ಲೈಂಗಿಕ ದೌರ್ಜನ್ಯ ಹಗರಣ; ಪ್ರಜ್ವಲ್‌ಗೆ ಡಿಜಿಟಲ್ ಸಾಕ್ಷ್ಯ

Prajwal Revanna
Published on

ಬೆಂಗಳೂರು: ಲೈಂಗಿಕ ದೌರ್ಜನ್ಯ ಹಗರಣದಲ್ಲಿ ಸಿಲುಕಿರುವ ಸಂಸದ ಪ್ರಜ್ವಲ್‌ರೇವಣ್ಣ, ಕಾರು ಚಾಲಕನ ಮೊಬೈಲ್ ಡಾಟಾವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಅನಾಲಿಸಿಸ್ ಮಾಡಿಸಿದ್ದು, ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿದೆ.

ಹೊಳನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ಕೈಗೊಂಡ ಎಸ್‌ಐಟಿ ಅಧಿಕಾರಿಗಳು, ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್‌ನನ್ನು ಪ್ರಮುಖ ಸಾಕ್ಷಿದಾರನಾಗಿ ಪರಿಗಣಿಸಿದ್ದಾರೆ. ಮಾರ್ಚ್ 30ರಂದು ಕಾರ್ತಿಕ್‌ನ್ನು ವಿಚಾರಣೆಗೆ ಕರೆದು ಹೇಳಿಕೆ ದಾಖಲಿಸಿಕೊಂಡ ತನಿಖಾಧಿಕಾರಿಗಳು, ಆತನ ಮೊಬೈಲ್ ವಶಕ್ಕೆ ಪಡೆದಿದ್ದರು.

ಕೋರ್ಟ್ ಅನುಮತಿ ಪಡೆದು ಮೊಬೈಲ್ ಡಾಟಾವನ್ನು ಸೈಬರ್ ತಜ್ಞರ ಸಹಾಯದಿಂದ ಎಕ್‌ಸ್ಟ್ರಾಕ್ಟ್ ಮಾಡಿಸಿದಾಗ ಅದರಲ್ಲಿ ಸೇವ್ ಆಗಿದ್ದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಮಾಡಿದಂತಹ ವಿಡಿಯೋ ಮತ್ತು ೆಟೋಗಳನ್ನು ಕಲೆ ಹಾಕಿದ್ದಾರೆ. ವಿಡಿಯೋ ಮತ್ತು ೆಟೋಗಳನ್ನು ಸಂತ್ರಸ್ತೆಗೆ ತೋರಿಸಿದಾಗ ತನ್ನದೆ ಎಂದು ಗುರುತಿಸಿದ್ದಾರೆ. ಕೃತ್ಯ ನಡೆದ ಸ್ಥಳ, ಸಮಯ ಸೇರಿ ಸಾಕಷ್ಟು ಮಾಹಿತಿಯನ್ನು ಸಂತ್ರಸ್ತೆ ನೀಡಿದ್ದಾರೆ. ಇದರ ಆಧಾರದ ಮೇಲೆ ಐಟಿ ಕಾಯ್ದೆಯಡಿ ಹೆಚ್ಚುವರಿ ಸೆಕ್ಷನ್‌ಗಳನ್ನು ಸೇರ್ಪಡೆಗೊಳಿಸಿ ಎಸ್‌ಐಟಿ ತನಿಖೆ ಕೈಗೊಂಡಿದ್ದಾರೆ. ಇದರಿಂದ ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ.

ಬಸವನಗುಡಿಯಲ್ಲಿ ಇರುವ ಶಾಸಕ ಎಚ್.ಡಿ. ರೇವಣ್ಣ ಮನೆಯಲ್ಲಿ ಮಹಜರ್ ವೇಳೆ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದ ಡಿವಿಆರ್ ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೋರ್ಟ್ ಅನುಮತಿ ಪಡೆದು ವಿಶ್ಲೇಷಣೆ ನಡೆಸಿ ವರದಿ ಕೊಡುವಂತೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಡಿವಿಆರ್‌ನ್ನು ರವಾನೆ ಮಾಡಲಾಗಿದೆ. ಅಲ್ಲದೆ, ಬಸವನಗುಡಿ ಮನೆಗೆ ವಿಧಿವಿಜ್ಞಾನ ಪ್ರಯೋಗಾಲಯ ತಂಡವನ್ನು ಕರೆದೊಯ್ದು ಮಹಜರ್ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net