

ಬೆಂಗಳೂರು: ಸಿನಿಮಾ, ಕಿರುತೆರೆ ಮತ್ತು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಹಿರಿಯ ನಟ ಶಂಕರ್ ರಾವ್ ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. 83 ವರ್ಷ ವಯಸ್ಸಾಗಿದ್ದ ಇವರು ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಪಾಪ ಪಾಂಡು ಧಾರಾವಾಹಿಯಲ್ಲಿ ಶಂಕರ್ ರಾವ್ ವಹಿಸಿದ್ದ ಬಾಸ್ ಬಾಲರಾಜ್ ಪಾತ್ರಕ್ಕೆ ಅತ್ಯಂತ ಜನಪ್ರಿಯತೆ ಲಭಿಸಿತ್ತು. ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರು, 70ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದವರು. ಕಾಕನ ಕೋಟೆ, ಸಿಂಹಾಸನ, ಮಾವನಿಗೆ ತಕ್ಕ ಅಳಿಯ, ಧೃವ, ಅಪ್ಪು, ಬಿಸಿಬಿಸಿ ಮುಂತಾದ ಚಿತ್ರಗಳಲ್ಲಿ ಪೋಷಕ ನಟನಾಗಿ ಪಾತ್ರ ನಿರ್ವಹಿಸಿದ್ದರು.