ಕರೊನಾ ಕಟ್ಟಿಹಾಕಲು ನಡೆಯಲಿದೆ ಸೆರಾಲಾಜಿಕಲ್ ಸಮೀಕ್ಷೆ

delhi jpg
Published on

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕರೋನವೈರಸ್ ಹರಡುವಿಕೆಯನ್ನು ನಿರ್ಣಯಿಸುವ ಪ್ರಯತ್ನದಲ್ಲಿ ಸರ್ಕಾರ ಶನಿವಾರದಿಂದ ರಾಷ್ಟ್ರ ರಾಜಧಾನಿಯಲ್ಲಿ ಸೆರೋಲಾಜಿಕಲ್ ಸಮೀಕ್ಷೆ ನಡೆಸಲಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಸೆರೋಲಾಜಿಕಲ್ ಸಮೀಕ್ಷೆಯು ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ -19 ಕುರಿತು ಸಮಗ್ರ ವಿಶ್ಲೇಷಣೆಯನ್ನು ಕೈಗೊಳ್ಳಲು ಹಾಗೂ ಆನಂತರ ನಗರದಲ್ಲಿ ರೋಗದ ವಿರುದ್ಧ ವ್ಯಾಪಕ ಕಾರ್ಯತಂತ್ರವನ್ನು ಸಿದ್ಧಪಡಿಸಲು ಅಧಿಕಾರಿಗಳಿಗೆ ಸಹಾಯವಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಈ ಸಮೀಕ್ಷೆಯು ದೆಹಲಿಯಲ್ಲಿ ಕೋವಿಡ್ -19 ನಿಭಾಯಿಸಲು ಕೇಂದ್ರ ಸರ್ಕಾರ ಸಿದ್ಧಪಡಿಸಿದ ಹೊಸ ಯೋಜನೆಯ ಒಂದು ಭಾಗವಾಗಿದೆ. "ಗೃಹ ಸಚಿವ ಅಮಿತ್‌ಶಾ ಅವರ ನಿರ್ದೇಶನದಂತೆ, ದೆಹಲಿಯಲ್ಲಿ ಸೆರಾಲಜಿಕಲ್ ಸಮೀಕ್ಷೆ ಕುರಿತು ಚರ್ಚೆ ನಡೆದಿದೆ. ಎನ್​ಸಿಡಿಸಿ ಮತ್ತು ದೆಹಲಿ ಸರ್ಕಾರ ಜಂಟಿಯಾಗಿ ಈ ಸಮೀಕ್ಷೆ ಕೈಗೊಳ್ಳಲಿದ್ದು, ಜೂನ್ 27 ರಂದು ಆರಂಭವಾಗುತ್ತದೆ. ಸಂಬಂಧಿಸಿದ ಸಮೀಕ್ಷಾ ತಂಡದ ಸದಸ್ಯರಿಗೆ ತರಬೇತಿ ನೀಡಲಾಗಿದೆ ಎಂದು ಸಚಿವಾಲಯದ ವಕ್ತಾರರು ಶುಕವಾರ ಟ್ವಿಟರ್​​ನಲ್ಲಿ ತಿಳಿಸಿದ್ದಾರೆ.

ಭವಿಷ್ಯದಲ್ಲಿ ಜನ ಸಮೂಹದಲ್ಲಿ COVID-19 ಪತ್ತೆಹಚ್ಚಲು ಬಲವಾದ ಆರೋಗ್ಯ ಸಾಧನಗಳಾದ 'ಆರೋಗ್ಯ ಸೇತು' ಮತ್ತು 'ಇತಿಹಾಸ್' ಅಪ್ಲಿಕೇಶನ್‌ಗಳ ಸಂಯೋಜಿತ ಬಳಕೆಯನ್ನು ಗೃಹ ಸಚಿವರು ಈಗಾಗಲೇ ಅನುಮೋದಿಸಿದ್ದಾರೆ.

ಆ್ಯಪ್‌ಗಳ ಸಂಯೋಜಿತ ಬಳಕೆಯ ಕುರಿತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ದ ತರಬೇತುದಾರರು ದೆಹಲಿ ಸರ್ಕಾರದ ಜಿಲ್ಲಾ ತಂಡಗಳಿಗೆ ಗುರುವಾರ ತರಬೇತಿ ನೀಡಿದರು.

ಸೆರೋಲಾಜಿಕಲ್ ಸಮೀಕ್ಷೆ ಎಂದರೇನು?:  ಸಿರೊಲಾಜಿಕಲ್ ಸಮೀಕ್ಷೆಯು ಅವರು ಈ ಹಿಂದೆ ವೈರಸ್ ಸೋಂಕಿಗೆ ಒಳಗಾಗಿದ್ದಾರೆಯೇ ಎಂದು ನಿರ್ಧರಿಸಲು ಕೋವಿಡ್-19 ಪತ್ತೆ ಮಾಡದ ಜನರ ರಕ್ತವನ್ನು ಪರೀಕ್ಷಿಸುತ್ತದೆ, ಸೆರೋಲಜಿ ಪರೀಕ್ಷೆಗಳು ರಕ್ತದಲ್ಲಿನ ಪ್ರತಿಕಾಯಗಳನ್ನು ಹುಡುಕುತ್ತವೆ. ಪ್ರತಿಕಾಯಗಳು ಕಂಡುಬಂದಲ್ಲಿ ಈ ಹಿಂದೆ ಸೋಂಕು ಕಂಡುಬಂದಿದೆ ಎಂದು ಇದರರ್ಥ.

ಕೋವಿಡ್ -19 ಹರಡುವಿಕೆಯನ್ನು ನಿರ್ಣಯಿಸಲು ಇದು ಹೇಗೆ ಸಹಾಯ ಮಾಡುತ್ತದೆ? :  ಸಿರೊಲಾಜಿಕಲ್ ಸಮೀಕ್ಷೆಯನ್ನು ನಡೆಸುವ ಮೂಲಕ, ಸೋಂಕಿಗೆ ಒಳಗಾದ ಒಟ್ಟು ಜನರ ಬಗ್ಗೆ ಅಧಿಕಾರಿಗಳು ತಿಳಿದುಕೊಳ್ಳಬಹುದು, ಈ ಸಮೀಕ್ಷೆ ಇನ್ನೂ ಎಷ್ಟು ಜನರಿಗೆ ಸೋಂಕು ತಗಲಿಲ್ಲ ಎಂದು ಅಂದಾಜು ಮಾಡಲು ಹಾಗೂ ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ಭವಿಷ್ಯದ ಆರೋಗ್ಯ ಅಗತ್ಯತೆಗಳನ್ನು ಯೋಜಿಸಲು ಸಹಾಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net