

Young Girl : ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಪೋಸ್ಟ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ವಿಶೇಷ ಕಾರಣಕ್ಕೆ ನೋಡುಗರನ್ನು ಸೆಳೆಯುತ್ತವೆ ಮತ್ತು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ವೈರಲ್ ಆಗಿಬಿಡುತ್ತವೆ. ಆ ಸಾಲಿಗೆ ಈ ಒಂದು ವಿಡಿಯೋ ಸೇರಿಕೊಂಡಿದೆ.
ಸದ್ಯ ವೈರಲ್ ಆಗಿರುವ ವಿಡಿಯೋ ಯುವತಿಯೊಬ್ಬಳಿಗೆ ಸಂಬಂಧಿಸಿದ್ದಾಗಿದೆ. ವಿಡಿಯೋದಲ್ಲಿ ಯುವತಿಯ ವಂಚನೆ ಬಟಾಬಯಲಾಗಿದೆ. ಸಾಮಾನ್ಯವಾಗಿ ಶಾಲಾ ಆಡಳಿತ ಮಂಡಳಿಯ ಅಂಕಪಟ್ಟಿ, ಮೆಮೋ ಹಾಗೂ ಕಚೇರಿಗಳ ಯಾವುದೇ ಸುತ್ತೋಲೆಗಳು ಹಾಗೂ ಪ್ರಮಾಣ ಪತ್ರಗಳು ಸೇರಿದಂತೆ ಇನ್ನಿತರ ದಾಖಲೆಗಳ ಮೇಲೆ ಅಧಿಕ ಮುದ್ರೆ ಹಾಕಿ ವಿತರಿಸಲಾಗುತ್ತದೆ. ಇಲ್ಲೊಬ್ಬ ಯುವತಿ ಅಂಥದ್ದೇ ದಾಖಲೆ ಸೃಷ್ಟಿಸಿದ್ದು, ಆಕೆಯ ಬುದ್ಧಿವಂತಿಕೆಯನ್ನು ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?
ವೈರಲ್ ವಿಡಿಯೋದಲ್ಲಿ ಯುವತಿಯೊಬ್ಬಳು ಕಂಪ್ಯೂಟರ್ ಮುಂದೆ ಕುಳಿತಿದ್ದಾಳೆ. ಈ ವೇಳೆ ಕಂಪ್ಯೂಟರ್ ಪರದೆಯಲ್ಲಿ ಡಾಕ್ಯುಮೆಂಟ್ ಒಂದು ತೆರೆದಿರುತ್ತದೆ. ಆದರೆ ಆ ಡಾಕ್ಯುಮೆಂಟ್‌ನಲ್ಲಿ ಯಾವುದೇ ಅಧಿಕೃತ ಮುದ್ರೆ ಇಲ್ಲ. ಆದರೆ, ಆ ಡಾಕ್ಯುಮೆಂಟ್ಗೆ ಯುವತಿಯು ಅನುಮೋದನೆಯ ಮುದ್ರೆಯನ್ನು ಅಂಟಿಸಿ, ತನ್ನ ಜಾಣ್ಮೆ ಪ್ರದರ್ಶಿಸುತ್ತಾಳೆ. ಕೈಯಲ್ಲಿದ್ದ ಸ್ಟಾಂಪ್ ಅನ್ನು ತೆಗೆದು ಕಂಪ್ಯೂಟರ್ ಸ್ಕ್ರೀನ್ಗೆ ಅಂಟಿಸಿ ತನ್ನ ಮೊಬೈಲ್ನಿಂದ ಫೋಟೋ ತೆಗೆಯುತ್ತಾಳೆ.
ಡಾಕ್ಯುಮೆಂಟ್ಗೆ ಮುದ್ರೆ ಹಾಕಿದ ಬಳಿಕ ಒರಿಜಿನಲ್ ಡಾಕ್ಯುಮೆಂಟ್ ರೀತಿಯಲ್ಲೇ ಕಾಣುತ್ತದೆ. ಇದು ವಂಚನೆಯಾದರು ಕೂಡ ಯುವತಿಯ ಬುದ್ಧಿವಂತಿಕೆ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು @just_crazy_thingss ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈವರೆಗೂ 21 ಸಾವಿರಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ, ನೂರಾರು ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ.
ವಿಡಿಯೋ ನೋಡಿದ ಕೆಲ ನೆಟ್ಟಿಗರು ಆಕೆಯ ಟ್ರಿಕ್ ಚೆನ್ನಾಗಿದೆ ಎಂದಿದ್ದಾರೆ. ಕೆಲವರು ಆಕೆಯನ್ನು ಬುದ್ಧಿವಂತೆ ಎಂದು ಹೊಗಳಿದರೆ, ಇನ್ನು ಕೆಲವರು ಇದು ಹಾಸ್ಯಾಸ್ಪದ ಎಂದಿದ್ದಾರೆ. ಇದು ಬುದ್ಧಿವಂತಿಕೆ ಅಲ್ಲವೇ ಅಲ್ಲ, ಇದು ಸಂಪೂರ್ಣ ಹಗರಣ ಎಂದು ಕೆಲವರು ಟೀಕಾ ಪ್ರಹಾರ ನಡೆಸಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)