More

  ಮಹಾಲಕ್ಷ್ಮೀ ದಾಂಪತ್ಯದಲ್ಲಿ ಬಿರುಗಾಳಿ! ದಡೂತಿ ಗಂಡನಿಗೆ ಖಡಕ್​ ಎಚ್ಚರಿಕೆ ಕೊಟ್ಟ ನಟಿ

  ಚೆನ್ನೈ: ಧಾರಾವಾಹಿ ನಟಿ ವಿ.ಜೆ. ಮಹಾಲಕ್ಷ್ಮೀ ಮತ್ತು ತಮಿಳು ನಿರ್ಮಾಪಕ ರವೀಂದರ್​ ಚಂದ್ರಶೇಖರ್ ತಮ್ಮ​ ಪ್ರೇಮ ವಿವಾಹದಿಂದಲೇ ಭಾರಿ ಸುದ್ದಿಯಾಗಿದ್ದು ಎಲ್ಲರಿಗೂ ತಿಳಿದಿದೆ. ಅದಕ್ಕೆ ಕಾರಣ ಮಹಾಲಕ್ಷ್ಮೀ ಸೌಂದರ್ಯವತಿಯಾಗಿದ್ದು, ಆಕೆ ಮದುವೆ ಆಗಿರುವ ರವೀಂದರ್​ ದಡೂತಿ ಮನುಷ್ಯ. ಹೀಗಾಗಿ ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಸಿಕ್ಕಾಪಟ್ಟೆ ಟ್ರೋಲ್​ ಸಹ ಆಯಿತು. ಮಹಾಲಕ್ಷ್ಮೀ ಹಣಕ್ಕಾಗಿ ದಡೂತಿ ಮನಷ್ಯನನ್ನು ಮದುವೆಯಾಗಿದ್ದಾಳೆ ಎಂಬ ಟೀಕೆಗಳು ವ್ಯಕ್ತವಾದವು. ಆದರೆ, ಯಾವುದಕ್ಕೂ ಕ್ಯಾರೆ ಎನ್ನದೆ ಇಬ್ಬರ ಸಂತೋಷ ಜೀವನ ನಡೆಸುತ್ತಿದ್ದಾರೆ.

  ತಾಜಾ ಸಂಗತಿ ಏನೆಂದರೆ, ಮಹಾಲಕ್ಷ್ಮೀ ದಾಂಪತ್ಯದಲ್ಲಿ ಬಿರುಗಾಳಿ ಎಬ್ಬಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಕಾರಣ ರವೀಂದರ್​​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ಫೋಟೋ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಇಬ್ಬರೂ ಸಾಮಾನ್ಯವಾಗಿ ದೇವಸ್ಥಾನಗಳು, ಹೋಟೆಲ್‌ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಿಗೆ ಇರುವ ಫೋಟೋಗಳನ್ನು ಪೋಸ್ಟ್​ ಮಾಡುತ್ತಿರುತ್ತಾರೆ. ಆದರೆ, ರವೀಂದರ್ ಎರಡು ದಿನಗಳ ಹಿಂದೆ ಒಂಟಿಯಾಗಿ ನಿಂತಿರುವ ಫೋಟೋವನ್ನು ಶೇರ್ ಮಾಡಿದ್ದರು.

  ನಿಮ್ಮೊಳಗಿನ ಕಠಿಣತೆಯನ್ನು ಜಗತ್ತಿಗೆ ತರುವುದು ಪರಿಸ್ಥಿತಿ! ನನಗಾಗಿ ಕಾಯುತ್ತಿದ್ದೇನೆ ಎಂದು ಫೋಟೋ ಕುರಿತು ಬರೆದುಕೊಂಡಿದ್ದರು. ತುಂಬಾ ದುಃಖದಲ್ಲಿರುವುದನ್ನು ನೋಡಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಸದಾ ಜತೆಯಲ್ಲಿರುವ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದ ರವೀಂದರ್​ ಇದೀಗ ಏಕಾಂಗಿಯಾಗಿರುವ ಮತ್ತು ದುಃಖದಲ್ಲಿರುವ ಫೋಟೋಗಳನ್ನು ಪೋಸ್ಟ್​ ಮಾಡಿರುವುದು ಈ ವದಂತಿಗೆ ಕಾರಣವಾಗಿದೆ. ಇದೇ ರೀತಿ ಅನೇಕ ಪೋಸ್ಟ್​ಗಳನ್ನು ಮಾಡಿದ್ದು, ಇಬ್ಬರ ನಡುವೆ ಬ್ರೇಕಪ್​ ಆಗುತ್ತಿದೆ ಎನ್ನುವ ಅರ್ಥದಲ್ಲಿ ಬರೆದುಕೊಂಡಿರುವುದು ಮಹಾಲಕ್ಷ್ಮೀಯ ಕೋಪಕ್ಕೆ ಕಾರಣವಾಗಿದೆ.

