ದುಬೈನಿಂದ ಬಂದವನ ಬ್ಯಾಗ್ ಕಳ್ಳತನ... ಆರೋಪಿಗಳ ಬಂಧನದಿಂದ ಹೊರಬಿತ್ತು ಮತ್ತಷ್ಟು ಪ್ರಕರಣ

theft pic
Published on

ಬೆಂಗಳೂರು: ನಗದು ಹಾಗೂ ಬೆಲೆ ಬಾಳುವ ವಸ್ತುಗಳನ್ನು ಹೊಂದಿದ್ದ ವ್ಯಕ್ತಿಯೋರ್ವನ ಬ್ಯಾಗ್​​​ ಎಗರಿಸಿದ್ದ ಖದೀಮರ ತಂಡವನ್ನು ಉಪ್ಪಾರಪೇಟೆ ಪೊಲೀಸರು ಎಡೆಮುರಿ ಕಟ್ಟಲು ಯಶಸ್ವಿಯಾಗಿದ್ದಾರೆ.

ಜು.17 ರಂದು ರಾತ್ರಿ ಮೆಜೆಸ್ಟಿಕ್​​​ನಲ್ಲಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ‌ ಈ ಕಳ್ಳತನ ನಡೆದಿತ್ತು. ದುಬೈನಿಂದ ಬಂದಿದ್ದ ವ್ಯಕ್ತಿಯೋರ್ವನ ಬ್ಯಾಗ್​​ಅನ್ನು ಅಲ್ಲೇ ಇದ್ದ ಕಳ್ಳರ ತಂಡ ಕ್ಷಣಾರ್ಧದಲ್ಲಿ ಎಗರಿಸಿ ಪರಾರಿಯಾಗಿತ್ತು.

ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸರು ರಾಜು ನಾಯ್ಡು,‌ ರವಿ, ದಾಮೋದರನ್, ರಂಗನ್ ಸೇರಿ 7 ಜನರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಒಂದು ಪಾಸ್‌ಪೋರ್ಟ್, ಕ್ರೆಡಿಟ್ ಕಾರ್ಡ್ಸ್, ನಗದು, ಚಿನ್ನಾಭರಣ ಸೇರಿದಂತೆ ಒಟ್ಟು 3.90 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಇವರ ಬಂಧನದಿಂದ ಮೊಬೈಲ್ ರಾಬರಿ ಮತ್ತು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net