ದೆಹಲಿ ಹೈಕೋರ್ಟ್‌ಗೆ ಬಾಂಬ್ ಬೆದರಿಕೆ! ಇ-ಮೇಲ್​ ಮೂಲಕ ಎಚ್ಚರಿಕೆ ಸಂದೇಶ

Untitled design (91)
Published on

ಹೊಸದಿಲ್ಲಿ: ನ್ಯಾಯಾಲಯದ ಆವರಣಕ್ಕೆ ಬಾಂಬ್ ಹಾಕುವುದಾಗಿ ಬೆದರಿಕೆಯ ಇ-ಮೇಲ್ ಬಂದ ಹಿನ್ನೆಲೆಯಲ್ಲಿ ಗುರುವಾರ ದೆಹಲಿ ಹೈಕೋರ್ಟ್‌ನಲ್ಲಿ ಭಾರೀ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕಿಡಿಗೇಡಿಗಳು ದೊಡ್ಡ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದು, ಮಾಹಿತಿ ತಿಳಿದ ಅಧಿಕಾರಿಗಳು ಕೂಡಲೇ ಹೆಚ್ಚಿನ ಭದ್ರತೆ ನಿಯೋಜಿಸಿದ್ದಾರೆ.

ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಬಾಂಬ್ ಬೆದರಿಕೆಯ ಇ-ಮೇಲ್​ ಸ್ವೀಕರಿಸಿದ್ದಾರೆ. ಫೆಬ್ರವರಿ 15ರಂದು ನಾನು ನಿಮ್ಮನ್ನು ಬಾಂಬ್‌ನಿಂದ ಸ್ಫೋಟಿಸುತ್ತೇನೆ. ಈ ಸ್ಫೋಟವು ದೆಹಲಿಯಲ್ಲಿ ದೊಡ್ಡದಾಗಿರಲಿದೆ. ಸಾಧ್ಯವಾದಷ್ಟು ಭದ್ರತೆಯನ್ನು ನಿಯೋಜಿಸಿ ಮತ್ತು ಎಲ್ಲಾ ಮಂತ್ರಿಗಳನ್ನು ಕರೆಸಿ, ನಾವು ನಿಮ್ಮನ್ನು ಒಟ್ಟಿಗೆ ಸ್ಫೋಟಿಸುತ್ತೇವೆ" ಎಂದು ಇ-ಮೇಲ್​ನಲ್ಲಿ ಉಲ್ಲೇಖಿಸಲಾಗಿದೆ.

ಬಿಹಾರ ಡಿಜಿಪಿಗೂ ಕೂಡ ವಾಟ್ಸಾಪ್ ಸಂದೇಶ ಮತ್ತು ಆಡಿಯೊ ಕ್ಲಿಪ್‌ಗಳ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net