  ಗಂಡನಿಗೆ ಎಚ್ಚರಿಕೆ!
  ಈ ವಿಚಾರವಾಗಿ ಮಹಾಲಕ್ಷ್ಮೀ, ಗಂಡನಿಗೆ ಖಡಕ್​ ಎಚ್ಚರಿಕೆ ನೀಡಿದ್ದಾರಂತೆ. ಬ್ರೇಕಪ್​ ಆಗಿದ್ದೇವೆ ಎನ್ನುವ ಅರ್ಥದಲ್ಲಿ ಏಕಾಂಗಿ ಫೋಟೋಗಳನ್ನು ಹಂಚಿಕೊಂಡು ಏನೇನೋ ಬರೆಯಬೇಡಿ. ಇನ್ನು ಮುಂದೆ ಇಂತಹ ಪೋಸ್ಟ್​ ಮಾಡಬೇಡಿ ಎಂದು ಮಹಾಲಕ್ಷ್ಮಿ, ಪತಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ನಡುವೆ ಮನಸ್ತಾಪ ಬಂದಿದೆ ಮತ್ತು ಡಿವೋರ್ಸ್​ ಆಗಲಿದ್ದಾರೆ ಎಂಬ ವದಂತಿ ಹರಿದಾಡುತ್ತಿರುವುದರಿಂದ ಮಹಾಲಕ್ಷ್ಮೀ ಅಸಮಾಧಾನಗೊಂಡು ಗಂಡನಿಗೆ ಬುದ್ಧಿ ಮಾತು ಹೇಳಿದ್ದಾರೆಂದು ತಿಳಿದುಬಂದಿದೆ.

  ಅಂದಹಾಗೆ ಮಹಾಲಕ್ಷ್ಮೀ ಮತ್ತು ರವಿಂದರ್​ ಇಬ್ಬರು ತಿರುಪತಿಯಲ್ಲಿ ಕಳೆದ ವರ್ಷ ಸೆ.1ರಂದು ಮದುವೆ ಆದರು. ಇಬ್ಬರಿಗೂ ಇದು ಎರಡನೇ ಮದುವೆ ಆಗಿದ್ದು, ಮಹಾಬಲಿಪುರಂನಲ್ಲಿ ಇಬ್ಬರು ಹನಿಮೂನ್​ ಆಚರಿಸಿದರು. ಮದುವೆ ಬೆನ್ನಲ್ಲೇ ನವದಂಪತಿ ಸನ್​ ಟಿವಿಗೆ ಸಂದರ್ಶನ ನೀಡಿದ್ದರು. ಈ ವೇಳೆ ಹಣಕ್ಕಾಗಿ ಮದುವೆಯಾದ್ರಾ? ಎಂದು ಮಹಾಲಕ್ಷ್ಮೀ ಅವರನ್ನು ಪ್ರಶ್ನಿಸಲಾಗಿತ್ತು. ಏಕೆಂದರೆ, ಅನೇಕರ ಮನದಲ್ಲಿಯೂ ಇದೇ ಪ್ರಶ್ನೆ ಇದೆ. ಅಲ್ಲದೆ, ಕಾಮೆಂಟ್​ಗಳಲ್ಲಿಯೂ ಹಣಕ್ಕಾಗಿಯೇ ಮದುವೆ ಆಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಪ್ರಶ್ನೆಗೆ ಉತ್ತರ ನೀಡಿದ ಮಹಾಲಕ್ಷ್ಮೀ ನಾನು ಆರ್ಥಿಕವಾಗಿ ಸ್ವತಂತ್ರಳಾಗಿದ್ದಾನೆ ಮತ್ತು ನನ್ನ ಮಗನನ್ನು ನನ್ನದೇ ಹಣದಲ್ಲಿ ಬೆಳೆಸುವಷ್ಟು ಆರ್ಥಿಕವಾಗಿ ಸದೃಢಳಾಗಿದ್ದೇನೆ. ಮದುವೆ ಆಗದಿರಲು ಬಯಸಿದ್ದೇ ಆದರೆ, ರವೀಂದರ್​ ಕೇಳಿದ ರೀತಿ ನನಗೆ ಇಷ್ಟವಾಯಿತು. ನೀವು ನನ್ನ ಪತ್ನಿಯಾಗುವಿರಾ? ಎಂದು ಮಸೇಜ್​ ಮಾಡಿದರು. ಮಸೇಜ್​ ನೋಡಿದ ಬಳಿಕ ತುಂಬಾ ಸಮಯ ತೆಗೆದುಕೊಂಡು, ಯೋಚಿಸಿ, ಒಪ್ಪಿಗೆ ಸೂಚಿಸಿದೆ ಎಂದು ಹೇಳಿದ್ದರು.

  ಮಹಾಲಕ್ಷ್ಮೀ ಅವರು ಕಿರುತೆರೆ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ವಾಣಿ ರಾಣಿ, ಆಫೀಸ್‌, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ಪ್ರಸ್ತುತ ಅವರು ನಟಿಸಿರುವ ಮಹಾರಸಿ ಎಂಬ ಧಾರಾವಾಹಿ ಪ್ರಸಾರವಾಗುತ್ತಿದೆ. ರವೀಂದರ್‌ ಚಂದ್ರಶೇಖರನ್‌ ಅವರು ‘ನಟ್ಪುನ ಎನ್ನಡು ಥೆರಿಯುಮ’, ‘ಮುರುಂಗೈಕೈ ಚಿಪ್ಸ್’, ‘ವಿಡಿಯುಮ್‌ ವಾರೈ ಕಾಥಿರು’ ಮುಂತಾದ ಸಿನಿಮಾಗಳನ್ನು ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. (ಏಜೆನ್ಸೀಸ್​)

  ಗಂಡನ ಈ ಒಂದು ಅಭ್ಯಾಸ ನನ್ನ ದೇಹದ ತೂಕ ಹೆಚ್ಚಿಸುತ್ತಿದೆ, ನಿದ್ರೆಗೂ ಭಂಗ! ಮಹಾಲಕ್ಷ್ಮೀ ರೋಧನೆ

  ದೇಹದ ಆ ಭಾಗಗಳನ್ನು ಜೂಮ್​ ಮಾಡಿ… ನೋವುಂಟು ಮಾಡುತ್ತಿದೆ ಎಂದ ನಟಿ ಮೃನಾಲ್​ ಠಾಕೂರ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts