ಖಾಸಗಿ ವಾಹನ ಕಾರ್ವಿುಕರಿಗೆ ಪ್ರತ್ಯೇಕ ಮಂಡಳಿ; ನಿಧಿ ಸಂಗ್ರಹಕ್ಕೆ ಕಾನೂನಿನಲ್ಲಿ ಅವಕಾಶ

EV
Published on

ಬೆಂಗಳೂರು: ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ವಿುಕರ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಮಂಡಳಿ ರಚಿಸಲು ನಿರ್ಧರಿಸಿರುವ ಸರ್ಕಾರ, ಮಂಡಳಿಗೆ ಅನುದಾನ ಒದಗಿಸುವ ಸಂಬಂಧ ಕಾನೂನು ರಚಿಸಲು ಮುಂದಾಗಿದೆ. ಇದರಿಂದ ಸುಮಾರು 30 ಲಕ್ಷ ಕಾರ್ವಿುಕರಿಗೆ ಅನುಕೂಲವಾಗುವ ನಿರೀಕ್ಷೆ ಇದೆ.

ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ವಿುಕರ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಸುಂಕ ವಿಧೇಯಕ, 2024ಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದ್ದು, ಮುಂಬರುವ ಅಧಿವೇಶನದ ವೇಳೆ ಪರ್ಯಾಲೋಚನೆಗೆ ಒಳಪಡಲಿದೆ.

ಅಸಂಘಟಿತ ಕಾರ್ವಿುಕರಲ್ಲಿ ಪ್ರಮುಖ ವರ್ಗವಾದ ಖಾಸಗಿ ವಾಣಿಜ್ಯ ಸಾರಿಗೆ ವಾಹನಗಳಾದ ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಲಾರಿ, ಬಸ್ ಇತ್ಯಾದಿ ವಾಹನಗಳ ಕಾರ್ವಿುಕರಿದ್ದಾರೆ. ಇವರ ಹೆಚ್ಚಿನ ವೃತ್ತಿಯು ದೈಹಿಕ ಶ್ರಮ, ಅನಿರೀಕ್ಷಿತ ಅಪಘಾತಕ್ಕೆ ತುತ್ತಾಗುವ ವೃತ್ತಿಯಾಗಿದೆ ಕುಟುಂಬದಲ್ಲಿ ದುಡಿಯುವ ವ್ಯಕ್ತಿಯು ಅಪಘಾತದಿಂದ ನಿಧನರಾದಲ್ಲಿ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದಲ್ಲಿ ಅವರನ್ನು ಅವಲಂಬಿಸಿರುವ ಕುಟುಂಬವು ಸಾಮಾಜಿಕ ಹಾಗೂ ಆರ್ಥಿಕವಾಗಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಇವರ ರಕ್ಷಣೆ ನೀಡಲು ಕಾನೂನು ತರಲಾಗುತ್ತಿದೆ.

ಪ್ರಸ್ತುತ ಖಾಸಗಿ ವಾಣಿಜ್ಯ ವಾಹನ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್​ಗಳಿಗೆ ಅಪಘಾತ ಪರಿಹಾರ ಸೌಲಭ್ಯ ಹಾಗೂ ಶೈಕ್ಷಣಿಕ ಧನಸಹಾಯ ಸೌಲಭ್ಯವನ್ನು ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ವಿುಕರ ಅಪಘಾತ ಪರಿಹಾರ ಯೋಜನೆಯ ಮೂಲಕ ಒದಗಿಸಲಾಗುತ್ತಿದ್ದು, ತಗಲುವ ವೆಚ್ಚವನ್ನು ರಾಜ್ಯ ಸರ್ಕಾರವು ನೀಡುವ ಅನುದಾನದಿಂದ ಭರಿಸಲಾಗುತ್ತಿದೆ.

