More

    ಕಾಮದಲ್ಲಿ ಹುಚ್ಚುತನ, ಸುನಾಮಿ, ಅಪಘಾತ… ಯುಗಾದಿಯಂದು ಭಯಾನಕ ಭವಿಷ್ಯ ನುಡಿದ ವೇಣುಸ್ವಾಮಿ

    ಹೈದರಾಬಾದ್​: ಇಂದು ಹೊಸ ವರ್ಷವನ್ನು ಸ್ವಾಗತಿಸುವ ಚೈತ್ರ ಶುದ್ಧ ಪಾಡ್ಯಮಿಯ ದಿನ. ಈ ದಿನ ಯುಗಾದಿ ಹಬ್ಬವನ್ನು ದೇಶದ ಎಲ್ಲೆಡೆ ಸಂಭ್ರಮದಿಂದ ಆಚರಿಸುತ್ತಾರೆ. ಯುಗಾದಿಯನ್ನು ಪ್ರತಿ ವರ್ಷ ವಿಭಿನ್ನ ಹೆಸರಿನಿಂದ ಕರೆಯಲಾಗುತ್ತದೆ. ಹಾಗಾಗಿ ಈ ವರ್ಷ ಯುಗಾದಿಯನ್ನು ಕ್ರೋಧಿನಾಮ ಸಂವತ್ಸರ ಎಂದು ಆಚರಿಸಲಾಗುತ್ತಿದೆ.

    ಕ್ರೋಧಿ ಎಂದರೆ ಕ್ರೋಧ ಎಂಬ ಅರ್ಥ ನೀಡಲಿದೆ. ಇದೇ ಕಾರಣಕ್ಕೆ ಈ ವರ್ಷ ಜನರಲ್ಲಿ ಸಿಟ್ಟು, ಆಕ್ರೋಶ ಹೆಚ್ಚಾಗಲಿದೆ ಎಂದು ಪಂಚಾಂಗ ಮತ್ತು ಜ್ಯೋತಿಷಿಗಳು ಹೇಳುತ್ತಿದ್ದರೆ. ಖ್ಯಾತ ಹಾಗೂ ವಿವಾದಿತ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಅವರು ತಮ್ಮದೇ ಶೈಲಿಯಲ್ಲಿ ಯುಗಾದಿ ಭವಿಷ್ಯ ನುಡಿದಿದ್ದಾರೆ.

    ಅಂದಹಾಗೆ ವೇಣುಸ್ವಾಮಿ ಅವರು ಸೆಲೆಬ್ರಿಟಿಗಳ ಮೇಲೆ ನುಡಿಯುವ ಭವಿಷ್ಯದಿಂದಲೇ ತುಂಬಾ ಫೇಮಸ್​. ಇವರ ಭವಿಷ್ಯವನ್ನು ಆರಂಭದಲ್ಲಿ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗ ಟಾಲಿವುಡ್​ನ ತಾರಾದಂಪತಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದು, ಇಬ್ಬರು ಬೇರೆಯಾದರೂ ಆಗ ವೇಣುಸ್ವಾಮಿ ಅವರ ಭವಿಷ್ಯವನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಹೀಗಾಗಿ ಅನೇಕ ಸೆಲೆಬ್ರಿಟಿಗಳ ನೆಚ್ಚಿನ ಜ್ಯೋತಿಷಿಯಾಗಿದ್ದಾರೆ. ಇದೀಗ ಯುಗಾದಿ ಭವಿಷ್ಯ ನುಡಿದಿದ್ದಾರೆ.

    ಕ್ರೋಧಿನಾಮ ಸಂವತ್ಸರ ಇಂದಿನಿಂದ ಆರಂಭವಾಗಿದೆ. ಇದರ ಅಧಿಪತಿ ಮಂಗಳ. ಎಲ್ಲರೂ ಭಯಪಡುವ ಹಾಗೆ ಕೋಪಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಆದರೆ, ಮಂಗಳ ಎಂದರೆ ಕೋಪವನ್ನು ಉಂಟುಮಾಡುವವನು. ಹಾಗಾಗಿ ಈ ವರ್ಷ ಪ್ರಾಕೃತಿಕ ವಿಕೋಪಗಳು ಸಂಭವಿಸಲಿವೆ ಎಂದು ವೇಣು ಸ್ವಾಮಿ ಹೇಳಿದ್ದಾರೆ.

