‘ನಂಬಿಕೆ’ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ

17HDK02
Published on

ಎಚ್.ಡಿ.ಕೋಟೆ: ಅಂತಾರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಕೃಷಿ ಮೇಳದ ಪಾಕ ಸ್ಪರ್ಧೆಯಲ್ಲಿ ತಾಲೂಕಿನ ನಂಬಿಕೆ ಸಿರಿಧಾನ್ಯ ಕಂಪನಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಗೆ ಆಯ್ಕೆಯಾಗಿದೆ.


ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯಡಿ ಅಂತಾರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳದ ಅಂಗವಾಗಿ ಮೈಸೂರಿನಲ್ಲಿ ಕೃಷಿ ಇಲಾಖೆಯಿಂದ ಸಿರಿಧಾನ್ಯ ಪಾಕ ಸ್ಪರ್ಧೆ ಆಯೋಜಿಸಲಾಗಿತ್ತು. ಜಿಲ್ಲಾ ಮಟ್ಟದ ಅನೇಕ ಸಿರಿಧಾನ್ಯ ಕಂಪನಿಗಳು ಭಾಗವಹಿಸಿದ್ದವು. ಇದರಲ್ಲಿ ಪಟ್ಟಣದ ರೈತ ಕುಟುಂಬದವರಾದ ಪದ್ಮಾ ನಾಗರಾಜು ಮತ್ತು ಮಿಲ್ ನಾಗರಾಜು ದಂಪತಿ ನಡೆಸುತ್ತಿರುವ ನಂಬಿಕೆ ಸಿರಿಧಾನ್ಯ ಕಂಪನಿ ಭಾಗವಹಿಸಿತ್ತು.


ಕಂಪನಿಯು ಸಿರಿಧಾನ್ಯದಿಂದ ತಯಾರಿಸಿದ್ದ ಬಾದಾಮಿ ಹಾಲಿಗೆ ಪ್ರಥಮ ಶ್ರೇಣಿಯ ಸಾಧಕ ಎಂದು ಪರಿಗಣಿಸಿ 5 ಸಾವಿರ ರೂ. ನಗದು ಬಹುಮಾನ ನೀಡುವುದರ ಜತೆಗೆ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ.


ತೀರ್ಪುಗಾರರಾಗಿ ಸಿಎಫ್‌ಟಿಆರ್‌ಐ ಅಧಿಕಾರಿ ಬೇಬಿ ಲತಾ, ಮೈಸೂರು ವಿವಿ ಅಧಿಕಾರಿ ವೀಣಾ, ಕೆವಿಕೆ ಅಧಿಕಾರಿ ಜಮುನಾ ಅರಸು, ಸಮಾಜ ಸೇವಕಿ ಲೀಲಾ ಶಿವಕುಮಾರ್, ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್, ಪುರಸಭಾ ಸದಸ್ಯರಾದ ಮಿಲ್ ನಾಗರಾಜು, ಐಡಿಯಾ ವೆಂಕಟೇಶ್, ನಂಜಪ್ಪ, ಚಾಕಹಳ್ಳಿ ಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net