

ಲಾಹೋರ್: ಒಡಹುಟ್ಟಿದವರು ಜೊತೆಯಾಗಿ ಬೆಳೆಯುತ್ತಾರೆ. ದೊಡ್ಡವರಾಗುತ್ತಾ ಉದ್ಯೋಗ, ವಿದ್ಯಾಭ್ಯಾಸ ಮತ್ತು ಇನ್ನಿತರ ಕೆಲಸದ ನಿಮಿತ್ತ ದೂರ ಇರಬೇಕಾದ ಸನ್ನಿವೇಶ ಬರುತ್ತದೆ. ಆದರೆ ಈ ಸಹೋದರ- ಸಹೋದರಿ ಬರೋಬ್ಬರಿ 75 ವರ್ಷಗಳ ನಂತರ ಭೇಟಿಯಾಗುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ವಿಭಜನೆಯ ಸಮಯದಲ್ಲಿ, ಪಂಜಾಬ್ನ ಭಾರತದ ಭಾಗದಿಂದ ಸರ್ದಾರ್ ಭಜನ್ ಸಿಂಗ್ ಅವರ ಕುಟುಂಬವು ದುರಂತವಾಗಿ ಹರಿದುಹೋಯಿತು, ಅಜೀಜ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಸ್ಥಳಾಂತರಗೊಂಡಾಗ ಅವರ ಇತರ ಕುಟುಂಬ ಸದಸ್ಯರು ಭಾರತದಲ್ಲಿಯೇ ಇದ್ದರು.
1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಮೇಲೆ ಭಾರತ ಮತ್ತು ಪಾಕಿಸ್ತಾನ ಎರಡು ದೇಶಗಳಾಗಿ ವಿಭಜನೆಗೊಂಡವು. ಬಂಗಾಳ ಮತ್ತು ಪಂಜಾಬ್ ಪ್ರಾಂತ್ಯಗಳೂ ವಿಭಜನೆಗೊಂಡು ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ ದೇಶ ಎಂಬ ಹೊಸ ದೇಶಗಳು ರೂಪುಗೊಂಡವು. ಈ ಸಂದರ್ಭದಲ್ಲಿ ಅನೇಕ ಕುಟುಂಬ ಸದಸ್ಯರು ಬೇರ್ಪಟ್ಟರು.
ದೇಶ ವಿಭಜನೆಯ ಸಂದರ್ಭದಲ್ಲಿ ಪಂಜಾಬ್ನ ಸರ್ದಾರ್ ಭಜನ್ ಸಿಂಗ್ ಕುಟುಂಬವು ಹರಿದು ಹಂಚಿಹೋಗಿತ್ತು. ಸಾಮಾಜಿಕ ಜಾಲತಾಣದ ಮೂಲಕವೇ ಈ ಸುದ್ದಿ ತಿಳಿದ ಕುಟುಂಬಸ್ಥರು ಒಡಹುಟ್ಟಿದವರನ್ನು ಒಂದಾಗಿಸಿದರು. ನಂತರ ಎರಡೂ ಕುಟುಂಬದವರು ಕರ್ತಾರಪುರದ ಗುರುದ್ವಾರ ದರ್ಬಾರ್ ಸಾಹಿಬ್ಗೆ ಭೇಟಿ ಕೊಟ್ಟು ಒಟ್ಟಿಗೆ ಊಟ ಮಾಡಿದರು. ಪುನರ್ಮಿಲನದ ಈ ಸಂದರ್ಭದಲ್ಲಿ ಪರಸ್ಪರ ಉಡುಗೊರೆಗಳನ್ನು ಕೊಟ್ಟುಕೊಂಡರು.
ಭಾರತೀಯಾಗಿರುವ ಪ್ರಜೆ-ಸೋದರಿ 81 ವರ್ಷದ ಮಹೇಂದ್ರ ಕೌರ್, ಪಾಕ್ ಆಕ್ರಮಿತ ಕಾಶ್ಮೀರದ ಪ್ರಜೆ-ಸೋದರ 78 ವರ್ಷದ ಶೇಖ್ ಅಬ್ದುಲ್ ಅಜೀಜ್ ಕರ್ತಾರಪುರದ ಕಾರಿಡಾರಿನಲ್ಲಿ ಭೇಟಿಯಾಗಿದ್ದಾರೆ. 1947ರ ವಿಭಜನೆಯ ಸಮಯದಲ್ಲಿ ಬೇರ್ಪಟ್ಟ ಒಡಹುಟ್ಟಿದವರು ಮತ್ತೆ ಜತೆಯಾಗಿದ್ದು, ಸಂತೋಷ ಎಂದು ನೆಟ್ಟಿಗರು ಈ ಪೋಸ್ಟ್ಗೆ ಕಾಮೆಂಟ್ ಮಾಡಿದ್ದಾರೆ.