    ಈ ವರ್ಷ ಏನೆಲ್ಲಾ ಸಂಭವಿಸಬಹುದು?
    * ಸುನಾಮಿ ಅಪ್ಪಳಿಸಲಿವೆ
    * ಭೂಕಂಪನಗಳು ಸಂಭವಿಸಲಿವೆ
    * ಅಗ್ನಿ ಅವಘಡಗಳು ಸಾಮಾನ್ಯವಾಗಿರಲಿವೆ
    * ವೈವಾಹಿಕ ಜೀವನದಲ್ಲಿ ಡಿವೋರ್ಸ್​ ಕೂಡ ಹೆಚ್ಚು ಕಾಮನ್​ ಆಗಲಿದೆ
    * ಹಾವು ಕಡಿತವು ಕೂಡ ಸಾಮಾನ್ಯವಾಗಿ ಇರಲಿವೆ
    * ಸೂರ್ಯನ ಶಾಖ ಇನ್ನೂ ಪ್ರಖರವಾಗಿರಲಿದೆ
    * ರಸ್ತೆ ಅಪಘಾತಗಳು ಇನ್ನುಷ್ಟು ಹೆಚ್ಚಗಲಿವೆ

    ವಿಶೇಷವಾಗಿ ಈ ವರ್ಷ ಗ್ರಹಗಳ ಪ್ರಭಾವದಿಂದಾಗಿ ಜನರು ಸೆಕ್ಸ್​ ಬಗ್ಗೆ ಹೆಚ್ಚು ಹುಚ್ಚರಾಗುತ್ತಾರೆ. ಯಾಕೆ ಹೀಗೆ ಹೇಳುತ್ತಿದ್ದೇನೆ ಅಂದರೆ, ಶುಕ್ರ, ಶನಿ ಮತ್ತು ಮಂಗಳ ಗ್ರಹ ಒಂಬತ್ತು ಜನರ ನಡುವೆ ಈ ವರ್ಷ ನವನೈಕ ಫಲಿತಾಂಶವನ್ನು ಹಂಚಿಕೊಳ್ಳುತ್ತಾರೆ. ಈ ಮೂರು ಗ್ರಹಗಳ ಪರಿಣಾಮ ಪುರುಷರು ಮತ್ತು ಮಹಿಳೆಯರ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಈ ಗ್ರಹಗಳ ಪ್ರಭಾವದಿಂದ ಜನರು ಐಷಾರಾಮಿ ಜೀವನಕ್ಕೆ ಒಗ್ಗಿಕೊಳ್ಳುತ್ತಾರೆ ಮತ್ತು ದುಂದುವೆಚ್ಚದಿಂದ ಹಣವನ್ನು ಖರ್ಚು ಮಾಡುತ್ತಾರೆ.

    ಹೊಸ ವರ್ಷದ ಎಲ್ಲ ಅಶುಭಗಳ ಬಗ್ಗೆ ಮಾತನಾಡುತ್ತಾ ಇವೆಲ್ಲವೂ ಈ ವರ್ಷದ ವಿಶೇಷತೆಗಳು ಎಂದು ವೇಣು ಸ್ವಾಮಿ ಹೇಳಿದರು. ಆದರೆ, ವೇಣುಸ್ವಾಮಿ ಹೇಳಿದ್ದೆಲ್ಲ ನಿಜವಲ್ಲ. ಏಕೆಂದರೆ, ಕೆಲವೊಮ್ಮೆ ವೇಣು ಸ್ವಾಮಿ ಜ್ಯೋತಿಷ್ಯವನ್ನು ವಿವಾದದ ರೀತಿಯಲ್ಲಿ ನೋಡುತ್ತಾರೆ. ಅಲ್ಲದೆ, ವೇಣುಸ್ವಾಮಿ ಸಾಕಷ್ಟು ಬಾರಿ ಟ್ರೋಲ್​ಗೂ ಗುರಿಯಾಗಿದ್ದಾರೆ. (ಏನೆನ್ಸೀಸ್​)

    ಮಹಾಲಕ್ಷ್ಮೀ ದಾಂಪತ್ಯದಲ್ಲಿ ಬಿರುಗಾಳಿ! ದಡೂತಿ ಗಂಡನಿಗೆ ಖಡಕ್​ ಎಚ್ಚರಿಕೆ ಕೊಟ್ಟ ನಟಿ

    ಆಟೋಮೊಬೈಲ್​ ಕಂಪನಿಯ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ ಪತ್ತೆ! ತನಿಖೆಯಲ್ಲಿ ಸ್ಫೋಟಕ ಸಂಗತಿ ಬಯಲು

    ಯುಗಾದಿ ಹಬ್ಬಕ್ಕೆ ಶುಭಕೋರಿದ RCB ಆಟಗಾರರು! ಕಪ್ ಗೆದ್ರೆ ಪ್ರತಿದಿನ ಹಬ್ಬನೇ, ಮೊದಲು ಮ್ಯಾಚ್ ಗೆಲ್ಲಿ ಎಂದ್ರು ಫ್ಯಾನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts