ಇಲ್ಲಿದ್ದಾನೆ ತಲೆ ಇಲ್ಲದ ಸೆಕ್ಯೂರಿಟಿ ಗಾರ್ಡ್​: ಈ ಫೋಟೋ ನೋಡಿದ್ರೆ ಬೆಚ್ಚಿಬೀಳ್ತೀರಾ!

Security gaurd
Published on

ನವದೆಹಲಿ: ಕಣ್ಣಿನಿಂದ ನೋಡಿದರೂ ನಂಬಲು ಸಾಧ್ಯವಾಗದ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ನಿಜವಾಗಿಯೂ ಈ ಮನುಷ್ಯನಿಗೆ ತಲೆ ಇಲ್ಲವಾ ಎಂಬ ಪ್ರಶ್ನೆ ಮೂಡುವುದಂತೂ ಸತ್ಯ.

ಈ ಚಿತ್ರ ಇದೀಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅಂಗಡಿಯೊಂದರ ಮುಂಭಾಗ ಕುಳಿತಿರುವ ಸೆಕ್ಯೂರಿಟಿಯ ತಲೆ ಎಲ್ಲೆಗ ಹೋಯ್ತು? ಅರೆ... ನಿಜವಾಗಿಯೂ ಹೀಗಿರಲು ಹೇಗೆ ಸಾಧ್ಯ ಎಂದು ಹಲವರು ತಮ್ಮ ಅನಿಸಿಕೆಯನ್ನು ಹೇಳಿಕೊಳ್ಳುತ್ತಿದ್ದಾರೆ.

ಆದರೆ ಈ ಚಿತ್ರ ನೋಡುವವರಿಗೆ ಒಂದೆಡೆ ಅಚ್ಚರಿ ಆದರೆ ಮತ್ತೊಂದೆಡೆ ಭಯವೂ ಆಗುತ್ತದೆ. ಈ ಚಿತ್ರ ಹೇಳುವಂತೆ ಈ ವ್ಯಕ್ತಿಗೆ ತಲೆ ಇಲ್ಲ ಎಂದೆನಿಸುವುದು ಸತ್ಯ. ಆದರೆ ಸತ್ಯವೇ ಬೇರೆ ಇದೆ. ಚಿತ್ರಗಳಲ್ಲಿ ಕಾಣುವಂತೆ ಈ ವ್ಯಕ್ತಿ ತಲೆ ಇಲ್ಲ ಅಂದುಕೊಳ್ಳಬೇಡಿ. ಈ ವ್ಯಕ್ತಿಗೂ ತಲೆ ಇದೆ.

ಅಂಗಡಿಯ ಮುಂದೆ ಕರ್ತವ್ಯದಲ್ಲಿರುವ ಈತ ತುಂಬಾ ಆಯಾಸಗೊಂಡಿದ್ದಾನೆ. ಇದರಿಂದ ತುಂಬಾ ನಿದ್ದೆಯಲ್ಲಿರುವ ಈತ ಕತ್ತನ್ನು ಹಿಂದೆ ಮಾಡಿಕೊಂಡಿದ್ದಾನೆ. ಈ ಚಿತ್ರವನ್ನು ಒಬ್ಬ ವ್ಯಕ್ತಿ ತನ್ನ ಮೊಬೈಲ್​​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಚಿತ್ರ ಭಾರೀ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net