ಹೀಗಾಗಿ ಇನ್ನು ಮುಂದೆ ನಿಧಿ ಸಂಗ್ರಹಣೆ, ನಿರ್ವಹಣೆ ಹಾಗೂ ಫಲಾನುಭವಿಗಳೀಗೆ ಸಾಮಾಜಿಕ ಭದ್ರತಾ ಸೌಲಭ್ಯಗಳ ವಿತರಣೆಗಾಗಿ ಪ್ರತ್ಯೇಕ ಮಂಡಳಿ ರಚಿಸಲು ಉದ್ದೇಶಿಸಿದೆ. ಶೇ.83 ಕ್ಕಿಂತ ಹೆಚ್ಚು ಕಾರ್ವಿುಕರು ಅಸಂಘಟಿತ ವಲಯದಲ್ಲಿದ್ದಾರೆಂದು ಅಂದಾಜಿಸಲಾಗಿದೆ. ಅವರಿಗೆ ಈ ಮಂಡಳಿಯ ಲಾಭ ಸಿಗಲಿದೆ ಎಂಬ ಅಂದಾಜಿದೆ.

ಸಾರಿಗೆ ಇಲಾಖೆಯು ಸಂಗ್ರಹಿಸುತ್ತಿರುವ ಮೂಲಸೌಕರ್ಯ ಯೋಜನೆಯಡಿ ಸಂಗ್ರಹಿಸುವ ಕರದಲ್ಲಿ ಶೇ.7 ಸೇರಿ, ಬಿಎಂಆರ್​ಟಿ, ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿಯನ್ನು ಬಳಸಿಕೊಳ್ಳಲಾಗುತ್ತದೆ. ವಾರ್ಷಿಕವಾಗಿ ಅಂದಾಜು 300 ಕೋಟಿ ರೂ. ನಿಧಿ ಸಂಗ್ರಹಣೆ ನಿರೀಕ್ಷಿಸಲಾಗಿದೆ.

points

ಜಲಜೀವನ್ ಮಿಷನ್: ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯ ಅನುದಾನದ ನೆರವಿನೊಂದಿಗೆ ವಿವಿಧ ಕಡೆಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಅಂತರಸಂತೆ ಮತ್ತು ಇತರೆ 134 ಜನವಸತಿಗಳ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ 101.73 ಕೋಟಿ ರೂ., ಇದೇ ತಾಲೂಕಿನ ಹಂಪಾಪುರ ಮತ್ತು ಇತರೆ 48 ಜನವಸತಿ ತಾಲೂಕುಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 65.07 ಕೋಟಿ ರೂ. ದೊಡ್ಡಬಾಗಿಲು ಮತ್ತು ಇತರೆ 24 ಜನವಸತಿ ತಾಲೂಕುಗಳಿಗೆ ಕುಡಿಯುವ ನೀರಿನ ಯೋಜನೆಗೆ 34.00 ಕೋಟಿ ರೂ. ಒದಗಿಸಲು ನಿರ್ಧರಿಸಲಾಗಿದೆ.

ಹಾವೇರಿ ತಾಲೂಕಿನ ನೆಗಳೂರು ಹಾಗೂ ಇತರೆ 3 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ 18 ಕೋಟಿ ರೂ., ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಉಳ್ಳಾಲ ತಾಲೂಕಿನ 24 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು 245 ಕೋಟಿ ರೂ.ಗೆ ಅನುಮೋದನೆ ನೀಡಲಾಗಿದೆ.

