ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ 10ರೂ. ನೀಡಿದ 60 ವರ್ಷದ ಅಜ್ಜ!

money
Published on

ಗೋರಖ್‌ಪುರ: 60 ವರ್ಷದ ಅಜ್ಜನೊಬ್ಬ ತನ್ನ ಮೊಮ್ಮಗಳ ಮೇಲೆ ಅತ್ಯಾಚಾರ ಮಾಡಿದ ನಂತರ, ಮೊಮ್ಮಗಳು ಈ ವಿಚಾರವಾಗಿ ಯಾರೊಂದಿಗೆ ಹೇಳದೆ ಬಾಯಿ ಮುಚ್ಚಿಸಲು 10 ರೂ ನೋಟನ್ನು ನೀಡಿದ್ದಾನೆ.

15 ವರ್ಷದ ಮೊಮ್ಮಗಳನ್ನು ಅತ್ಯಾಚಾರ ಮಾಡಿದ ಆರೋಪದಲ್ಲಿ 60 ವರ್ಷದ ವ್ಯಕ್ತಿಯನ್ನು ಉತ್ತರ ಪ್ರದೇಶದ ಗೋರಖ್‌ಪುರ ಪೊಲೀಸರು ಬಂಧಿಸಿದ್ದಾರೆ. ಸಂಜೆ ಸೊಸೆ ಮತ್ತು ಮೊಮ್ಮಗಳು ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಅಜ್ಜ, ಸೊಸೆಯನ್ನು ಮನೆಗೆ ಹೋಗುವಂತೆ ಹೇಳಿದ್ದಾನೆ.

ಕಟ್ಟಿಗೆ ಕಡಿಯಲು ಕೊಡಲಿ ತರುವಂತೆ ಮೊಮ್ಮಗಳಿಗೆ ತಿಳಿಸಿದ್ದಾನೆ. ಮೊಮ್ಮಗಳು ಮನೆಗೆ ಹೋಗಿ ಕೊಡಲಿ ತಂದಾಗ, ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಈ ಬಗ್ಗೆ ಯಾರಿಗೂ ಹೇಳಬಾರದು ಎಂದು ಮೊಮ್ಮಗಳಿಗೆ 10 ರೂ. ನೀಡಿದ್ದಾನೆ.

ಈ ವೇಳೆ ಗ್ರಾಮಸ್ಥನೊಬ್ಬ ಕಂಡು, ಜನ ಸೇರಿಸಿ, ಅಜ್ಜನನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ.

ಕುಟುಂಬಸ್ಥರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಅಜ್ಜನನ್ನು ಬಂಧಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net