ಹಾಡಹಗಲೇ ರಸ್ತೆಬದಿ ನಿಂತಿದ್ದ ಕಾರಿನ ಗಾಜು ಒಡೆದು ಲಕ್ಷಾಂತರ ರೂ.ದೋಚಿದ ಕಳ್ಳರು

Car kalavu
Published on

ಆನೇಕಲ್: ಕಾರಿನ ಗ್ಲಾಸ್ ಒಡೆದು ಲಕ್ಷಾಂತರ ರೂಪಾಯಿ ಹಣ ಕಳ್ಳತನ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್​ನಲ್ಲಿ ನಡೆದಿದೆ.

ಆನೇಕಲ್ ತಾಲೂಕಿನ ದೊಡ್ಡಹಾಗಡೆ ಗ್ರಾಮದ ಮಂಜುನಾಥ್ ಎಂಬುವವರಿಗೆ ಸೇರಿದ ಲಕ್ಷಾಂತರ ಹಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ.

ಚಂದಾಪುರದ ಸ್ವಾಮಿ ವಿವೇಕಾನಂದ ಕಾಲೇಜು ಮುಂಭಾಗ ಕಳ್ಳತನವಾಗಿದ್ದು, ಬ್ಯಾಂಕಿಗೆ ಹಣ ಕಟ್ಟಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಮಾರ್ಗ ಮಧ್ಯೆ ರಸ್ತೆಯಲ್ಲಿ ಕಾರು ನಿಲ್ಲಿಸಿ ಕಾಲೇಜಿನ ಒಳಗೆ ತೆರಳಿದ್ದ ವೇಳೆ ಕಳ್ಳರು ಕೈ ಚಳಕ ತೋರಿದ್ದಾರೆ.

ಹಿಂಬದಿ ಸೀಟಿನಲ್ಲಿ 5 ಲಕ್ಷ ರೂ. ಇಟ್ಟಿದ್ದರು. ಕಳ್ಳರು ಕಾರು ಹಿಂಬದಿಯ ಗಾಜನ್ನು ಒಡೆದು, ಹಣವಿದ್ದ ಬ್ಯಾಗ್​ ಹೊತ್ತು ಪರಾರಿಯಾಗಿದ್ದಾರೆ. ಈ ಬಗ್ಗೆ ಸೂರ್ಯನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net