ಸಾಲಕ್ಕೆ ಖಾತರಿ: ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಈಗಾಗಲೇ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲ 4,430.00 ಕೋಟಿ ರೂ. ಸಾಲಕ್ಕೆ ಸರ್ಕಾರಿ ಖಾತರಿ ನೀಡಿದೆ. ವಿದ್ಯುತ್ ಸರಬರಾಜು ಕಂಪನಿಗಳ ನಗದು ಒಳಹರಿವು ಗಣನೀಯವಾಗಿ ಕಡಿಮೆಯಾಗಿದ್ದು, ರಾಜ್ಯ ಸರ್ಕಾರದ ಇಲಾಖೆಗಳು ಅಗಾಧವಾದ ವಿದ್ಯುತ್ ಶುಲ್ಕದ ಬಾಕಿ ಮೊತ್ತವನ್ನು ಪಾವತಿಸ ಬೇಕಾಗಿರುವುದರಿಂದ ಆರ್ಥಿಕ ಸಂಕಷ್ಟದಿಂದಾಗಿ ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ನಿಗಮ ನಿಯಮಿತಕ್ಕೆ ನಿಗದಿತ ಸಮಯದಲ್ಲಿ ವಿದ್ಯುತ್ ಖರೀದಿ ಬಿಲ್ಲುಗಳನ್ನು ಪಾವತಿಸಿರುವುದಿಲ್ಲ. 2022-23ನೇ ಸಾಲಿನ ನಗದು ಒಳಹರಿವಿನ ಕೊರತೆ 8,664 ಕೋಟಿ ರೂ.ಗಳಾಗಿದ್ದರೆ, 2023-24ನೇ ಸಾಲಿನಲ್ಲಿ 5,134 ಕೋಟಿ ರೂ., 2023ರ ಸೆ.30ರ ಅಂತ್ಯಕ್ಕೆ ವಿದ್ಯುತ್ ಖರೀದಿ ಬಾಕಿ ಮೊತ್ತ ರೂ.17,366 ಕೋಟಿಗಳಾಗಿದೆ ಎಂದು ಅಂದಾಜಿಸಲಾಗಿದೆ.

ದತ್ತಪೀಠ ವಿವಾದ ಸಂಪುಟ ಉಪ ಸಮಿತಿ ರಚನೆ: ಇನಾಂ ದತ್ತಾತ್ರೇಯ ಪೀಠದ ಧಾರ್ವಿುಕ ಪದ್ಧತಿ ಕುರಿತ ವ್ಯಾಜ್ಯಕ್ಕೆ ಸರ್ಕಾರವು ಅಭಿಪ್ರಾಯ ತಿಳಿಸುವ ಅವಕಾಶ ಪುನಃ ಒದಗಿಬಂದಿದೆ. ಇನಾಂ ದತ್ತಾತ್ರೇಯ ಪೀಠದ ವಿಷಯದಲ್ಲಿ ಉಚ್ಚ ನ್ಯಾಯಾಲಯದ ತೀರ್ಪಿಗೆ ಸಂಬಂಧಿಸಿದಂತೆ ಸೈಯದ್ ಗೌಸ್ ಮೊಹಿಯುದ್ದೀನ್ ಶಾಖಾದ್ರಿ ರಿಟ್ ಅಪೀಲು ಸಲ್ಲಿಸಿದ್ದರು, ಈ ಅಪೀಲು ವಜಾಗೊಂಡಿದೆ. ಶಾಖಾದ್ರಿ ರವರು ಸವೋಚ್ಚ ನ್ಯಾಯಾಲಯದಲ್ಲಿ ಎಸ್​ಎಲ್​ಪಿ (ಸಿವಿಲ್) ದಾಖಲಿಸಿದ್ದಾರೆ. ಇದೀಗ ಸವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ಲಿಖಿತ ಆಕ್ಷೇಪಣಾ ಹೇಳಿಕೆ ಸಂಬಂಧ ಸರ್ಕಾರದ ಅಭಿಪ್ರಾಯ ಅಂತಿಮಗೊಳಿಸಿ ಶಿಫಾರಸು ಮಾಡಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಗೃಹ ಸಚಿವರು ಸಮಿತಿ ಅಧ್ಯಕ್ಷರಾಗಿರುತ್ತಾರೆ,

ವಿವಿ, ಕಾಲೇಜು ಶುಲ್ಕಪಾವತಿ ವೇದಿಕೆ: ಉನ್ನತ ಶಿಕ್ಷಣ ಇಲಾಖೆಯು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶ (ಯುಯುಸಿಎಂಎಸ್) ಅಭಿವೃದ್ಧಿಪಡಿಸಿ, ಅನುಷ್ಠಾನಗೊಳಿಸಲು 15.13 ಕೋಟಿ ರೂ. ಪರಿಷ್ಕೃತ ಯೋಜನಾ ವೆಚ್ಚಕ್ಕೆ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ರಾಜ್ಯದ ಉನ್ನತ ಶಿಕ್ಷಣ ವಲಯದ ಶೈಕ್ಷಣಿಕ ಮತ್ತು ಆಡಳಿತ ವಿಭಾಗಗಳಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಮಾಹಿತಿ ತಂತ್ರಜ್ಞಾನವನ್ನು ಉನ್ನತೀಕರಿಸಿ ಪಾರದರ್ಶಕ ಆಡಳಿತ ಮತ್ತು ಶೈಕ್ಷಣಿಕ ಗುಣಮಟ್ಟವನ್ನು ವೃದ್ಧಿಸಲಾಗಿದ್ದು, ಈ ಸಂಬಂಧ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶ ವನ್ನು ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಲು ಪ್ರಸ್ತಾಪಿಸಲಾಗಿದೆ.

30 ಸೀಟರ್ ಕಾಲ್ ಸೆಂಟರ್ ಸ್ಥಾಪಿಸಿ, 30 ವಿಶ್ವವಿದ್ಯಾಲಯಗಳ ಮತ್ತು 4300 ಕಾಲೇಜುಗಳಿಗೆ ಸಹಾಯ ಮಾಡಿ 14.5 ಲಕ್ಷ ವಿದ್ಯಾರ್ಥಿಗಳ ಮಾಹಿತಿಯನ್ನು ಈಗಾಗಲೇ ಪೋರ್ಟಲ್​ನಲ್ಲಿ ಅಳವಡಿಸಲಾಗಿದೆ. ಯುಯುಸಿಎಂಎಸ್ ಆನ್​ಲೈನ್ ಪೇಮೆಂಟ್ ಮುಖಾಂತರ ವಿದ್ಯಾರ್ಥಿಗಳು ವಿವಿಗಳು ಹಾಗೂ ಕಾಲೇಜಿಗೆ ಪ್ರವೇಶ ಮತ್ತು ಪರೀಕ್ಷಾ ಶುಲ್ಕವನ್ನು ಪಾವತಿಸಿದ್ದು, ಇದು 400 ಕೋಟಿಗೂ ಅಧಿಕವಾಗಿದೆ. ಈ ತಂತ್ರಜ್ಞಾನ ಸೇವೆಯಿಂದ ಯೂನಿವರ್ಸಿಟಿ ಹಾಗೂ ಕಾಲೇಜುಗಳು ಮಾಡುತ್ತಿದ್ದ ಸುಮಾರು 70-80 ಕೋಟಿ ರೂ. ವೆಚ್ಚ ಉಳಿತಾಯವಾಗಿದೆ.

ಉನ್ನತ ಶಿಕ್ಷಣ ಇಲಾಖೆಯ ವಿಶ್ವವಿದ್ಯಾಲಯ ಕಾಲೇಜುಗಳಲ್ಲಿ, ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶವನ್ನು ಇ-ಆಡಳಿತ ಇಲಾಖೆಯ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಲು ಹಾಗೂ ಬಳಕೆದಾರರ ಅಹವಾಲುಗಳಿಗೆ ಪರಿಹಾರ ನೀಡಲು, ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿರುವ ರಾಜ್ಯ ನಿರ್ವಹಣಾ ಘಟಕದಲ್ಲಿ 2 ವರ್ಷಗಳ ಅವಧಿಗೆ ಸಹಾಯವಾಣಿಯನ್ನು 2.49 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಿ ನಿರ್ವಹಿಸುವುದು ಸೇರಿದಂತೆ ಒಟ್ಟು -ಠಿ;15.13 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಸಭೆ ಒಪ್ಪಿದೆ. ದುಬಾರಿ ಶುಲ್ಕ ವಸೂಲಿ ಇದರಿಂದ ತಡೆಯಬಹುದು ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ.

ಇವಿ ವಾಹನಗಳಿಗೆ ಡಿಸ್ಕೌಂಟ್: ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸ್ಕಾ›ಪಿಂಗ್ ಪಾಲಿಸಿ, 2022ರ ಕ್ರಮ ಸಂಖ್ಯೆ 9ನ್ನು ಪರಿಷ್ಕರಿಸಿ, ಜಾರಿಗೊಳಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನ ಬಳಕೆ ಉತ್ತೇಜಿಸಲು ಮಹತ್ವದ ಕ್ರಮಕೈಗೊಂಡಿದೆ. ಈಗಾಗಲೇ ಜಾರಿಗೆ ತಂದಿರುವ ಸ್ಕಾ›ಪಿಂಗ್ ಪಾಲಿಸಿ 2022ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದರಿಂದ ವಾಯುಮಾಲಿನ್ಯ ತಡೆಗಟ್ಟಲು ಸಹಕಾರಿಯಾಗಲಿದೆ. ಹಾಗೆಯೇ ಬಳಕೆಗೆ ಯೋಗ್ಯವಲ್ಲದ ವಾಹನಗಳನ್ನು ನಾಶಪಡಿಸುವುದರಿಂದ ಅನಗತ್ಯ ಅಪಘಾತ ಮತ್ತು ಅದರಿಂದಾಗುವ ಜೀವ-ಹಾನಿ ನಷ್ಟಗಳನ್ನು ತಡೆಗಟ್ಟಬಹುದಾಗಿದೆ. ಇದೀಗ ತರುತ್ತಿರುವ ಕಾನೂನು ತಿದ್ದುಪಡಿಯಿಂದ, ಯಾರು ತಮ್ಮ ಹಳೇ ವಾಹನವನ್ನು ಸ್ಕಾ›ಪಿಂಗ್ ನೀತಿಯಡಿ ಗುಜುರಿಗೆ ಹಾಕುತ್ತಾರೋ ಅಂತಹವರು ಹೊಸ ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವ ಸಂದರ್ಭದಲ್ಲಿ ಎಕ್ಸ್ ಶೋ ರೂಂ ಬೆಲೆಯನ್ನು ಆಧರಿಸಿ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಅಲ್ಲದೆ ಕಟ್ಟಡ ನಿರ್ವಣಕ್ಕೆ ಸಂಬಂಧಿಸಿದ ಯಂತ್ರ ಸಹಿತ ವಾಹನಕ್ಕೆ ಶೇ.10 ತೆರಿಗೆ ವಿನಾಯಿತಿ ಹಾಗೂ ಸಾರಿಗೆ ವಾಹನ ಜೀವಮಾನ ತೆರಿಗೆ ಮೇಲೆ ಶೇ.10, ಆಟೋ ರಿಕ್ಷಾಗೆ 500 ರೂ., ರಿಯಾಯಿತಿ ನೀಡಲಾಗುತ್ತಿದೆ.

ಮುಖ್ಯಾಂಶ

  • ಕೇಂದ್ರ ಯೋಜನೆಯಾದ ಡಿಜಿಟಲ್ ಇಂಡಿಯಾ ಭೂ ದಾಖಲೆ ಆಧುನೀಕರಣ ಕಾರ್ಯಕ್ರಮದಡಿ 3455 ಕಂಪ್ಯೂಟರ್, ಸ್ಕ್ಯಾನರ್, ರೋವರ್ ಮತ್ತು ಪ್ರಿಂಟರ್ ಖರೀದಿಗೆ -ಠಿ;30.45 ಕೋಟಿ
  • ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಷೇರು ಬಂಡವಾಳವನ್ನು 600 ಕೋಟಿಯಿಂದ 1200 ಕೋಟಿ ರೂ.ಗೆ ಹೆಚ್ಚಳ.
  • ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕನ್ನು ಚನ್ನಮ್ಮನ ಕಿತ್ತೂರು ತಾಲೂಕು ಎಂದು ಮರುನಾಮಕರಣ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net