ಪಾಲಕರ ಸೇವೆಯನ್ನು ಶ್ರದ್ಧೆಯಿಂದ ಮಾಡಿ

ganapati
ಸಾಗರದ ಗಾಂಧಿನಗರ ನಾಗರಿಕ ಸಮಿತಿಯಿಂದ ಶ್ರೀ ಪ್ರಸಾದ ಗಣಪತಿ ದೇವಸ್ಥಾನದ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮದಲ್ಲಿ ಆನಂದಪುರ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಆನಂದ ಗೌಡ, ಮಾ.ಸ.ನಂಜುಂಡಸ್ವಾಮಿ ಇತರರಿದ್ದರು.
Published on

ಸಾಗರ: ನಮ್ಮನ್ನು ಪ್ರಪಂಚಕ್ಕೆ ತಂದ ತಂದೆ-ತಾಯಿ ಎಲ್ಲ ದೇವರಿಗಿಂತ ಶ್ರೇಷ್ಠರು. ತಂದೆ-ತಾಯಿ ಸೇವೆಯನ್ನು ಶ್ರದ್ಧೆಯಿಂದ ಮಾಡುವ ಮಕ್ಕಳ ಬದುಕು ಹಸನಾಗುತ್ತದೆ ಎಂದು ಆನಂದಪುರ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಸಾಗರದ ಗಾಂಧಿನಗರ ನಾಗರಿಕ ಸಮಿತಿ ಆಯೋಜಿಸಿದ್ದ ಶ್ರೀ ಪ್ರಸಾದ ಗಣಪತಿ ದೇವಸ್ಥಾನದ 12ನೇ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಧಾರ್ಮಿಕ ಕಾರ್ಯಕ್ರಮಗಳು ನಮ್ಮನ್ನು ಅಧ್ಯಾತ್ಮದ ಕಡೆ ಕರೆದೊಯ್ಯುತ್ತವೆ. ಸದಾ ಒತ್ತಡದಲ್ಲಿದ್ದರೂ ಸ್ವಲ್ಪ ಸಮಯ ಧಾರ್ಮಿಕ ಚಟುವಟಿಕೆಯಲ್ಲಿ ಕಳೆಯುವುದರಿಂದ ಮಾನಸಿಕವಾಗಿ ಗಟ್ಟಿಗೊಳ್ಳಲು ಸಾಧ್ಯವಾಗುತ್ತದೆ. ಗಾಂಧಿನಗರ ನಾಗರಿಕ ಸಮಿತಿ ವಿಘ್ನ ನಿವಾರಕನ ದೇವಸ್ಥಾನ ನಿರ್ಮಿಸಿ, ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸುತ್ತಿರುವುದು ಸಂತಸದ ಸಂಗತಿ ಎಂದರು.
ಸಮಿತಿ ಗೌರವಾಧ್ಯಕ್ಷ ಜಿ.ಬಸವರಾಜ್ ಮಾತನಾಡಿ, ಪ್ರಸಾದ ಗಣಪತಿ ದೇವಸ್ಥಾನವು ಭಕ್ತರ ಸಹಕಾರದಿಂದ ದಿನೇದಿನೆ ಉತ್ತಮವಾಗಿ ನಡೆಯುತ್ತಿದೆ. ಸ್ಥಳೀಯರು ಮತ್ತು ದಾನಿಗಳ ಸಹಕಾರದಿಂದ ದೇವಸ್ಥಾನ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಆನಂದ ಗೌಡ, ಮಾ.ಸ.ನಂಜುಂಡಸ್ವಾಮಿ, ಡಾ. ಪ್ರಶಾಂತ ರಾಯ್, ಮಂಜುನಾಥ್, ಸುರೇಶ್, ಗಿರೀಶ್, ರಾಘವೇಂದ್ರ, ಬಾಬಣ್ಣ, ಅವಿನಾಶ್, ಅಕ್ಷಯ್, ರಾಜೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net