ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ,ಈ ಕಾರಣಕ್ಕೆ ಉದ್ಧವ್​ ಸರ್ಕಾರ ಉಳಿಯಲಿಲ್ಲ: ಸಿಎಂ ​ಶಿಂಧೆ

Eknath Shinde
Published on

ನವದೆಹಲಿ: ಸಾಂಪ್ರದಾಯಿಕ ಮೈತ್ರಿಗೆ ವಾಪಸ್ಸಾಗಿ, ಎನ್​ಸಿಪಿ ಮೈತ್ರಿಯಿಂದ ಹೊರಬನ್ನಿ ಎಂದು ಹಲವು ಬಾರಿ ಉದ್ಧವ್​ ಠಾಕ್ರೆ ಅವರಿಗೆ ಮನವಿ ಮಾಡಿದ್ದರೂ ಕೇಳಿರಲಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಹೇಳಿದ್ದಾರೆ.

ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಈ ಹಿಂದಿನ ಸರ್ಕಾರ ಸರ್ಕಾರ ಮುರಿದು ಬೀಳಲು ಕಾರಣವನ್ನು ಬಹಿರಂಗಪಡಿಸಿದ ಶಿಂಧೆ, ಅಘಾಡಿ ಸರ್ಕಾರದಿಂದ ಯಾವೊಬ್ಬ ಶಾಸಕರೂ ಹಾಗೂ ಸಚಿವರಿಗೂ ಇಷ್ಟವಿರಲಿಲ್ಲ ಹಾಗಾಗಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳಿ ಎಂದು ಕೇಳಿಕೊಂಡರೂ ಉದ್ಧವ್​ ಕೇಳಿರಲಿಲ್ಲ ಎಂದಿದ್ದಾರೆ.

ಎನ್​ಸಿಪಿ ಜತೆಗೆ ಸರ್ಕಾರ ರಚನೆಯಾದಾಗಿನಿಂದ ಮೂರ್ನಾಲ್ಕು ಬಾರಿ ಎಲ್ಲಾ ಶಾಸಕರೂ ಒಟ್ಟಿಗೆ ಸೇರಿ ಅವರಲ್ಲಿ ಮನವಿ ಮಾಡಿಕೊಂಡಿದ್ದೆವು. ಆದರೂ ಇದಕ್ಕೆ ಒಪ್ಪದಿರುವುದರಿಂದ ಅವರ ಸರ್ಕಾರ ಬೀಳಲು ಕಾರಣವಾಗಿದೆ ಎಂದು ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಡಿಸಿಎಂ ದೇವೇಂದ್ರ ಫಡ್ನವಿಸ್​ ಜತೆ ದೆಹಲಿ ಪ್ರವಾಸ ಕೈಗೊಂಡಿರುವ ಶಿಂಧೆ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ಬಳಿಕ ಮಾಧ್ಯಮಗಳಿಗೆ ಅಘಾಡಿ ಸರ್ಕಾರದ ಕುರಿತು ಈ ರೀತಿ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net