More

    24 ಕೋಟಿ ರೂ. ಬೆಲೆ ಬಾಳುವ ಕೋಣ; ಗೋಡಂಬಿ, ಬಾದಾಮಿ, ತುಪ್ಪ ತಿನ್ನುವ ಇದರ ವೀರ್ಯದಿಂದ ಬರುತ್ತದೆ ಲಕ್ಷಗಟ್ಟಲೆ ಆದಾಯ

    ರಾಜಸ್ಥಾನ: ಜೋಧಪುರದ ಎಮ್ಮೆಯೊಂದು ಸದ್ಯ ಸುದ್ದಿಯಲ್ಲಿದೆ. ಏಕೆಂದರೆ ಇದು ಸಾಮಾನ್ಯ ಎಮ್ಮೆ ಅಲ್ಲ. ಈ ಕೋಣ ಖರೀದಿಸಲು 24 ಕೋಟಿ ರೂ.ವರೆಗೆ ಪಾವತಿಸ ಬೇಕು. ಕೋಟಿ ಬೆಲೆ ಬಾಳು ಈ ಕೋಣ ತುಂಬಾ ವಿಶೇಷವಾಗಿದೆ. ಈ ಮುರ್ರಾ ಕೋಣವನ್ನು ನೋಡಲು ಜನರು ದೂರದ ಪ್ರದೇಶಗಳಿಂದ ಜೋಧ್‌ಪುರಕ್ಕೆ ಬರುತ್ತಾರೆ.

    ಇದನ್ನೂ ಓದಿ: ಪತಿಯಿಂದ ವಿಚ್ಛೇದನ ಪಡೆದ ನಿರೂಪಕಿ ಚೈತ್ರಾ ವಾಸುದೇವನ್; ದಯವಿಟ್ಟು ಯಾರೂ ಜಡ್ಜ್​​ ಮಾಡಬೇಡಿ ಎಂದ್ರು…

    ಕೋಣದ ವಿಶೇಷತೆ?: ಈ ಕೋಣ ಭಾರತೀಯ ಭೀಮ್ ಬುಲ್ ಮುರ್ರಾ ತಳಿಯ ಕೋಣಗಳಿಗೆ ಸೇರಿದೆ. ಈ ಎಮ್ಮೆಯ ತೂಕ 1500 ಕೆ.ಜಿ. 6 ಅಡಿ ಎತ್ತರ ಹಾಗೂ 14 ಅಡಿ ಉದ್ದವಿದೆ. ಭೀಮ್ ಬುಲ್ ಇದುವರೆಗೆ 20ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಜಯಗಳಿಸಿದೆ. ಇದರಿಂದಾಗಿ ಈವರೆಗೆ 24 ಕೋಟಿ ರೂ.ವರೆಗೆ ಬಿಡ್ ಬಂದಿದೆ. ಆದರೆ ಕೋಣದ ಮಾಲೀಕರು ಅದನ್ನು ಮಾರಾಟ ಮಾಡುವುದಿಲ್ಲ ಎನ್ನುತ್ತಾರೆ ಎಮ್ಮೆ ಮಾಲೀಕರು.

    ಇದನ್ನೂ ಓದಿ: VIDEO| ನಾಲ್ಕು ಲಕ್ಷ ರೂ. ಬೆಲೆಯ ಮಗನ ಶೂ ನೋಡಿ ಕೈ ಮುಗಿದ ತಂದೆ!

    ಕೋಣ ನಿರ್ವಹಣೆಗೆ ತಗಲುವ ವೆಚ್ಚ: ಭೀಮ್ ಬುಲ್ ಒಂದು ದಿನದಲ್ಲಿ 1 ಕೆಜಿ ತುಪ್ಪ ಮತ್ತು ಅರ್ಧ ಕೆಜಿ ಬೆಣ್ಣೆಯನ್ನು ತಿನ್ನುತ್ತದೆ. ಇದಲ್ಲದೆ, ಗೋಡಂಬಿ, ಬಾದಾಮಿ, ವಾಲ್‌ನಟ್ಸ್ ಮತ್ತು ಇತರ ಒಣ ಹಣ್ಣುಗಳನ್ನು ಪ್ರತಿದಿನ ತಿನ್ನಲು ನೀಡಲಾಗುತ್ತದೆ. ಆಹಾರ ಮತ್ತು ಪಾನೀಯ ಸೇರಿದಂತೆ ಈ ಎಮ್ಮೆಯ ನಿರ್ವಹಣೆಗೆ ಸುಮಾರು 5000 ರೂ. ವೆಚ್ಚ ತಗಲುತ್ತದೆ. ಎಮ್ಮೆ ಇರುವ ಪ್ರದೇಶದಲ್ಲಿ ಕೂಲರ್ ಮತ್ತು ಎಸಿಗಳನ್ನು ಅಳವಡಿಸಲಾಗಿದೆ. ಕೋಣಕ್ಕೆ 9 ವರ್ಷ ವಯಸ್ಸಾಗಿದೆ ಎನ್ನಲಾಗಿದೆ.

    ಈ ತಳಿಯ ಎಮ್ಮೆಯ ಬೆಲೆ ಏಕೆ ಹೆಚ್ಚು?: ಪಶುವೈದ್ಯಾಧಿಕಾರಿ ಡಾ.ತಾನ್ ಸಿಂಗ್ ಮಾತನಾಡಿ, ಮುರ್ರಾ ಎಮ್ಮೆಗಳ ಬೆಲೆ ಹೆಚ್ಚು. ಈ  ವೀರ್ಯದ ಒಂದು ಹನಿಗೆ 2400 ರೂ. ಇದು ವಿದೇಶದಲ್ಲಿ ಹೆಚ್ಚು ದುಬಾರಿಯಾಗಿದೆ. ವೀರ್ಯವನ್ನು ಮೈನಸ್ 200 ಡಿಗ್ರಿ ತಾಪಮಾನದಲ್ಲಿ ಸಂಗ್ರಹಿಸಲಾಗುತ್ತದೆ. ಮುರ್ರಾ ಎಮ್ಮೆಗಳು ಹೆಚ್ಚು ಹಾಲು ನೀಡುತ್ತವೆ. ಅವುಗಳ ಹಾಲು ದಪ್ಪವಾಗಿದ್ದು, ಹಾಲಿನಲ್ಲಿ ಕೊಬ್ಬಿನ ಶೇಕಡಾವಾರು ಪ್ರಮಾಣವೂ ಹೆಚ್ಚು. ಒಂದು ಎಮ್ಮೆ ಕರು ಒಂದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುತ್ತದೆ. ಮುರ್ರಾ ಎಮ್ಮೆ ದಿನಕ್ಕೆ 27 ಲೀಟರ್‌ಗಿಂತ ಹೆಚ್ಚು ಹಾಲು ನೀಡುತ್ತದೆ ಎಂದು ವೈದ್ಯರು ಹೇಳಿದ್ದಾರೆ.

    ಅಂದು 3 ಕಾಲಿನ ಕರು ಜನನ, ಇಂದು ಗುಡೇಕೋಟೆಯಲ್ಲಿ ಎರಡು ಕಾಲಿನ ಕರುವಿಗೆ ಜನ್ಮ ಕೊಟ್ಟ ಹಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts