

ಬೋಗೊಟಾ: ಭಾರಿ ವಯಸ್ಸಿನ ಅಂತರ ಇರುವ ಸಂಬಂಧಗಳ ಬಗ್ಗೆ ನಾವು ಕೇಳಿದ್ದೇವೆ. ಯುವತಿಯು ವೃದ್ಧನನ್ನು ಅಥವಾ ಯುವಕ ವೃದ್ಧೆಯನ್ನು ಲವ್ ಮಾಡುವುದನ್ನು ಅನೇಕ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಇಲ್ಲೊಂದು ಪ್ರಕರಣ ಇದೆಲ್ಲದಕ್ಕಿಂತ ತುಂಬಾ ವಿಚಿತ್ರವಾಗಿದೆ. ಏಕೆಂದರೆ, ಈ ಮಹಿಳೆಗೆ ಬರೋಬ್ಬರಿ 7 ಮಂದಿ ಬಾಯ್ಫ್ರೆಂಡ್ಗಳಿದ್ದಾರೆ. ಅಚ್ಚರಿಯ ಸಂಗತಿ ಏನೆಂದರೆ, 7 ಬಾಯ್ಫ್ರೆಂಡ್ಗಳು ಕೂಡ ವೃದ್ಧರು.
ಕೊಲಂಬಿಯಾದ ಬ್ಯಾರನ್ಕ್ವಿಲ್ಲಾ ಮೂಲದ ಯುವತಿ ಲೀನಾ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತನ್ನ ಲವ್ ಫೇಲ್ಯೂರ್ ಆದ ನಂತರ ವಯಸ್ಸಾದ ಪುರುಷರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿರುವುದಾಗಿ ಯುವತಿ ಹೇಳಿದ್ದಾಳೆ. ಇದು ತನ್ನ ಆರ್ಥಿಕ ಸಮಸ್ಯೆಗಳನ್ನು ಸಹ ಪರಿಹರಿಸುತ್ತದೆ ಎಂದಿದ್ದಾರೆ.
ಸದ್ಯ ಲೀನಾ, ವೃದ್ಧರನ್ನು ಡೇಟಿಂಗ್ಗಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಲೀನಾ ಮಾತನಾಡಿದ್ದು, ಒಂದು ದಿನ ನೆರೆಹೊರೆಯಲ್ಲಿ ಒಬ್ಬ ಮುದುಕ ತನ್ನೊಂದಿಗೆ ಫ್ಲರ್ಟಿಂಗ್ ಮಾಡುತ್ತಿದ್ದ. ಆ ಬಳಿಕ ವೃದ್ಧರೊಂದಿಗೆ ಸಂಬಂಧ ಬೆಳೆಸಲು ಬಯಸಿ, ಮುದುಕರೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಂಡೆ. ಬಿಡುವಿನ ವೇಳೆಯಲ್ಲಿ ವೃದ್ಧರೊಂದಿಗೆ ಸುತ್ತಾಡಲು ಆರಂಭಿಸಿದೆ. ಈ ಮುದುಕರ ಬಳಿ ಏನನ್ನೂ ಕೇಳುವ ಅಗತ್ಯವಿಲ್ಲ. ಏಕೆಂದರೆ, ನನಗೆ ಬೇಕಾದುದನ್ನು ಅವರೇ ಮಾಡುತ್ತಾರೆ ಎಂದು ಲೀನಾ ಹೇಳಿದರು.
ಲೀನಾ ಅವರ ಎಲ್ಲ ಗೆಳೆಯರು ಒಬ್ಬರಿಗೊಬ್ಬರು ಚೆನ್ನಾಗಿ ತಿಳಿದಿದ್ದಾರೆ. ಆಕೆಯ ಜೀವನದ ಎಲ್ಲ ಖರ್ಚುಗಳನ್ನು ಅವರು ಭರಿಸುತ್ತಾರೆ. ಈ ಮುದುಕರು ಅವಳಿಗಾಗಿ ಮನೆಗೆಲಸ, ಬಟ್ಟೆ ಒಗೆಯುವುದು ಮತ್ತು ಅಡುಗೆ ಮಾಡಲು ಸಹಾಯ ಮಾಡುತ್ತಾರೆ. ಯೂಟ್ಯೂಬ್ ಚಾನೆಲ್ 'ಅಲ್ಟಿಮಾ ಹೋರಾ ವಲ್ಲೆ'ಗೆ ನೀಡಿದ ಸಂದರ್ಶನದಲ್ಲಿ ಯುವತಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್)