ಅವಧಿ ಮುನ್ನವೇ ಮಾನ್ಸೂನ್​ ಪ್ರವೇಶ, ಈ ದಿನಾಂಕದಿಂದ ಭಾರೀ ಮಳೆಯಾಗಲಿದೆ: ಹವಾಮಾನ ಇಲಾಖೆ ಮುನ್ಸೂಚನೆ

Wheatherforcost
Published on

ನವದೆಹಲಿ: ಈ ವರ್ಷ ಮಾನ್ಸೂನ್​ ಅವಧಿಗೂ ಮುನ್ನವೇ ಪ್ರವೇಶಿಸಲಿದ್ದು, ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಏಪ್ರಿಲ್​ ತಿಂಗಳಲ್ಲಿ ದಾಖಲೆಯ ತಾಪಮಾನದ ನಡುವೆ ಇದೀಗ ಮಾನ್ಸೂನ್​ ಮಳೆಯಿಂದಾಗಿ ತಾಪಮಾನ ಇಳಿಕೆಯಾಗಲಿದ್ದು, ದೇಶದ ಎಲ್ಲಾ ಭಾಗಗಳಲ್ಲೂ ಈ ಬಾರಿ ಮಾನ್ಸೂನ್​ ಮಳೆ ಬೇಗವೇ ಬರಲಿದೆ.

ಕೆಲವೆಡೆ ಅಕಾಲಿಕ ಮಳೆ ಸುರಿಯತ್ತಿದ್ದು, ಇದರಿಂದ ವಾತಾವರಣವನ್ನು ತಂಪು ಮಾಡಿದೆಯಾದರೂ, ಮೇ ತಿಂಗಳಾರ್ಧದಲ್ಲಿ ಸುರಿಯುವ ಮಳೆ ಭಾರೀ ಅನುಕೂಲಕರವಾಗಲಿದೆ. ಅಸನಿ ಚಂಡಮಾರುತದಿಂದಾಗಿ ಪೂರ್ವ ಕರಾವಳಿಯಲ್ಲಿ ಈಗಾಗಲೇ ಮಳೆಯಾಗುತ್ತಿದ್ದು, ಈ ನಡುವೆ ಮಾನ್ಸೂನ್​ ಪ್ರವೇಶದಿಂದ ವಾರಗಳವರೆಗೆ ನಿರಂತರ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪಗಳ ಮೂಲಕ ಈ ಬಾರಿ ಮಾನ್ಸೂನ್​ ಮಳೆ ಬೇಗ ಬರಲಿದ್ದು, ಮೇ 15 ರಂದು ಮೊದಲ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.

ಮಾನ್ಸೂನ್​ ಮಳೆಯಿಂದಾಗಿ ದೇಶಾದ್ಯಂತ ತಾಪಮಾನ ಕಡಿಮೆಯಾಗಲಿದ್ದು, ದೇಶದ ವಿವಿಧ ಭಾಗಗಳಲ್ಲಿ ಮೇ 14 ರಿಂದ 16 ರಂದು ಭಾರೀ ಮಳೆಯಾಗಲಿದೆ. ಇನ್ನು ಈ ವರ್ಷ ಮಾನ್ಸೂನ್​ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net