ಅಪ್ಪನಾಗುವ ಆಸೆ ಬಿಚ್ಚಿಟ್ಟ ರಣವೀರ್​ ಸಿಂಗ್; ದೀಪಿಕಾರಂತೆ ಕ್ಯೂಟ್​ ಮಗು ಬೇಕಂತೆ!

ranvir
Published on

ಮುಂಬೈ: ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್​ ಸಿಂಗ್​ ಜೋಡಿ ಈಚಿನ ತಾರಾಜೋಡಿಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇದೀಗ ರಣವೀರ್​ ಸಿಂಗ್​ ತಮ್ಮ ಅಪ್ಪನಾಗುವ ಆಸೆಯನ್ನು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ದೀಪಿಕಾ ಚಿಕ್ಕವರಿದ್ಧಾಗ ಇದ್ದಂತೆ ಕ್ಯೂಟ್​ ಆಗಿರುವ ಹೆಣ್ಣು ಮಗು ಆದರೆ ತಮ್ಮ ಲೈಫ್​ ಸೆಟ್​ ಆದಂತೆ ಎಂದು ಉದ್ಗರಿಸಿದ್ದಾರೆ.

ಕಲರ್ಸ್​ ಟಿವಿಯಲ್ಲಿ ಹೊಸದಾಗಿ ಮೂಡಿಬರುತ್ತಿರುವ 'ದ ಬಿಗ್ ಪಿಚ್ಚರ್​' ಕ್ವಿಜ್​ ಶೋನ ಹೋಸ್ಟ್​ ಆಗಿ ರಣವೀರ್​ ಸಿಂಗ್​ ಕಿರುತೆರೆ ಪ್ರವೇಶಿಸಿದ್ದಾರೆ. ಶನಿವಾರ ಆರಂಭವಾದ ಈ ಶೋನ ಪ್ರೋಮೋ ವಿಡಿಯೋದಲ್ಲಿ ರಣವೀರ್​, ಸ್ಟುಡಿಯೋ ಆಡಿಯನ್ಸ್​ ಜೊತೆ ಲೋಕಾಭಿರಾಮವಾಗಿ ಮಾತನಾಡುತ್ತಾ, "ನಿಮಗೆ ಗೊತ್ತಿರುವಂತೆ ನನಗೆ ಮದುವೆಯಾಗಿದೆ. ಕೆಲವೇ ವರ್ಷಗಳಲ್ಲಿ ನಮಗೂ ಮಕ್ಕಳಾಗುತ್ತವೆ" ಎಂದು ನಾಚಿಕೊಂಡು ಹೇಳಿದ್ದಾರೆ.

ಅಷ್ಟೇ ಅಲ್ಲ, "ನಿಮ್ಮ ಭಾಬಿ(ದೀಪಿಕಾ)ಯ ಬೇಬಿ ಫೋಟೋಗಳನ್ನು ನೀವು ನೋಡಬೇಕು. ಎಷ್ಟು ಕ್ಯೂಟ್​ ಬೇಬಿ ಆಗಿದ್ದಳು. ಆ ತರಹದ ಕ್ಯೂಟ್ ಬೇಬಿ ಸಿಕ್ಕರೆ ನನ್ನ ಜೀವನ ಸೆಟ್​ ಆದಂತೆ" ಎಂದಿರುವ ರಣವೀರ್​, ತಾವು ಮಗುವಿನ ಹೆಸರುಗಳ ಪಟ್ಟಿ ಮಾಡುತ್ತಿದ್ದು, ಕ್ವಿಜ್​ ಅಭ್ಯರ್ಥಿ ಹೇಳಿದ 'ಶೌರ್ಯ ವೀರ್​ ಸಿಂಗ್​' ಎಂಬ ಹೆಸರನ್ನು ಆ ಪಟ್ಟಿಗೆ ಸೇರಿಸಿಕೊಳ್ಳುವುದಾಗಿಯೂ ಹೇಳಿದ್ದಾರೆ. ಈ ಬಗ್ಗೆ ದೀಪಿಕಾರ ಅಭಿಪ್ರಾಯ ಏನು ತಿಳಿಯಬೇಕಿದೆ! (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net