More

    ಕೂಡ್ಲೂರುವಿನಲ್ಲಿ ಹೊನ್ನಾರು ಉತ್ಸವ

    ಕುಶಾಲನಗರ: ಸಮೀಪದ ಕೂಡ್ಲೂರು ಗ್ರಾಮದಲ್ಲಿ ಬಸವೇಶ್ವರ ದೇವಾಲಯ ಸಮಿತಿ ಆಶ್ರಯದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಜನಪದೀಯ ಸಂಸ್ಕೃತಿಯ ಆಚರಣೆಗಳಲ್ಲಿ ಒಂದಾದ ಹೊನ್ನಾರು ಉತ್ಸವವನ್ನು ಬುಧವಾರ ರೈತರು ಸಂಭ್ರಮ, ಸಡಗರದಿಂದ ಆಚರಿಸಿದರು.

    ಗ್ರಾಮದ ದೇವಾಲಯದಲ್ಲಿ ಜಾನುವಾರುಗಳಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಗ್ರಾಮಸ್ಥರು, ಉತ್ತಮ ಮಳೆ, ಬೆಳೆ ಬಂದು ಕೃಷಿ ಕಾರ್ಯ ಸಂತುಷ್ಟಗೊಳ್ಳಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

    ದೇವಸ್ಥಾನಕ್ಕೆ ಸೇರಿದ ಜಮೀನಿನಲ್ಲಿ ಹೊನ್ನಾರು ನೇಗಿಲು ಹೂಡಿ ಉಳುಮೆ ಕಾರ್ಯಕ್ಕೆ ರೈತ ಕೆ.ಆರ್.ನಾಗರಾಜು ಚಾಲನೆ ನೀಡಿದರು.
    ದೇವಾಲಯ ಸಮಿತಿ ಅಧ್ಯಕ್ಷ ಜವರೇಗೌಡ ಮಾತನಾಡಿ, ನಮ್ಮ ಪೂರ್ವಿಕರು ನಡೆಸಿಕೊಂಡು ಬರುತ್ತಿರುವ ಹೊನ್ನಾರು ಉತ್ಸವವನ್ನು ಗ್ರಾಮದಲ್ಲಿ ಎಲ್ಲರೂ ಜತೆಗೂಡಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

    ದೇವಾಲಯ ಸಮಿತಿ ಕಾರ್ಯದರ್ಶಿ ಕೆ.ಎನ್.ಪವನ್ ಕುಮಾರ್ ಮಾತನಾಡಿ, ಆಧುನಿಕತೆ ಬೆಳೆದಂತೆ ಕೃಷಿ ಸಂಸ್ಕೃತಿಯು ಕ್ಷೀಣಿಸುತ್ತಿದೆ. ನಮ್ಮ ಪೂರ್ವಿಕರು ಹಾಕಿಕೊಟ್ಟ ಜನಪದೀಯ ಸಂಸಕ್ಕತಿಯನ್ನು ಇಂದಿನ ತಲೆಮಾರಿಗೆ ಪರಿಚಯಿಸಲು ಹೊನ್ನಾರು ಉತ್ಸವ ಸಹಕಾರಿಯಾಗಿದೆ ಎಂದರು.

    ಯುಗಾದಿ ಅಂಗವಾಗಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ದೇವರ ಮೂರ್ತಿಗೆ ಮಾಡಿದ್ದ ಕಂದಲಿ ಅಲಂಕಾರ ಗಮನ ಸೆಳೆಯಿತು. ಅಡ್ಡಪಲ್ಲಕ್ಕಿಯಲ್ಲಿ ದೇವರ ಮೂರ್ತಿ ಕುಳ್ಳಿರಿಸಿದ ನಂತರ ಗ್ರಾಮಸ್ಥರು ಪೂಜೆ ಸಲ್ಲಿಸಿದರು.

    ಗ್ರಾಮದ ಹಿರಿಯ ರೈತ ಕೆ.ಎಸ್.ರಾಜಾಚಾರಿ, ಕೃಷಿಯಲ್ಲಿ ಹೊನ್ನಾರು ಉಳುಮೆಯ ಮಹತ್ವ ಕುರಿತು ತಿಳಿಸಿದರು.
    ಸ್ಥಳೀಯರಾದ ಕೆ.ಎನ್.ಸೋಮಶೇಖರ್, ಕೆ.ಬಿ.ಈರಪ್ಪ, ರುಕ್ಮಾಂಗದ ಅರಸ್, ನಟರಾಜ, ಚಂದ್ರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts