ನನ್ನ ಮನೆ ಮುಂದಿರುವ ಪಾರ್ಕಿಂಗ್ ಸಮಸ್ಯೆಯನ್ನು ಬಗೆಹರಿಸಿ ಎಂದು ಸಿಎಂ ಕಾರನ್ನು ತಡೆದ ವೃದ್ಧ!

Untitled design - 2023-07-28T151701.945
Published on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದ ಎದುರು ವಾಸಿಸುತ್ತಿದ್ದ ಹಿರಿಯ ನಾಗರಿಕರೊಬ್ಬರು ತಮ್ಮ ಮನೆಯ ಮುಂದೆ ನಿಮ್ಮ ಕಾರುಗಳನ್ನು ಹೆಚ್ಚಾಗಿ ನಿಲುಗಡೆ ಮಾಡುತ್ತಿರುವುದರಿಂದ ಪಾರ್ಕಿಂಗ್​ ಸಮಸ್ಯೆ ಉಲ್ಬಣಗೊಂಡಿದೆ. ಇದರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಬಹಳ ತೊಂದರೆಯಾಗಿದೆ ಎಂದು ಸಿಎಂ ಕಾರು ತಡೆದು ಹೇಳಿದ್ದಾರೆ.

ಸಿಎಂ ಮನೆಯ ಹೊರಗೆ ಆಗ್ರಹಿಸಿದ ವೃದ್ಧ, ಮುಖ್ಯಮಂತ್ರಿಯನ್ನು ಭೇಟಿಯಾಗಲು ಬರುವ ಜನರು ತಮ್ಮ ವಾಹನಗಳನ್ನು ನಮ್ಮ ಮನೆ ಮುಂದೆ ನಿಲ್ಲಿಸಿ ಹೋಗುತ್ತಾರೆ. ಕಳೆದ ಐದು ವರ್ಷಗಳಿಂದ ಈ ಸಮಸ್ಯೆಯನ್ನು ನೋಡಿ ನಾವು ಬೇಸತ್ತಿದ್ದೇವೆ. ಕೂಡಲೇ ನಮಗೆ ಈ ತೊಂದರೆಯನ್ನು ಬಗೆಹರಿಸಿ ಎಂದು ಸಿದ್ದರಾಮಯ್ಯ ಅವರ ಕಾರನ್ನು ತಡೆದು ಒತ್ತಾಯಿಸಿದರು.

ವೃದ್ಧರ ಮಾತನ್ನು ಆಲಿಸಿದ ಸಿದ್ದರಾಮಯ್ಯ, ಈ ಬಗ್ಗೆ ಪರಿಶೀಲನೆ ನಡೆಸಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net