗೆ ಕರೊನಾ ಲಸಿಕೆ ಲಭ್ಯವಾಗದೇ ಇದ್ದಲ್ಲಿ ಜಾಗತಿಕವಾಗಿ ಕೊರೋನಾ ಸಂಖ್ಯೆ 25 ಕೋಟಿ ದಾಟಲಿದೆ ಎಂದಿದ್ದಾರೆ!

    ಇದನ್ನೂ ಓದಿ: ಕರೊನಾ ಗುಟ್ಟು ಬಚ್ಚಿಡಲು ಚೀನಾದಿಂದ ಅಬ್ಬಾ ಇದೆಂಥ ಕೃತ್ಯ… ಇಲ್ಲಿದೆ ಸ್ಫೋಟಕ ಮಾಹಿತಿ

    ಸಾಂಕ್ರಾಮಿಕ ರೋಗ ಪ್ರಸರಣದ ಹರಡುವಿಕೆಯ ಅಂದಾಜು ಮಾಡಲು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಬಳಕೆ ಮಾಡುವ ಪ್ರಮಾಣಿತ ಗಣಿತ ಮಾದರಿಯಾಗಿರುವ SEIR (Susceptible, Exposed, Infectious, Recovered) ಇದರ ಆಧಾರದ ಮೇಲೆ ಸಂಶೋಧಕರು ಈ ಮಾಹಿತಿ ನೀಡಿದ್ದಾರೆ. ಈ ಅಧ್ಯಯನ ತಂಡದಲ್ಲಿ ಎಂಐಟಿಯ ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ಹಜೀರ್ ರಹಮಂದಾದ್, ಟಿವಾಯ್‌ ಲಿಮ್ ಮತ್ತು ಜಾನ್ ಸ್ಟರ್ಮನ್ ಅವರು ಇದ್ದರು.

    ಜನಸಂಖ್ಯೆಯ ಆಧಾರವನ್ನು ಗಣನೆಗೆ ತೆಗೆದುಕೊಂಡರೆ ಭಾರತದಲ್ಲಿ ಅತಿ ಹೆಚ್ಚು ವೈರಸ್‌ ಕಾಣಿಸಿಕೊಳ್ಳುವುದು ಸಹಜವೇ. ಆದರೆ ಒಂದು ವೇಳೆ ಲಸಿಕೆ ಲಭ್ಯವಾಗದೇ ಇದ್ದರೆ 2021ರ ಫೆಬ್ರವರಿ ವೇಳೆಗೆ ಭಾರತ ದಿನಂಪ್ರತಿ 2.87 ಲಕ್ಷ ಪ್ರಕರಣಗಳಿಗೆ ಸಾಕ್ಷಿಯಾಗಲ್ಲುದು. ಈ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯನ್ನು ಹೊಂದಿದ ರಾಷ್ಟ್ರವಾಗಲಿದೆ ಎಂದಿದ್ದಾರೆ.

    ಜನಸಂಖ್ಯೆ ಅತೀ ಕಡಿಮೆ ಇದ್ದರೂ ಇದೀಗ ನಂ.1 ಸ್ಥಾನದಲ್ಲಿರುವ ಅಮೆರಿಕದಲ್ಲಿ ದಿನವೊಂದಕ್ಕೆ 95,000 ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದ್ದು, ದಕ್ಷಿಣ ಆಫ್ರಿಕಾ (21 ಸಾವಿರ ಪ್ರಕರಣಗಳು) ಇರಾನ್ (17 ಸಾವಿರ ಪ್ರಕರಣಗಳು ದಿನಕ್ಕೆ) ದಾಖಲಿಸಲಿವೆ ಎಂದಿದ್ದಾರೆ ಸಂಶೋಧಕರು.

    ಬಾರದ ಆಂಬ್ಯುಲೆನ್ಸ್‌- ಬುಟ್ಟಿಯಲ್ಲಿ ತುಂಬುಗರ್ಭಿಣಿಯ ಹೊತ್ತೊಯ್ದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts