ಲೈಂಗಿಕತೆ ಬಗ್ಗೆ ಪ್ರಬಂಧ ಬರೆಯಲು ಸ್ಟೂಡೆಂಟ್ಸ್‌ಗೆ ಶಿಕ್ಷಕರ ಸೂಚನೆ! ಪೋಷಕರ ಆಕ್ರೋಶ

assignment school
Published on

ಅಮೆರಿಕಾ​: ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೆಲವು ವಿಚಾರಗಳ ಕುರಿತಾಗಿ ಪ್ರಬಂಧ ಬರೆಯಲು ಶಿಕ್ಷಕರು ಹೇಳುತ್ತಾರೆ. ಆದರೆ ಇಲ್ಲೊಂದು ಶಾಲೆಯಲ್ಲಿ ಲೈಂಗಿಕತೆ ಬಗ್ಗೆ ಒಂದು ಪುಟದ ಪ್ರಬಂಧ ಬರೆಯಲು ವಿದ್ಯಾರ್ಥಿಗಳಿಗೆ ಹೇಳುವ ಮೂಲಕವಾಗಿ ಸುದ್ದಿಯಾಗಿದೆ.

ಭಾರತೀಯ ಸಂಸ್ಕೃತಿ, ಆಚಾರ ವಿಚಾರಕ್ಕೆ ಹೆಚ್ಚು ಮಹತ್ವ ನೀಡುವ ದೇಶ. ಲೈಂಗಿಕತೆ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದೇ ತಪ್ಪೆಂದು ಪರಿಗಣಿಸಲಾಗುತ್ತದೆ. ಮಕ್ಕಳನ್ನು ಅಶ್ಲೀಲ ವಿಡಿಯೋಗಳನ್ನು ನೋಡದಂತೆ ತಡೆಯುತ್ತಾರೆ. ಆದರೆ ಅಮೆರಿಕಾದಲ್ಲಿ ಹಾಗಿಲ್ಲ.

ಯುಎಸ್‌ನ ಒರೆಗಾನ್‌ನಲ್ಲಿ ಶಾಲೆಯೊಂದರಲ್ಲಿ ಲೈಂಗಿಕತೆ ಬಗ್ಗೆ ಅಸೈನ್‌ಮೆಂಟ್ ಬರುವಂತೆ ಮಕ್ಕಳಿಗೆ ಸೂಚನೆ ನೀಡಲಾಗಿದೆ. ಲೈಂಗಿಕ ಫ್ಯಾಂಟಸಿಯ ಸಣ್ಣ ಕಥೆಯನ್ನು ರಚಿಸಲು ಶಾಲಾ ಮಕ್ಕಳಿಗೆ ಹೋಂವರ್ಕ್‌ ನೀಡಲಾಗಿತ್ತು.

ಯುಜೀನ್‌ನಲ್ಲಿರುವ ಚರ್ಚಿಲ್ ಹೈಸ್ಕೂಲ್‌ನ ಆರೋಗ್ಯ ವರ್ಗದ ವಿದ್ಯಾರ್ಥಿಗಳಿಗೆ ಜಿಲ್ಲೆಯಿಂದ ಅನುಮೋದಿಸಲಾದ ಪಠ್ಯಕ್ರಮದಲ್ಲಿ ಸೂಚಿಸಿದಂತೆ ಲೈಂಗಿಕ ಆಟಿಕೆಗಳನ್ನು ಒಳಗೊಂಡಂತೆ "ಲೈಂಗಿಕ ಫ್ಯಾಂಟಸಿ" ಅನ್ನು ವಿವರಿಸುವ ಸಣ್ಣ ಕಥೆಯನ್ನು ಒಂದು ಅಥವಾ ಎರಡು ಪ್ಯಾರಾಗ್ರಾಫ್‌ಗಳ ಬರೆಯಿರಿ. ಕಥೆಯಲ್ಲಿ ಪ್ರಣಯ ಸಂಗೀತ, ಮೇಣದಬತ್ತಿಗಳು, ಮಸಾಜ್, ಗರಿಗಳು, ಫೆದರ್ ಬೋವಾಸ್, ಸುವಾಸನೆಯ ಸಿರಪ್ ಮೊದಲಾದ ಪದಗಳನ್ನು ನೀವು ಆಯ್ಕೆ ಮಾಡಬಹುದು. ಕಥೆಯು ಲೈಂಗಿಕತೆಯನ್ನು ಹೊಂದದೆ ದೈಹಿಕ ಪ್ರೀತಿಯನ್ನು ತೋರಿಸಬಹುದು ಮತ್ತು ಸ್ವೀಕರಿಸಬಹುದು ಎಂದು ತೋರಿಸಬೇಕು' ಎಂದು ಹೇಳಲಾಗಿದೆ. ಶಿಕ್ಷಕರ ಈ ದುರ್ನಡತೆಗೆ ಪೋಷಕರು ಆಕ್ರೋಶಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net