More

    ಕರೊನಾ ಗುಟ್ಟು ಬಚ್ಚಿಡಲು ಚೀನಾದಿಂದ ಅಬ್ಬಾ ಇದೆಂಥ ಕೃತ್ಯ… ಇಲ್ಲಿದೆ ಸ್ಫೋಟಕ ಮಾಹಿತಿ

    ವುಹಾನ್‌: ಇದೇ ಜೂನ್‌ ತಿಂಗಳಿನಲ್ಲಿ ವುಹಾನ್‌ ನಗರದಲ್ಲಿ ಭಾರಿ ಪ್ರಮಾಣದ ಪ್ರವಾಹ ಉಂಟಾಗಿ ಲಕ್ಷಾಂತರ ಮಂದಿ ನೆಲೆ ಕಳೆದುಕೊಂಡರು, ಅನೇಕ ಮಂದಿ ಪ್ರವಾಹಕ್ಕೆ ಆಹುತಿಯಾದರು.

    ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಕಾರಣ, ಮೂರು ನದಿಗಳಿಂದ ನೀರನ್ನು ಬಿಡಲೇಬೇಕಾದ ಅನಿವಾರ್ಯತೆ ಉಂಟಾಯಿತು ಎಂದು ಚೀನಾ ಸರ್ಕಾರ ಹೇಳಿತ್ತು. ಆದರೆ ಇದು ಅನಿವಾರ್ಯತೆ ಅಲ್ಲ, ಬದಲಿಗೆ ಉದ್ದೇಶಪೂರ್ವಕವಾಗಿ ಇಂಥದ್ದೊಂದು ಕೃತ್ಯಕ್ಕೆ ಚೀನಾ ಎಸಗಿದೆ ಎನ್ನುವ ಆರೋಪ ಇದೀಗ ಕೇಳಿಬಂದಿದೆ.

    ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದ್ದು, ಇದರ ಸತ್ಯಾಸತ್ಯತೆಯನ್ನು ಪರಾಮರ್ಶಿಸಲು ಮುಂದಿನ ವಾರ ಚೀನಾಕ್ಕೆ ತೆರಳಲಿದೆ.

    ಅಷ್ಟಕ್ಕೂ ತನ್ನದೇ ನಗರಿಯನ್ನು ಪ್ರವಾಹಕ್ಕೆ ಸಿಲುಕಿಸಿ, ಜನರನ್ನು ತೊಂದರೆಗೆ ಸಿಲುಕಿಸುವಂಥ ದುಷ್ಕೃತ್ಯಕ್ಕೆ ಚೀನಾ ಕೈಹಾಕಿದ್ದೇಕೆ ಎನ್ನುವ ಪ್ರಶ್ನೆ ಬರುವುದು ಸುಲಭ. ಅದಕ್ಕೆ ಉತ್ತರ ಕರೊನಾ ವೈರಸ್‌ನ ಸತ್ಯವನ್ನು ಬಚ್ಚಿಡಲು ಎಂಬ ಸಂದೇಹವನ್ನು ವಿಶ್ವ ಆರೋಗ್ಯ ಸಂಸ್ಥೆ ವ್ಯಕ್ತಪಡಿಸಿದೆ.

    ಇದಾಗಲೇ ಸಾಕಷ್ಟು ಸುದ್ದಿಯಾಗಿರುವಂತೆ ಚೀನಾದ ವುಹಾನ್‌ ಪ್ರಾಂತ್ಯದಲ್ಲಿ ಹುಟ್ಟಿದೆ ಎಂದಿರುವ ಈ ವೈರಸ್‌ ಹಿಂದೆ ಚೀನಾದ ಕೈವಾಡವೇ ಇದೆ. ಬೇರೆ ರಾಷ್ಟ್ರಗಳ ಮೇಲೆ ವೈರಸ್‌ ಬಿಡಲು ತನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸುತ್ತಿದ್ದ ಸಮಯದಲ್ಲಿ ಪರೀಕ್ಷಾರ್ಥವಾಗಿ ವುಹಾನ್‌ ನಗರದ ಮೇಲೆ ವೈರಸ್‌ ಬಿಟ್ಟಿದೆ ಎನ್ನುವ ಗಂಭೀರ ಆರೋಪ ಇದೆ. ಇದೇ ಕಾರಣಕ್ಕೆ ಈ ವೈರಸ್‌ ಇಡೀ ವಿಶ್ವವನ್ನು ವ್ಯಾಪಿಸಿದರೂ ಚೀನಾದ ಬಹುತೇಕ ರಾಜ್ಯಗಳಿಗೆ ಈ ವೈರಸ್‌ ವ್ಯಾಪಿಸಿಲ್ಲ ಎನ್ನುವುದೂ ಈ ಸಂದೇಹಕ್ಕೆ ಕಾರಣವಾಗಿದೆ.

    ಆದ್ದರಿಂದ ಕರೊನಾ ವೈರಸ್‌ ಮಾವನ ನಿರ್ಮಿತ ಎಂಬ ಗಂಭೀರ ಆರೋಪವನ್ನು ಸಾಬೀತು ಮಾಡಲು ಬೇರೆ ದೇಶಗಳ ತಜ್ಞರು ರೆಡಿಯಾಗುತ್ತಿರುವ ಬೆನ್ನಲ್ಲೇ ಎಲ್ಲಾ ಸಾಕ್ಷ್ಯಾಧಾರಗಳನ್ನು ಮುಚ್ಚಲು ಚೀನಾ ಈಗ ಪ್ರವಾಹವೆಂಬ ಅಸ್ತ್ರವನ್ನು ಬಳಸಿ, ವುಹಾನ್‌ ನಗರವನ್ನು ಮುಳುಗಿಸುವ ಪ್ರಯತ್ನ ಮಾಡಿದೆ ಎಂಬ ಇನ್ನೊಂದು ಆರೋಪವಿದೆ.

    ಮೂರು ನದಿಗಳಿಂದ ಪರ್ವತಗಳ ನಡುವೆ ಕಿರಿದಾದ ಕಣಿವೆ ನಡುವೆ ನೀರನ್ನು ಧುಮ್ಮಿಕ್ಕಿಸಿ ವುಹಾನ್‌ ಸೇರಿದಂತೆ ಕೆಲವೊಂದು ನಗರವನ್ನು ಪ್ರವಾಹದಲ್ಲಿ ಮುಳುಗಿಸಲಾಗಿದೆ ಎನ್ನುವ ಆರೋಪವಿದೆ.

    ಜೂನ್ 2ರಿಂದ ಪ್ರವಾಹ ಉಂಟಾಗಿದ್ದು, ಸುಮಾರು 2.28ಲಕ್ಷ ಮಂದಿ ತುರ್ತು ಆಶ್ರಯ ಪಡೆದಿದ್ದು, ಆರಂಭಿಕ ಹಂತದಲ್ಲಿಯೇ 36 ಶತಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಹಾನಿಯಾಗಿದೆ. ಒಂದು ಸಾವಿರಕ್ಕೂ ಹೆಚ್ಚಿನ ಮನೆಗಳು ಹಾನಿಗೀಡಾಗಿವೆ.

    ಆಹಾ! ರುಚಿ ರುಚಿ ಮಾಸ್ಕ್‌ ಪರೋಟಾ… ಸವಿಯಬೇಕಿದ್ದರೆ ಇಲ್ಲಿಗೆ ಬನ್ನಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts