ಬೆಂಗಳೂರು:
ಸೆಮಿಕಂಡಕ್ಟರ್ ಕಂಪೆನಿ ಸ್ಥಾಪನೆಗೆ ಸರ್ಕಾರ ಹಲವು ಕ್ರಮ ಕೈಗೊಂಡಿದೆ ಎಂದು ಮೇಲ್ಮನೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.
ಜೆಡಿಎಸ್‌ನ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿ, ಈ ನಿಟ್ಟಿನಲ್ಲಿ ಹಲವು ಕಂಪೆನಿಗಳು ಉತ್ಸುಕವಾಗಿವೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.
ಇನ್ನು ಐಟಿ ಕಂಪೆನಿಗಳಲ್ಲಿ 14 ಗಂಟೆ ಕೆಲಸ ಮಾಡಿಸ್ತೀವಿ ಅನ್ನುವ ಮಾಹಿತಿ ತಪ್ಪು ಸಂದೇಶವಾಗಿದೆ. ಅದು ಸರಿಯಲ್ಲ. ಕೆಲವು ಕಂಪೆನಿಗಳಲ್ಲಿ ಮಾತ್ರ ಅದು ನಡೆಯಲಿದೆ ಎಂದರು.
ಈ ವಿಷಯದಲ್ಲಿ ಕೇಂದ್ರ ಸರ್ಕಾರದ ನೆರವನ್ನ ಸಹ ಕೇಳಿದ್ದೇವೆ. ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಅವರನ್ನ ಭೇಟಿ ಮಾಡಿ ಎಚ್‌ಎಂಟಿ ಕಾರ್ಖಾನೆಯ ಬಗ್ಗೆ ಮಾತುಕತೆ ನಡೆಸಿದ್ದೇನೆ ಎಂದರು.